ಅದಾನಿ ಸಂಸ್ಥೆಯು ವಂಚನೆ ಮಾಡಿದೆ ಎಂಬ ಹಿಂಡನ್‌ಬರ್ಗ್ ವರದಿಯಲ್ಲಿ ಆರೋಪ ಮಾಡಲಾದ ಬಳಿಕ ನಿರಂತರವಾಗಿ ಅದಾನಿ ಸಂಸ್ಥೆಯ ಸ್ಟಾಕ್‌ಗಳು ಭಾರೀ ಇಳಿಕೆ ಕಾಣುತ್ತಿದೆ. ಇದರಿಂದಾಗಿ ಅದಾನಿ ಸಂಸ್ಥೆಗೆ ಅಧಿಕ ಮೊತ್ತದ ಸಾಲವನ್ನು ನೀಡಿರುವ ಬ್ಯಾಂಕ್‌ಗಳು ಅಪಾಯದಲ್ಲಿದೆ ಎಂಬ ಸುದ್ದಿಗಳಾಗಿದ್ದವು. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಹತ್ವದ ಹೇಳಿಕೆಯೊಂದನ್ನು ನೀಡಿದೆ.
ನಮ್ಮ ದೇಶದ ಬ್ಯಾಂಕಿಂಗ್ ವಲಯವು ಯಾವುದೇ ಕೆಟ್ಟ ಸ್ಥಿತಿಯಿಂದಲೂ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಂಕ್ಷಿಪ್ತವಾದ ಹೇಳಿಕೆಯೊಂದನ್ನು ಆರ್‌ಬಿಐ ನೀಡಿದೆ.
"ಬಂಡವಾಳ ಸಮರ್ಪಕತೆ, ಆಸ್ತಿ ಗುಣಮಟ್ಟ, ದ್ರವ್ಯತೆ, ಪ್ರೋವಿಜನ್ ಕವರೇಜ್, ಲಾಭದಾಯಕತ್ವ ಎಂಬ ಹಲವಾರು ಪರಿಮಾಣಗಳು ಆರೋಗ್ಯದಾಯಕವಾಗಿದೆ. ಆರ್‌ಬಿಐನಿಂದ ನೀಡಲಾದ ಮಾರ್ಗಸೂಚಿ ಪ್ರಕಾರವಾಗಿಯೇ ಬ್ಯಾಂಕ್‌ಗಳು ನಡೆದುಕೊಂಡಿದೆ," ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಆರ್‌ಬಿಐ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಭಾರತದ ಬ್ಯಾಂಕಿಂಗ್ ವಲಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದನ್ನು ನೋಡಿಕೊಳ್ಳುತ್ತದೆ," ಎಂದು ತಿಳಿಸಿದೆ.

ಅದಾನಿ ಗ್ರೂಪ್ ಹೆಸರು ಉಲ್ಲೇಖಿಸದೆಯೇ ಆರ್‌ಬಿಐ ಹೇಳಿಕೆ
"ಆರ್‌ಬಿಐ ಪ್ರಸ್ತುತ ಮಾಡಿದ ಮೌಲ್ಯಮಾಪನದ ಪ್ರಕಾರ ಬ್ಯಾಂಕಿಂಗ್ ವಲಯವು ಯಾವುದೇ ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸ್ಥಿರವಾಗಿದೆ. ಒಂದು ವಹಿವಾಟು ಸಂಸ್ಥೆಗೆ ಭಾರತೀಯ ಬ್ಯಾಂಕುಗಳು ಅಧಿಕ ಸಾಲವನ್ನು ನೀಡಿ ಹೆಚ್ಚಿನ ಅಪಾಯದಲ್ಲಿದೆ ಎಂಬ ಬಗ್ಗೆ ವರದಿಗಳಾಗಿದೆ. ಈ ಹಿನ್ನೆಲೆ ಸ್ಪಷ್ಟಣೆಯನ್ನು ನೀಡಲಾಗಿದೆ," ಎಂದು ಆರ್‌ಬಿಐ ವಿವರಿಸಿದೆ. ಆದರೆ ಅದಾನಿ ಗ್ರೂಪ್‌ನ ಬಗ್ಗೆ ಆರ್‌ಬಿಐ ಎಲ್ಲಿಯೂ ಉಲ್ಲೇಖಿಸಿಲ್ಲ.
ಲಭ್ಯವಾದ ಮಾಹಿತಿ ಪ್ರಕಾರ ಈವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅದಾನಿ ಗ್ರೂಪ್‌ಗೆ 21,000 ಕೋಟಿ ರೂಪಾಯಿ (2.6 ಬಿಲಿಯನ್ ಡಾಲರ್) ಸಾಲ ನೀಡಿದೆ. ಇದು ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಅರ್ಧದಷ್ಟು ಎಂದು 'ಬ್ಲೂಮ್‌ಬರ್ಗ್' ಮೂಲವನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ. ಇನ್ನು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರು ಗುರುವಾರ ಮುಂಜಾನೆ, ಅದಾನಿ ಗ್ರೂಪ್ ಕಂಪನಿಗಳು ಸಾಲಗಳನ್ನು ಪೂರೈಸುತ್ತಿವೆ ಮತ್ತು ಬ್ಯಾಂಕ್ ಇದುವರೆಗೆ ಸಾಲ ನೀಡಿದ್ದಕ್ಕೆ ಯಾವುದೇ ಆತಂಕಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಅದಾನಿ ಗ್ರೂಪ್ ತನ್ನ ಅರ್ಧಕ್ಕೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. 100 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟವನ್ನು ಕಂಡಿದೆ. ಆದರೆ ಅದಾನಿ ಸಂಸ್ಥೆಯು ಈಗಾಗಲೇ ತನ್ನ 413 ಪುಟಗಳ ಪ್ರತಿಕ್ರಿಯೆಯಲ್ಲಿ ಹಿಂಡನ್‌ಬರ್ಗ್ ವರದಿಯನ್ನು ಅಲ್ಲಗಳೆದಿದೆ ಮತ್ತು ಖಂಡಿಸಿದೆ. ಆದರೂ ಮಾರುಕಟ್ಟೆ ಮೌಲ್ಯ ನಿರಂತರವಾಗಿ ಕುಸಿತ ಕಾಣುತ್ತಿದೆ.


Click it and Unblock the Notifications