ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬಕ್ಕೆ (Makar Sankranti) ಬಹಳಷ್ಟು ಮಹತ್ವ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ಪೂಜೆ, ಪವಿತ್ರ ಸ್ನಾನಗಳನ್ನು ಮಾಡುವ ಮೂಲಕ, ಎಳ್ಳು-ಬೆಲ್ಲ ಸೇವಿಸಿ ಮಕರ ಸಂಕ್ರಾಂತಿ ಆಚರಿಸುತ್ತಾರೆ. ಕರ್ನಾಟಕಕ್ಕೆ (Karnataka) ಮಕರ ಸಂಕ್ರಾಂತಿ ಹೇಗೋ, ಅದೇ ರೀತಿ ಬೇರೆ ಬೇರೆ ರಾಜ್ಯಗಳಿಗೆ ಅದರದೇ ಆದ ಆಚರಣೆಗಳಿಗೆ, ವಿಶೇಷ ಹೆಸರುಗಳಿವೆ. ಇನ್ನು ಹಿಂದೂಗಳ ಪವಿತ್ರ ಆಚರಣೆಗಳಲ್ಲಿ ಇದೂ ಒಂದಾಗಿದೆ. ಪ್ರತೀ ವರ್ಷ ಮಕರ ಸಂಕ್ರಾಂತಿ ಹಬ್ಬಕ್ಕೆ ದೇಶದೆಲ್ಲೆಡೆ ಶಾಲಾ-ಕಾಲೇಜುಗಳಿಗೆ, ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ (Bank Holidays) ಘೋಷಿಸಲಾಗುತ್ತದೆ.

ಅದೇ ರೀತಿ 2026ರಲ್ಲೂ ಮಕರ ಸಂಕ್ರಾಂತಿ ಪ್ರಯುಕ್ತ ಸಾರ್ವತ್ರಿಕವಾಗಿ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ರೆ ಈ ಬಾರಿ ಕೆಲವು ರಾಜ್ಯಗಳಲ್ಲಿ ಜನವರಿ 14 ರಂದು ಬ್ಯಾಂಕ್‌ಗಳಿಗೆ ರಜೆ ನೀಡಿದ್ರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಜನವರಿ 15 ರಂದು ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಿದ್ರೆ ಕರ್ನಾಟಕದಲ್ಲಿ ಯಾವಾಗ ಬ್ಯಾಂಕ್‌ಗಳು ಮುಚ್ಚಿರುತ್ತವೆ ಗೊತ್ತಾ?
ಗ್ರಾಹಕರೇ ಇಲ್ಲಿ ಗಮನಿಸಿ
ಮಕರ ಸಂಕ್ರಾಂತಿಯಂದೇ ನೀವೇನಾದರೂ ಬ್ಯಾಂಕ್‌ಗೆ ಹೋಗಬೇಕು, ಬ್ಯಾಂಕ್ ಸಂಬಂಧಿತ ಏನಾದರೂ ಕೆಲಸ ಪೂರ್ಣಗೊಳಿಸಬೇಕು ಎಂದು ಪ್ಲಾನ್ ಮಾಡಿದ್ದರೆ, ಮನೆಯಿಂದ ಹೊರಡೋ ಮುನ್ನ ಈ ಸುದ್ದಿ ಓದಿ. ಪ್ರತೀ ವರ್ಷವೂ ಮಕರ ಸಂಕ್ರಾಂತಿ ಬಂದ್ರೆ ಸಾಕು, ಬ್ಯಾಂಕ್ ರಜಾದಿನಗಳ ಬಗ್ಗೆ ಜನ ಗೊಂದಲಕ್ಕೊಳಗಾಗುತ್ತಾರೆ. ಏಕೆಂದರೆ ಮಕರ ಸಂಕ್ರಾಂತಿಯಂದು ಕೆಲವು ಕಚೇರಿಗಳು ತೆರೆದಿದ್ದರೆ, ಇನ್ನೂ ಕೆಲವು ಆಫೀಸ್‌ಗಳು ಮುಚ್ಚಿರುತ್ತದೆ. ವಿಶೇಷವಾಗಿ ಬ್ಯಾಂಕ್‌ಗಳು ಸಹ ಈ ಸಾಲಿಗೆ ಸೇರಿದೆ. ಇದೀಗ ಜನವರಿ 14ರ ಬಗ್ಗೆಯೂ ಇದೇ ಪ್ರಶ್ನೆ ಜನರಲ್ಲಿ ಮೂಡಿದೆ.
ಕರ್ನಾಟಕದಲ್ಲಿ ಈ ದಿನ ಬ್ಯಾಂಕ್ ಬಂದ್!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯ ಪ್ರಕಾರ, ಜನವರಿ 14 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುವುದಿಲ್ಲ. ಏಕೆಂದರೆ ಈ ದಿನ ಕೆಲವು ರಾಜ್ಯದಲ್ಲಿ ಮಾತ್ರ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಅಂದರೆ ಜನವರಿ 14 ರಂದು ಗುಜರಾತ್, ಒಡಿಶಾ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜಾದಿನವಿರುತ್ತದೆ. ಆದ್ದರಿಂದ ಈ ರಾಜ್ಯಗಳಲ್ಲಿ ಬುಧವಾರ ಒಂದು ದಿನ ಎಲ್ಲಾ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಆದ್ದರಿಂದ ಬ್ಯಾಂಕ್ ಸಂಬಂಧಿತ ಯಾವುದೇ ವಹಿವಾಟುಗಳನ್ನು ಆನ್‌ಲೈನ್ ಮೂಲಕ ಮಾಡಬಹುದು. ಇನ್ನು ಕರ್ನಾಟಕದಲ್ಲಿ ಜನವರಿ 15 ರಂದು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ. ಈ ದಿನ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಸಿಕ್ಕಿಂ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.
ಜನರಿಗೆ ಸಲಹೆ:
ಇನ್ನು ಈ ರಜಾ ದಿನಗಳಲ್ಲಿ ಬ್ಯಾಂಕುಗಳು ಮಾತ್ರ ಮುಚ್ಚಿರುತ್ತದೆ. ಆದ್ರೆ ಬ್ಯಾಂಕ್ ಹೋಗದೆಯೇ ಯುಪಿಐ, ನೆಟ್ ಬ್ಯಾಂಕಿಂಗಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳು ಮತ್ತು ಆನ್‌ಲೈನ್ ಮೂಲಕ ಬ್ಯಾಂಕಿಂಗ್ ಸಂಬಂಧಿತ ಡಿಜಿಟಲ್ ಸೇವೆ ಪಡೆಯಬಹುದು. ಆದತೆ ಯಾವುದೇ ಸಾಲ ಸಂಬಂಧಿತ, ಪಾಸ್‌ಬುಕ್ ಸಂಬಂಧಿತ ಬದಲಾವಣೆಗಳಿಗೆ ಬ್ಯಾಂಕ್‌ಗೆ ಹೋಗಲೇಬೇಕಾಗುತ್ತದೆ.


Click it and Unblock the Notifications