ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ. ನವೆಂಬರ್ 2025 ರಲ್ಲಿ ಬಹುತೇಕ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಗ್ರಾಹಕರು ತಮ್ ಅಗತ್ಯ ಕೆಲಸಗಳನ್ನು ಆದಷ್ಟು ಬೇಗ, ಬ್ಯಾಂಕ್ ಲಭ್ಯವಿದ್ದಾಗ ಮಾಡಿ ಮುಗಿಸಿದರೆ ಉತ್ತಮ. ಇನ್ನು ಬ್ಯಾಂಕ್‌ಗಳಿಗೆ ರಜೆ (Bank Holidays) ಯಾವಾಗ ಎಂಬುದನ್ನು ಆರ್‌ಬಿಐ ಬಿಡುಗಡೆ ಮಾಡಿದ ರಜಾಪಟ್ಟಿಯಲ್ಲಿ ಗಮನಿಸಬೇಕು.

ವರದಿ ಪ್ರಕಾರ, ನವೆಂಬರ್ 2025 ರಲ್ಲಿ, ಒಂದೇ ತಿಂಗಳಲ್ಲಿ ಭಾರತದ ಹಲವು ಕಡೆ ಬ್ಯಾಂಕುಗಳು 9 ರಿಂದ 10 ದಿನಗಳವರೆಗೆ ಮುಚ್ಚಿರುತ್ತದೆ ಎನ್ನಲಾಗಿದೆ. ಇನ್ನು ಈ ರಜಾ ಪಟ್ಟಿಯಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು, ಭಾನುವಾರ ಮತ್ತು ಸಾರ್ವತ್ರಿಕ ರಜಾದಿನಗಳು ಸೇರಿವೆ.
ವಿಶೇಷವಾಗಿ ಆಯಾ ರಾಜ್ಯದ ಆಚರಣೆಗಳಿಗನುಗುಣವಾಗಿ, ಅಂದರೆ ಕನ್ನಡ ರಾಜ್ಯೋತ್ಸವ, ಗುರು ನಾನಕ್ ಜಯಂತಿ ಮತ್ತು ವಂಗಲಾ ಹಬ್ಬ ಹೀಗೆ ಇನ್ನಿತರ ಆಚರಣೆಗಳಿಗೆ ಬ್ಯಾಂಕ್ ರಜೆ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು, ಎಟಿಎಂ ಗಳು ಎಂದಿನಂತೆ ಲಭ್ಯವಿರುತ್ತವೆ. ಆದ್ದರಿಂದ ಬ್ಯಾಂಕಿಂಗ್ ಕೆಲಸಗಳಿಗೆ ಬ್ರಾಂಚ್‌ಗೆ ಹೋಗುವ ಮುನ್ನ ರಜಾ ವೇಳಾಪಟ್ಟಿಯನ್ನು ಗಮನಿಸುವುದು ಉತ್ತಮ.
ನವೆಂಬರ್ 2025 ರಲ್ಲಿ ಪ್ರಮುಖ ಬ್ಯಾಂಕ್ ರಜಾದಿನಗಳು:
- ನವೆಂಬರ್ 1 (ಶನಿವಾರ): ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕದಲ್ಲಿ ರಜೆ ಇರಲಿದೆ. ಇನ್ನು ಇಗಾಸ್-ಬಾಗ್ವಾಲ್ ಕಾರಣ ಡೆಹ್ರಾಡೂನ್‌ನಲ್ಲಿ ಮಾತ್ರ ರಜೆ ಇರಲಿದೆ.
- ನವೆಂಬರ್ 2 (ಭಾನುವಾರ): ದೇಶಾದ್ಯಂತ ರಜೆ ಇರಲಿದೆ.
- ನವೆಂಬರ್ 5 (ಬುಧವಾರ): ಗುರು ನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮಾ ಪ್ರಯುಕ್ತ ಭಾರತದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
- ನವೆಂಬರ್ 7 (ಶುಕ್ರವಾರ): ವಂಗಲಾ ಉತ್ಸವದ ನಿಮಿತ್ತ ಶಿಲ್ಲಾಂಗ್‌ನಲ್ಲಿ ಸಾಮಾನ್ಯವಾಗಿ ರಜೆ ಇರಲಿದೆ.
- ನವೆಂಬರ್ 8 (ಶನಿವಾರ): ಎರಡನೇ ಶನಿವಾರ. ಈ ದಿನ ದೇಶಾದ್ಯಂತ ರಜೆ. ಅಲ್ಲದೇ ಕನಕದಾಸ ಜಯಂತಿಯೂ ನವೆಂಬರ್ 8 ರಂದು ಇರಲಿದ್ದು, ಈ ದಿನ ಬೆಂಗಳೂರಿನಲ್ಲೂ ಬ್ಯಾಂಕ್‌ಗಳಿಗೆ ರಜೆ.
- ನವೆಂಬರ್ 9, 16, 23 ಮತ್ತು 30 (ಭಾನುವಾರಗಳು): ದೇಶಾದ್ಯಂತ ರಜೆ ಇರುತ್ತವೆ.
- ನವೆಂಬರ್ 22 (ಶನಿವಾರ): ನಾಲ್ಕನೇ ಶನಿವಾರ - ದೇಶಾದ್ಯಂತ ರಜೆ.
ಸಾಲು ಸಾಲು ರಜೆ, ಗ್ರಾಹಕರ ಮೇಲೆ ಪರಿಣಾಮ:
ಇನ್ನು ನವೆಂಬರ್ ಒಂದೇ ತಿಂಗಳಲ್ಲಿ 9 ರಿಂದ 10 ದಿನ ಬ್ಯಾಂಕ್ ಮುಚ್ಚಿರುವುದರಿಂದ ಗ್ರಾಹಕರಿಗೆ ವಹಿವಾಟು ನಡೆಸಲು ಕಷ್ಟವಾಗಲಿದೆ. ಅದಕ್ಕಾಗಿ ಗ್ರಾಹಕರು ಬ್ಯಾಂಕಿನ ಕೆಲಸ ಮೊದಲೇ ಮಾಡಿ ಎಂದು ಸಲಹೆ ನೀಡಲಾಗಿದೆ. ಇನ್ನು ಚೆಕ್, ಪಾಸ್‌ಬುಕ್ ಅಪ್ಡೇಟ್, ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಕೆಲಸಗಳು ಬ್ಯಾಂಕ್ ರಜಾ ಇರುವ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ರಜಾ ದಿನಗಳನ್ನು ಮೊದಲೇ ತಿಳಿದುಕೊಂಡು, ಅದಕ್ಕಿಂತ ಮೊದಲೇ ಈ ಕೆಲಸಗಳನ್ನು ಮುಗಿಸಿಕೊಳ್ಳಬೇಕು.
ಇನ್ನು ಬ್ಯಾಂಕಿಗೆ ತೆರಳುವುದಕ್ಕಿಂತ ಡಿಜಿಟಲ್ ಮೂಲಕ ಕೆಲಸ ಮಾಡಿದರೆ ಬೆಸ್ಟ್. ಏಕೆಂದರೆ ಬ್ಯಾಂಕ್ ರಜಾ ಇದ್ದರೂ, ನೀವು ಆನ್‌ಲೈನ್ ವಹಿವಾಟುಗಳನ್ನು ನಡೆಸಬಹುದು. ಜೊತೆಗೆ ಎಟಿಎಂಗಳು ಕೂಡಾ ಕಾರ್ಯನಿರ್ವಹಿಸುತ್ತಿರುತ್ತದೆ.


Click it and Unblock the Notifications