ಮುಂದಿನ ವಾರ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳು ಇದ್ಯಾ..? ಹಾಗಿದ್ದರೆ ಬ್ಯಾಂಕಿಗೆ ಬೇಟಿ ನೀಡುವ ಮುನ್ನ ಬ್ಯಾಕ್ ಓಪನ್ ಇರುತ್ತೋ ಅಥವಾ ಇಲ್ಲವೋ ಎಂಬುವುದನ್ನು ತಿಳಿದುಕೊಳ್ಳವುದು ತುಂಬಾನೇ ಮುಖ್ಯ. ಹಾಗಿದ್ದರೆ ಮುಂದಿನ ವಾರ ಎಷ್ಟು ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಮುಂದಿನ ವಾರ 6, 12, 13 ರಂದು ಮೂರು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆರ್‌ಬಿಐ ರಜೆ ಕ್ಯಾಲೆಂಡರ್ ಪ್ರಕಾರ,ಭಾರತದಾದ್ಯಂತ ಬ್ಯಾಂಕುಗಳು ಮುಂದಿನ ವಾರ ಶನಿವಾರ ಮತ್ತು ಭಾನುವಾರ ಸಾಪ್ತಾಹಿಕ ರಜೆಯ ಕಾರಣದಿಂದ ಬಂದ್ ಆಗಿರುತ್ತೇವೆ.

ಭಾರತದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆಯನ್ನು ನೀಡಲಾಗಿದೆ. ಎಲ್ಲಾ ಭಾನುವಾರಗಳು ಸಾಪ್ತಾಹಿಕ ರಜೆಯಾಗಿರುತ್ತವೆ. ಒಟ್ಟು ಜುಲೈ ತಿಂಗಳಲ್ಲಿ ಏಳು ದಿನಗಳ ಸಾಪ್ತಾಹಿಕ ರಜೆಯನ್ನು ಹೋಂದಿದೆ. ಈ ದಿನಗಳು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ವ್ಯವಹಾರಗಳು ಸಹ ನಡೆಯುವುದಿಲ್ಲ.
ರಾಷ್ಟ್ರೀಯ ಮತ್ತು ಸ್ಥಳೀಯ ಆಚರಣೆಗಳು, ಧಾರ್ಮಿಕ ಆಚರಣೆಗಳು ಮತ್ತು ಇತರ ಸಾಂಸ್ಕೃತಿಕ ಆಚರಣೆಗಳನ್ನು ಗಣನೆಗೆ ತೆಗೆದುಕೊಂಡು ಆರ್‌ಬಿಐ ಮತ್ತು ರಾಜ್ಯ ಸರ್ಕಾರಗಳು ಬ್ಯಾಂಕುಗಳಿಗೆ ರಜಾದಿನಗಳ ಪಟ್ಟಿಯನ್ನು ರಚನೆ ಮಾಡುತ್ತದೆ.
ಮುಂದಿನ ವಾರ ಬ್ಯಾಂಕ್ ರಜಾದಿನಗಳು ಯಾವುವು..?
ಜುಲೈ 6 ಭಾನುವಾರ: ವಾರದ ರಜೆ ಇರುವ ಕಾರಣವಾಗಿ ಬ್ಯಾಂಕ್‌ಗಳು ದೇಶಾದ್ಯಂತ ರಜೆ ಇರುತ್ತದೆ.
ಜುಲೈ 12 ಶನಿವಾರ: ಜುಲೈ 12 ಎರಡನೇ ಶನಿವಾರವಾಗಿರುವ ಕಾರಣದಿಂದ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜುಲೈ 13 ಭಾನುವಾರ: ವಾರದ ರಜೆಯ ಕಾರಣದಿಂದಾಗಿ ಬ್ಯಾಂಕ್‌ಗಳು ದೇಶಾದ್ಯಂತ ಕ್ಲೋಸ್ ಇರುತ್ತದೆ.
ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ದೇಶದ ಇತರ ರಾಜ್ಯಗಳಲ್ಲಿನ ಬ್ಯಾಂಕ್ ಶಾಖೆಗಳು ಆ ದಿನಗಳಲ್ಲಿ ತೆರೆದಿರುತ್ತವೆ.
ಬ್ಯಾಂಕ್ ರಜೆದಿನದಂದು ಯಾವೆಲ್ಲಾ ಸೇವೆಗಳು ಲಭ್ಯ..?
ಈ ರಜಾದಿನಗಳ ಸಮಯದಲ್ಲಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕ ಜನರಿಗೆ ಸೇವೆಗಳನ್ನ ನೀಡಲಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಬ್ಯಾಂಕಿಂಗ್ ಸೇವೆಗಳನ್ನ ಮಾಡಿಕೊಳ್ಳಬಹುದು. ಅಲ್ಲದೆ ರಜಾದಿನಗಳಲ್ಲಿ ಸಹಜವಾಗಿ ಎಟಿಎಂಗಳು ತೆರೆದಿರುತ್ತವೆ. ನಿಮಗೆ ತ್ವರಿತ ಸೇವೆಗಳು ಬೇಕಿದ್ದಲ್ಲಿ ನೆಟ್‌ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನೀವು ನಿಮ್ಮ ಹಣವನ್ನ ಪಡೆಯಬಹುದು ಅಥವಾ ಕಳುಹಿಸಬಹುದು.
ಜುಲೈ 2025 ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ಜುಲೈ 3 ರಂದು ಗುರುವಾರ: ಖರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಕ್ಲೋಸ್ ಆಗಿರುತ್ತಾವೆ.ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 5 ರಂದು ಶನಿವಾರ: ಗುರು ಹರ್ಬಿಂದ ಜಿ ಜಯಂತಿಯಂದು ಜಮ್ಮು ಮತ್ತು ಕಾಶ್ಮೀರ ಮುಚ್ಚಲ್ಪಡುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಬ್ಯಾಂಕ್ ಸೇವೆಗಳು ಲಾಭ್ಯವಿರುತ್ತದೆ.
ಜುಲೈ 6 ರಂದು ಭಾನುವಾರ: ದೇಶಾದ್ಯಂತ ಭಾನುವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜುಲೈ 12ರಂದು ಶನಿವಾರ: ಎರಡನೇ ಶನಿವಾರ ದೇಶಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರುತ್ತದೆ.
ಜುಲೈ 13ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 14 ರಂದು ಸೋಮವಾರ: ಬೆಹ್ ಡೆಂಖ್ಲಾಮ್ ಹಬ್ಬದ ಸಂದರ್ಭದಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 16 ರಂದು ಬುಧವಾರ: ಹರೇಲಾ ಹಬ್ಬದ ಸಂದರ್ಭದಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 17 ರಂದು ಗುರುವಾರ: ಯು ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಶಿಲ್ಲಾಂಗ್, ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿಯೂ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ.
ಜುಲೈ 19ರಂದು ಶನಿವಾರ: ಕೇರ್ ಪೂಜೆಯ ಸಂದರ್ಭದಲ್ಲಿ ತ್ರಿಪುರಾದ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಜುಲೈ 20 ರಂದು ಭಾನುವಾರ: ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 26 ರಂದು ಶನಿವಾರ: ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 27 ರಂದು ಭಾನುವಾರ: ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 28 ರಂದು ಸೋಮವಾರ: ಡ್ರುಕ್ಪಾ ತ್ಶೆ-ಜಿ ಸಂದರ್ಭದಲ್ಲಿ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಒಟ್ಟು ಜುಲೈ ತಿಂಗಳಲ್ಲಿ 13 ದಿನಗಳ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications