ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಬ್ಯಾಂಕಿಂಗ್ ವಲಯಕ್ಕೆ ಐದು ದಿನಗಳ ಕೆಲಸದ ವಾರವನ್ನು ನಿಗದಿಪಡಿಸಬೇಕು ಮತ್ತು ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಮಾರ್ಚ್ 24 ರಿಂದ 25 ರವರೆಗೆ ಬ್ಯಾಂಕ್ ಮುಷ್ಕಕ್ಕೆ ಕರೆ ನೀಡಿ ಮುಂದೂಡಿಕೆ ಮಾಡಿದೆ.ಹಾಗಿದ್ರೆ ಇಂದು ಮತ್ತು ನಾಳೆ ಬ್ಯಾಂಕ್ ಓಪನ್ ಇರುತ್ತೋ ಅಥವಾ ಇಲ್ಲವೋ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಬ್ಯಾಂಕ್ ಮುಷ್ಕರಕ್ಕೆ ಸಂಬಂಧಪಟ್ಟಂತೆ ಮುಖ್ಯ ಕಾರ್ಮಿಕ ಆಯುಕ್ತರು ಮತ್ತು ಇತರ ಪಕ್ಷಗಳ ನಡುವಿನ ಚರ್ಚೆಯ ನಂತರ ಶುಕ್ರವಾರ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಘೋಷಣೆಯನ್ನು ಮಾಡಲಾಗಿದೆ.

ಬ್ಯಾಂಕ್ ಮುಷ್ಕರಕ್ಕೆ ಕಾರಣವೇನು?
ಸರ್ಕಾರಿ ಒಡೆತನದ ಬ್ಯಾಂಕುಗಳಲ್ಲಿ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಗ್ರಾಹಕರಿಗೆ ತಕ್ಕಂತೆ ಉದ್ಯೋಗಿಗಳನ್ನು ನೇಮಕ ಮಾಡಬೇಕು. ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸಬೇಕು. ಆರ್‌ಬಿಐ ಸೇರಿದಂತೆ ಒಟ್ಟು ಆರ್ಥಿಕ ರಂಗ ಐದು ದಿನಗಳ ಕೆಲಸದ ವಿಧಾನವನ್ನು ಅನುಸರಿಸುತ್ತಿದೆ. ಇದೇ ವಿಧಾನವನ್ನು ಬ್ಯಾಂಕುಗಳಿಗೂ ಅನ್ವಯವಾಗುವಂತೆ ಮಾಡಬೇಕು ಎಂದು ಬೇಡಿಕೆಗಳನ್ನುಇಟ್ಟಕೊಂಡು ಬ್ಯಾಂಕ್ ಮುಷ್ಕರಕ್ಕೆ ಮುಂದಾಗಿದ್ದಾರೆ.
ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಜೊತೆಗಿನ ಮಾತುಕತೆಗಳು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ನಂತರ, ಒಂಬತ್ತು ಬ್ಯಾಂಕ್ ಒಕ್ಕೂಟಗಳ ಒಕ್ಕೂಟವಾದ ಯುಎಫ್‌ಬಿಯು ಮಾರ್ಚ್ 13 ರಂದು ಮಾರ್ಚ್ 24 ಮತ್ತು 25ರ ದಿನದಂದು ರಾಷ್ಟದ್ಯಾಂತ ಮುಷ್ಕರವನ್ನು ಘೋಷಿಸಿತು.
ಬ್ಯಾಂಕ್ ಗ್ರಾಹಕರಲ್ಲಿ ಬ್ಯಾಂಕ್ ಮುಷ್ಕರ ಮುಂದೂಡಲ್ಪಟ್ಟಿರುವುದರಿಂದ ಬ್ಯಾಂಕುಗಳು ತೆರೆದಿರುತ್ತವೆಯೇ ಅಥವಾ ಮುಚ್ಚಲ್ಪಡುತ್ತವೆಯೇ ಎಂಬ ಗೊಂದಲವಂತೂ ಇದ್ದೇ ಇರುತ್ತದೆ ಇದಕೆಲ್ಲಾ ಉತ್ತರ ಇಲ್ಲಿದೆ ನೋಡಿ.
ಇಂದು ಬ್ಯಾಂಕುಗಳು ಇರುತ್ತಾ?
ಮುಷ್ಕರ ರದ್ದಾದ ನಂತರ, ಭಾರತದಾದ್ಯಂತ ಬ್ಯಾಂಕುಗಳು ಇಂದು, ಸೋಮವಾರ, ಮಾರ್ಚ್ 24, ಎಂದಿನಂತೆ ಕಾರ್ಯನಿರ್ವಹಿಸುತ್ತವೆ.ಆರ್‌ಬಿಐ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಹೊರಡಿಸಿರುವ ರಜೆಯ ಪ್ರಕಾರ ಇಂದು ಬ್ಯಾಂಕ್ ರಜೆ ಇಲ್ಲ. ಹೀಗಾಗಿ, ಬ್ಯಾಂಕ್ ಶಾಖೆಗಳು ಯಾವುದೇ ಅಡೆತಡೆಯಿಲ್ಲದೆ ತೆರೆದು ಕಾರ್ಯನಿರ್ವಹಿಸುತ್ತವೆ.
ಮಾರ್ಚ್ 2025ರ ತಿಂಗಳಲ್ಲಿ ಬರುವ ಬ್ಯಾಂಕ್ ರಜಾದಿನಗಳು
ಈ ವಾರ ಮಾರ್ಚ್ 31 ರಂದು ರಂಜಾನ್-ಈದ್ (ಈದ್-ಉಲ್-ಫಿತರ್) ರಂದು ಬ್ಯಾಂಕುಗಳು ಬಂದ್ ಆಗಿರುತ್ತವೆ. ಅಗರ್ತಲಾ, ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್ (ಎಪಿ ಮತ್ತು ತೆಲಂಗಾಣ), ಇಂಫಾಲ್, ಇಟಾನಗರ, ಜೈಪುರ, ಜಮ್ಮು, ಕಾನ್ಪುರ, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶ್ರೀನಗರ ಮತ್ತು ತಿರುವನಂತಪುರಂನಲ್ಲಿರುವ ಶಾಖೆಗಳು ಆ ದಿನಾಂಕದಂದು ಮುಚ್ಚಲ್ಪಡುತ್ತವೆ.
ಬ್ಯಾಂಕ್ ಮುಷ್ಕರದ ಪ್ರಮುಖ ಬೇಡಿಕೆಗಳು
ಸಿಬ್ಬಂದಿ ಕೊರತೆ: ಕೆಲಸದ ಹೊರೆಯನ್ನು ನಿರ್ಭಹಿಸಲು ಎಲ್ಲಾ ವರ್ಗದಲ್ಲೂ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು.
ಮಂಡಳಿಯ ಪ್ರಾತಿನಿಧ್ಯ: ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸಗಾರರು ಮತ್ತು ಅಧಿಕಾರಿ ನಿರ್ದೇಶಕರ ನೇಮಕಾತಿಯಾಗಬೇಕು.
ಉದ್ಯೋಗ ಭದ್ರತೆಯ ಕಳವಳಗಳು: ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಪರಿಚಯಿಸಿದ ಕಾರ್ಯಕ್ಷಮತೆ ವಿಮರ್ಶೆಗಳು ಮತ್ತು ಪ್ರೋತ್ಸಾಹಕ ನೀತಿಗಳನ್ನು ಹಿಂಪಡೆಯುವುದು, ಇವು ಉದ್ಯೋಗ ಸ್ಥಿರತೆಗೆ ಧಕ್ಕೆ ತರುತ್ತವೆ ಎಂದು ಒಕ್ಕೂಟಗಳು ವಾದಿಸುತ್ತವೆ.
ಬ್ಯಾಂಕ್ ಸ್ವಾಯತ್ತತೆ: ಒಕ್ಕೂಟಗಳು DFS ನಿಂದ ಸೂಕ್ಷ್ಮ ನಿರ್ವಹಣೆ ಎಂದು ವಿವರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತವೆ, ಅತಿಯಾದ ಹಸ್ತಕ್ಷೇಪವು ಬ್ಯಾಂಕ್ ಮಂಡಳಿಗಳ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಾದಿಸುತ್ತವೆ.
ಗ್ರಾಚ್ಯುಟಿ ಕಾಯ್ದೆ ತಿದ್ದುಪಡಿಗಳು: ಸರ್ಕಾರಿ ನೌಕರರ ಸವಲತ್ತುಗಳಿಗೆ ಅನುಗುಣವಾಗಿ ಗ್ರಾಚ್ಯುಟಿ ಮಿತಿಯನ್ನು ₹25 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ, ಜೊತೆಗೆ ಗ್ರಾಚ್ಯುಟಿ ಪಾವತಿಗಳ ಮೇಲೆ ತೆರಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ.
ಸರ್ಕಾರಿ ನೀತಿಗಳ ಬಗ್ಗೆ UFBU ನ ನಿಲುವು ಏನು?
ಇತ್ತೀಚಿನ DFS ನಿರ್ದೇಶನಗಳನ್ನು ಒಕ್ಕೂಟಗಳು ಬಲವಾಗಿ ವಿರೋಧಿಸಿವೆ, ಅವು ಉದ್ಯೋಗ ಅನಿಶ್ಚಿತತೆಯನ್ನು ಸೃಷ್ಟಿಸುತ್ತವೆ ಮತ್ತು ಅವುಗಳನ್ನು ರದ್ದುಗೊಳಿಸಬೇಕು ಎಂದು ವಾದವನ್ನು ಮಾಡಿದ್ದಾರೆ.


Click it and Unblock the Notifications