ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬ್ಯಾಂಕ್ ಆಫ್ ಬರೋಡಾ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಬ್ಯಾಂಕ್ ಆಫ್ ಬರೋಡಾ ಸೋಮವಾರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಇದರೊಂದಿಗೆ ಬ್ಯಾಂಕ್ ಬಿಒಬಿ ಮಾಸ್ಟ್ರರ್ ಸ್ಟ್ರೋಕ್ ಸೇವಿಂಗ್ ಅಕೌಂಟ್ ಲಾಂಚ್ ಮಾಡಿದೆ.
ಬ್ಯಾಂಕ್ ಆಫ್ ಬರೋಡಾ ವ್ಯಾಪಾರ ಬೆಳವಣಿಗೆಯ ಹೊಸ ಹಂತವನ್ನು ಪ್ರವೇಶಿಸುವ ಸಮಯದಲ್ಲಿ ಈ ಒಡಂಬಡಿಕೆಯು, ಬ್ಯಾಂಕ್ ಬೆಳವಣಿಗೆಗೆ ಪೂರಕವಾಗಿದೆ. ದೇಶದಲ್ಲಿ ವೇಗವಾಗಿ ವ್ಯಾಪಾರ ವ್ಯವಹಾರಗಳನ್ನು ಬೆಳೆಸಲು ಇದು ಸಹಾಯಕವಾಗಿದೆ. ಇನ್ನು ಸಚಿನ್ ಅವರ ಬ್ರ್ಯಾಂಡ್ ವ್ಯಾಲ್ಯೂದಿಂದ ಬ್ಯಾಂಕ್ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಸಚಿನ್ ರಾಯಭಾರಿ
ದೇಶದಲ್ಲಿ ಸಚಿನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಚಿನ್ ಪ್ರಚಾರ ರಾಯಭಾರಿಯಾಗಿ ಬ್ಯಾಂಕ್ ಬೆಳವಣಿಗೆಗೆ ಸಹಾಯಕ ಮಾಡಲಿದ್ದಾರೆ. ಸಚಿನ್ ಬ್ರ್ಯಾಂಡಿಂಗ್ ಪ್ರಚಾರಗಳು, ಗ್ರಾಹಕರ ಶಿಕ್ಷಣ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ವಂಚನೆ ತಡೆಗಟ್ಟುವಿಕೆ ಮತ್ತು ಜಾಗೃತಿ ಅಭಿಯಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾ 17 ದೇಶಗಳಲ್ಲಿ ತನ್ನ ಶಾಖೆಯನ್ನು ಹೊಂದಿದ್ದಾರೆ. ಸಚಿನ್ ಬ್ಯಾಂಕ್ ಪ್ರಚಾರ ರಾಯಭಾರಿ ಆಗಿದ್ದರಿಂದ ಸಂಸ್ಥೆ ಹೆಚ್ಚಿನ ಎತ್ತರಕ್ಕೆ ಬೆಳೆಯಬಹುದಾಗಿದೆ.
ಮಾಸ್ಟರ್‌ಸ್ಟ್ರೋಕ್ ಖಾತೆಯನ್ನು ವಿಶೇಷವಾಗಿ ಪ್ರೀಮಿಯಂ ಸೇವೆಗಳನ್ನು ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಗ್ರಾಹಕರು ಖಾತೆಯಲ್ಲಿ ತ್ರೈಮಾಸಿಕ ಸರಾಸರಿ ₹10 ಲಕ್ಷವನ್ನು ಕಾಯ್ದುಕೊಂಡಲ್ಲಿ ಇವರು ಬ್ಯಾಂಕ್‌ನ ಸೇವೆಯನ್ನು ಆನಂದಿಸಬಹುದಾಗುದೆ.

ಮಾಸ್ಟರ್‌ಸ್ಟ್ರೋಕ್ ಅಕೌಂಟ್ ಖಾತೆಯ ಮೂಲಕ ಬಾಕಿಗಳ ಮೇಲಿನ ಹೆಚ್ಚಿನ ಬಡ್ಡಿದರಗಳು, ಚಿಲ್ಲರೆ ಸಾಲಗಳ ಮೇಲಿನ ರಿಯಾಯಿತಿ ಬಡ್ಡಿದರಗಳು, BOB ವರ್ಲ್ಡ್ ಓಪ್ಯುಲೆನ್ಸ್ ವೀಸಾ ಇನ್ಫೈನೈಟ್ ಡೆಬಿಟ್ ಕಾರ್ಡ್ (ಮೆಟಲ್ ಆವೃತ್ತಿ) ಮತ್ತು ಜೀವಮಾನ-ಮುಕ್ತ ಎಟರ್ನಾ ಕ್ರೆಡಿಟ್ ಕಾರ್ಡ್ ನಂತಹ ಹತ್ತು ಹಲವು ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ನಿರಂತರವಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ಬ್ಯಾಂಕ್ ಜೊತೆ ಕೈ ಜೋಡಿಸಿದ್ದು ಖುಷಿಯ ವಿಚಾರ. ಒಂದು ದಶಕದ ಹಿಂದೆ ಚಿಕ್ಕ ಕನಸಿನೊಂದಿಗೆ ಭಾರತದಲ್ಲಿ ಕಾಲಿಟ್ಟಿದ್ದ ಬ್ಯಾಂಕ್, ಇಂದು ಬೆಳೆದ ರೀತಿ ಅಮೋಘ. ಬ್ಯಾಂಕಿನ ಮೌಲ್ಯಗಳು ನನಗೆ ಹತ್ತಿರವಾಗಿವೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ನಮ್ಮ ಬ್ಯಾಂಕ್ ಸೇವೆಗಳನ್ನು ದೇಶದ ಪ್ರತಿಯೊಬ್ಬರು ಆನಂದಿಸ ಬೇಕು ಎಂಬುದು ನಮ್ಮ ಬಯಕೆ ಆಗಿದೆ, ಎಂದು ಬ್ಯಾಂಕ್‌ನ ಎಂಡಿ ಸಿಇಒ ಶ್ರೀ ಚಂದ್ ಹೇಳಿದ್ದಾರೆ.


Click it and Unblock the Notifications