ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಕೆಲವೇ ದಿನಗಳು ಉಳಿದಿವೆ. ಆರ್ ಬಿಐ ಹೊಸ ನವೆಂಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ನವೆಂಬರ್ ತಿಂಗಳಿನಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲಿವೆ. ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ. ಹಾಗಾದರೆ ಯಾವ ದಿನಾಂಕದಂದು ಬ್ಯಾಂಕ್ ರಜೆ ಇರಲಿದೆ ಎಂದು ತಿಳಿಯೋಣ.
ನವೆಂಬರ್‌ನಲ್ಲಿ ಈ ದಿನಗಳಲ್ಲಿ ಬ್ಯಾಂಕ್ ರಜಾದಿನಗಳು ಇರುತ್ತವೆ...
ದೀಪಾವಳಿ ಅಮವಾಸ್ಯೆ ಮತ್ತು ಕನ್ನಡ ರಾಜ್ಯೋತ್ಸವದ ಕಾರಣ ನವೆಂಬರ್ 1 ರಂದು ಕರ್ನಾಟಕದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ. ಇದರ ನಂತರ ದೀಪಾವಳಿ (ಬಲಿ ಪ್ರತಿಪ್ರದ) ಕಾರಣ ನವೆಂಬರ್ 2 ರಂದು ಬ್ಯಾಂಕುಗಳು ಕ್ಲೋಸ್ ಆಗಿರುತ್ತವೆ. ನಂತರ ನವೆಂಬರ್ 3 ರಂದು ಭಾನುವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹೀಗೆ ತಿಂಗಳ ಆರಂಭದಲ್ಲಿ ಸತತ 3 ದಿನ ಬ್ಯಾಂಕ್ ರಜೆ ಇರುತ್ತದೆ.

ನವೆಂಬರ್ 7 ರಂದು ಛತ್ ಪೂಜೆ ಮತ್ತು ಸಂಜೆ ಅರ್ಘ್ಯಕ್ಕಾಗಿ ರಾಂಚಿ ಮತ್ತು ಪಾಟ್ನಾದಲ್ಲಿ ಬ್ಯಾಂಕುಗಳು ಕ್ಲೋಸ್ ಆಗಿರುತ್ತದೆ. ನವೆಂಬರ್ 8 ರಂದು ಮೇಘಾಲಯದಲ್ಲಿ ವೆಂಗಲಾ ಮತ್ತು ಛತ್ ಪೂಜೆ ಕಾರಣ ರಾಂಚಿ ಮತ್ತು ಪಾಟ್ನಾದಲ್ಲಿ ಬ್ಯಾಂಕುಗಳು ಕ್ಲೋಸ್ ಆಗಿರುತ್ತವೆ.
*ಇನ್ನೂ ನವೆಂಬರ್ 9 ತಿಂಗಳ ಎರಡನೇ ಶನಿವಾರವಾಗಿದ್ದರಿಂದ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
*ನವೆಂಬರ್ 10 ಭಾನುವಾರದ ಕಾರಣ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
*ಇದರ ನಂತರ, ಎಗಾಸ್ ಬಾಗ್ವಾಲ್‌ನಿಂದಾಗಿ ನವೆಂಬರ್ 12 ರಂದು ಡೆಹ್ರಾಡೂನ್‌ನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.
*ಇನ್ನೂ ನವೆಂಬರ್ 15 ರಂದು ಗುರುನಾನಕ್ ಜಯಂತಿ, ಕಾರ್ತಿಕ್ ಪೂರ್ಣಿಮಾ ಇರುವುದರಿಂದ ಬೇಲಾಪುರ, ಐಜ್ವಾಲ್, ಭುವನೇಶ್ವರ, ಜಮ್ಮು, ನಾಗ್ಪುರ, ಚಂಡೀಗಢ, ಭೋಪಾಲ್, ಇಟಾನಗರ, ಡೆಹ್ರಾಡೂನ್, ಜೈಪುರ, ತೆಲಂಗಾಣ, ಹೈದರಾಬಾದ್, ಕಾನ್ಪುರ, ಜೈಪುರ, ಕೋಲ್ಕತ್ತಾ, ನವದೆಹಲಿ, ರಾಂಚಿ, ಮುಂಬೈ, ಶಿಮ್ಲಾ, ಶ್ರೀನಗರ, ಲಕ್ನೋ ಮತ್ತು ಶ್ರೀನಗರದಲ್ಲಿ ಕೊಹಿಮಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
*ನವೆಂಬರ್ 17 ಭಾನುವಾರವಾದ್ದರಿಂದ ಬ್ಯಾಂಕ್‌ಗಳು ಮುಚ್ಚಿರುತ್ತವೆ.
*ಇದಾದ ನಂತರ ನವೆಂಬರ್ 18 ರಂದು ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬ್ಯಾಂಕ್ ರಜೆ ಇರಲಿದೆ.
*ನಾಲ್ಕನೇ ಶನಿವಾರ ಹಾಗೂ ಸೆಂಗ್ ಕುಟ್ಸ್ನೆಮ್ ಕಾರಣ ನವೆಂಬರ್ 23 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
*ನಂತರ ನವೆಂಬರ್ 24 ಭಾನುವಾರವಾದ್ದರಿಂದ ಬ್ಯಾಂಕ್ ರಜೆ ಇರುತ್ತದೆ.

ಬ್ಯಾಂಕ್‌ಗಳಿಗೆ ರಜೆಯ ಪಟ್ಟಿ ಎಲ್ಲಾ ರಾಜ್ಯಗಳಲ್ಲಿ ಒಂದೇ ಆಗಿರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಎಲ್ಲಾ ರಾಜ್ಯಗಳಿಗೆ ರಜಾದಿನಗಳ ಪಟ್ಟಿ ವಿಭಿನ್ನವಾಗಿರುತ್ತದೆ. ಈ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು RBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ, ಇದು ರಾಜ್ಯಗಳ ಪ್ರಕಾರ ವಿವಿಧ ಹಬ್ಬಗಳು ಮತ್ತು ರಜಾದಿನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ರಜಾದಿನಗಳಲ್ಲಿ ಈ ರೀತಿಯಾಗಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಿ
ಬ್ಯಾಂಕುಗಳು ಮುಚ್ಚಿದಾಗ, ನೀವು ಸುಲಭವಾಗಿ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಬಹುದು. ಬ್ಯಾಂಕ್ ರಜಾದಿನಗಳಲ್ಲಿ, ನೀವು ಆನ್‌ಲೈನ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸಹಾಯದಿಂದ ನಿಮ್ಮ ಬ್ಯಾಂಕ್ ಕೆಲಸವನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಬ್ಯಾಂಕ್ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ, ಆದ್ದರಿಂದ ರಜಾದಿನಗಳಲ್ಲಿಯೂ ಸಹ, ನೀವು ಮನೆಯಲ್ಲಿಯೇ ಕುಳಿತು ಅನೇಕ ಬ್ಯಾಂಕಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಇದಲ್ಲದೆ, ನೀವು ಹಣವನ್ನು ಹಿಂಪಡೆಯಲು ಎಟಿಎಂ ಅನ್ನು ಸಹ ಬಳಸಬಹುದು.


Click it and Unblock the Notifications