ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧ ಮಾಡಿ ಬ್ಯಾಂಕ್ ನೌಕರರ ಸಂಘವು ಎರಡು ದಿನಗಳ ಮುಷ್ಕರವನ್ನು ನಡೆಸುತ್ತಿದೆ. ಈ ಹಿನ್ನೆಲೆಯಿಂದಾಗಿ ಹಲವಾರು ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ. ಬ್ಯಾಂಕಿನಲ್ಲಿ ಚೆಕ್‌ನ ವಹಿವಾಟಿಗೂ ಈ ಮುಷ್ಕರದಿಂದಾಗಿ ಪೆಟ್ಟು ಬಿದ್ದಿದೆ ಎಂದು ಎಐಬಿಇಎ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ, ಸಿ ಎಚ್ ವೆಂಕಟಚಲಂ, "ಬ್ಯಾಂಕ್ ನೌಕರರು ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದರಿಂದಾಗಿ ಬಹಳಷ್ಟು ತೊಂದರೆ ಉಂಟಾಗಿದೆ. ಈ ಎರಡು ದಿನಗಳ ಮುಷ್ಕರದ ಸಂದರ್ಭದಲ್ಲಿ ಈವರೆಗೆ 37,000 ಕೋಟಿ ರೂಪಾಯಿ ಮೌಲ್ಯದ ಚೆಕ್ ವಹಿವಾಟಿಗೆ ಅಡೆತಡೆ ಉಂಟಾಗಿದೆ," ಎಂದು ತಿಳಿಸಿದ್ದಾರೆ.
"ದೇಶದಲ್ಲಿ ಮೂರು ಚೆಕ್ ಕ್ಲಿಯರೆನ್ಸ್ ಸೆಂಟರ್‌ಗಳು ಇದೆ. ಅದು ಚೆನ್ನೈ, ಮುಂಬೈ ಹಾಗೂ ದೆಹಲಿಯಲ್ಲಿ ಇದೆ. ಆದರೆ ಎರಡು ದಿನಗಳ ಬ್ಯಾಂಕ್ ಮುಷ್ಕರದಿಂದಾಗಿ, ಸುಮಾರು 38 ಲಕ್ಷ ಚೆಕ್‌ಗಳ ಕ್ಲಿಯರೆನ್ಸ್ ಬಾಕಿ ಉಳಿದಿದೆ. ಈ 38 ಲಕ್ಷ ಚೆಕ್‌ಗಳು ಸುಮಾರು 37,000 ಕೋಟಿ ಮೌಲ್ಯದ್ದು ಆಗಿದೆ," ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ, ಸಿ ಎಚ್ ವೆಂಕಟಚಲಂ ಮಾಹಿತಿ ನೀಡಿದ್ದಾರೆ.
ಯಾವ ಕೇಂದ್ರದಲ್ಲಿ ಎಷ್ಟು ಚೆಕ್ ಬಾಕಿ?
ಇನ್ನು ಯಾವ ಚೆಕ್ ಕ್ಲಿಯರೆನ್ಸ್ ಸೆಂಟರ್‌ಗಳಲ್ಲಿ ಎಷ್ಟು ಚೆಕ್‌ಗಳು ಬಾಕಿ ಉಳಿದಿದೆ ಎಂಬ ಬಗ್ಗೆಯೂ ಸಿ ಎಚ್ ವೆಂಕಟಾಚಲಂ ವಿವರಣೆ ನೀಡಿದ್ದಾರೆ. "ಚೆನ್ನೈನಲ್ಲಿ 10,600 ಕೋಟಿ ರೂಪಾಯಿ ಮೌಲ್ಯದ ಚೆಕ್, ಅಂದರೆ ಸುಮಾರು 10 ಲಕ್ಷ ಚೆಕ್, ಮುಂಬೈನಲ್ಲಿ 15,400 ಕೋಟಿ ಮೌಲ್ಯದ 18 ಲಕ್ಷ ಚೆಕ್, ದೆಹಲಿಯಲ್ಲಿ 11,000 ಕೋಟಿ ಮೌಲ್ಯದ 11 ಲಕ್ಷ ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆ ಪೂರ್ಣಗೊಳ್ಳದೆ ಬಾಕಿ ಉಳಿದಿದೆ," ಎಂದು ಸಿ ಎಚ್ ವೆಂಕಟಾಚಲಂ ತಿಳಿಸಿದ್ದಾರೆ.
ಬ್ಯಾಂಕ್ ಮುಷ್ಕರ: ಯಾವೆಲ್ಲಾ ಬ್ಯಾಂಕ್‌ಗೆ ಪರಿಣಾಮ
ಹೆಚ್ಚಾಗಿ ಈ ಮುಷ್ಕರವು ಹಳೆಯ ಖಾಸಗಿ ಬ್ಯಾಂಕುಗಳ ಮೇಲೆ ಪರಿಣಾಮವನ್ನು ಬೀರಿದೆ. "ಫೆಡರಕ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವ್ಯಾಸ್ ಬ್ಯಾಂಕ್, ಸಿಎಸ್‌ಬಿ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಧನಲಕ್ಷ್ಮೀ ಬ್ಯಾಂಕ್, ರತ್ನಾಕರ್ ಬ್ಯಾಂಕ್, ಜೆ&ಕೆ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಈ ಎರಡು ದಿನಗಳ ಬ್ಯಾಂಕ್ ಮುಷ್ಕರವು ಹೆಚ್ಚು ಪರಿಣಾಮವನ್ನು ಉಂಟು ಮಾಡಿದೆ. ಇನ್ನು ವಿದೇಶಿ ಬ್ಯಾಂಕುಗಳ ಮೇಲೂ ಈ ಮುಷ್ಕರವು ಪರಿಣಾಮವನ್ನು ಬೀರಿದೆ. ಸಿಟಿ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟಡ್ ಬ್ಯಾಂಕ್, ಸೋನಲಿ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳು ಇದ್ದರು. ಇನ್ನುಳಿದಂತೆ ಇನ್ನು ಸ್ಥಳೀಯ, ಗ್ರಾಮೀಣ ಬ್ಯಾಂಕಿನ ಸಿಬ್ಬಂದಿಗಳು ಕೂಡಾ ಈ ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರಣದಿಂದಾಗಿ ಗ್ರಾಮೀಣ ಬ್ಯಾಂಕ್‌ಗಳ ಮೇಲೂ ಮುಷ್ಕರ ಪರಿಣಾಮವನ್ನು ಉಂಟು ಮಾಡಿದೆ.
ದೇಶದಲ್ಲಿ ಒಂದು ಲಕ್ಷ ಬ್ಯಾಂಕುಗಳು ಬಂದ್!
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧ ಮಾಡಿ ನಡೆದ ಮುಷ್ಕರದಿಂದಾಗಿ ದೇಶದಾದ್ಯಂತ ಸುಮಾರು ಒಂದು ಲಕ್ಷ ಬ್ಯಾಂಕ್ ಬ್ರಾಂಚುಗಳು ಬಂದ್ ಆಗಿದ್ದವು. ಇನ್ನು ಕೆಲವು ಬ್ಯಾಂಕುಗಳಲ್ಲಿ ಬರೀ ಹಿರಿಯ ಸಿಬ್ಬಂದಿಗಳು ಮಾತ್ರ ಇದ್ದರು. ಈ ಬ್ಯಾಂಕುಗಳಲ್ಲಿ ಯಾವುದೇ ವಹಿವಾಟು ನಡೆದಿಲ್ಲ.
ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿಸ್ಥಿತಿ ಹೇಗಿತ್ತು?
ಇನ್ನು ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕುಗಳ ಮೇಲೆ ಈ ಮುಷ್ಕರ ಯಾವುದೇ ಪರಿಣಾಮವನ್ನು ಉಂಟು ಮಾಡಿಲ್ಲ. ಈ ಎರಡೂ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿಯೇ ವಹಿವಾಟು ನಡೆದಿದೆ. ಎಲ್ಲಾ ಚೆಕ್‌ಗಳು ಕ್ಲಿಯರ್ ಆಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ, ಸಿ ಎಚ್ ವೆಂಕಟಾಚಲಂ ಮಾಹಿತಿ ನೀಡಿದ್ದಾರೆ.
ಯಾಕಾಗಿ ಈ ಬ್ಯಾಂಕ್ ಮುಷ್ಕರ?
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಡಿಸೆಂಬರ್ 16 ಹಾಗೂ ಡಿಸೆಂಬರ್ 17 ರಂದು ಎರಡು ದಿನಗಳ ಮುಷ್ಕರ ನಡೆದಿದೆ. ಹಾಗೆಯೇ ಬ್ಯಾಂಕುಗಳ ಕಾನೂನು ಮಸೂದೆ (ತಿದ್ದುಪಡಿ) 2021 ವಿರುದ್ಧವಾಗಿ ಈ ಪ್ರತಿಭಟನೆಯು ನಡೆಯುತ್ತಿದೆ. ಈ ಕಾಯ್ದೆಯು ಸರ್ಕಾರವು ಬ್ಯಾಂಕುಗಳ ಮೇಲಿನ ಹತೋಟಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುವುದು ಈ ಮುಷ್ಕರ ಮಾಡುವ ಸಂಘದ ವಾದವಾಗಿದೆ. ಈ ಕಾಯ್ದೆಯ ಪ್ರಕಾರವಾಗಿ ಸರ್ಕಾರವು 51 ಶೇಕಡಕ್ಕಿಂತ ಕಡಿಮೆ ಬಂಡವಾಳವನ್ನು ಬ್ಯಾಂಕುಗಳ ಮೇಲೆ ಹೂಡಿಕೆಯನ್ನು ಮಾಡಬಹುದು. ಸಾಮಾನ್ಯವಾಗಿ ಯಾವುದೇ ಕ್ಷೇತ್ರದಲ್ಲೂ 50 ಶೇಕಡಕ್ಕಿಂತ ಹೂಡಿಕೆ ಹೊಂದಿರುವವರು ಆ ಸಂಸ್ಥೆಯ ಮಾಲೀಕತ್ವವನ್ನು ಹೊಂದಿದ್ದಂತೆ. ಆದರೆ ಬ್ಯಾಂಕುಗಳ ಮೇಲೆ ಖಾಸಗೀ ವಲಯವು ಶೇಕಡ 51 ಕ್ಕಿಂತ ಹೆಚ್ಚು ಬಂಡವಾಳ ಹೊಂದಿದ್ದರೆ, ಅದು ಖಾಸಗೀ ಸ್ವಾಮ್ಯಕ್ಕೆ ಒಳಪಡುತ್ತದೆ. ಈ ನಿಟ್ಟಿನಲ್ಲಿ ಈ ಮುಷ್ಕರವನ್ನು ನಡೆಸಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications