For Quick Alerts
ALLOW NOTIFICATIONS  
For Daily Alerts

ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಬ್ಯಾಂಕ್ ಗಳ ಬಂಡವಾಳ ಇಳಿಕೆ

By ಅನಿಲ್ ಆಚಾರ್
|

ಬೆಳವಣಿಗೆ ಹಾದಿಯಲ್ಲಿ ಇರುವ ಏಷ್ಯಾದ ಬ್ಯಾಂಕ್ ಗಳ ಬಂಡವಾಳವು ಮುಂದಿನ ಎರಡು ವರ್ಷಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಲಿದೆ. ಅದರಲ್ಲೂ ಭಾರತದಲ್ಲಿ ಬಂಡವಾಳ ಪೂರೈಕೆ ಆಗದಿದ್ದಲ್ಲಿ ದೊಡ್ಡ ಮಟ್ಟದಲ್ಲೇ ಇಳಿಕೆ ಆಗಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಸೋಮವಾರ ಹೇಳಿದೆ.

ವರದಿಯೊಂದರಲ್ಲಿ ಮೂಡೀಸ್ ಈ ಬಗ್ಗೆ ಪ್ರಸ್ತಾವ ಮಾಡಿದ್ದು, ಆಸ್ತಿಯ ಗುಣಮಟ್ಟದಲ್ಲಿನ ಅನಿಶ್ಚಿತ ಹಾದಿಯೇ ಬೆಳವಣಿಗೆ ಹಾದಿಯಲ್ಲಿ ಇರುವ ಮಾರ್ಕೆಟ್ ನಲ್ಲಿನ ಬ್ಯಾಂಕ್ ಗಳ ಅತಿ ದೊಡ್ಡ ಆತಂಕ. ಸದ್ಯದ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಯ ಸನ್ನಿವೇಶವೇ ಸವಾಲಾಗಿದೆ ಎಂದು ತಿಳಿಸಲಾಗಿದೆ.

ನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ 1.05 ಲಕ್ಷ ಕೋಟಿ ರುಪಾಯಿನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ 1.05 ಲಕ್ಷ ಕೋಟಿ ರುಪಾಯಿ

ಬೆಳವಣಿಗೆ ಹಾದಿಯಲ್ಲಿರುವ ಬ್ಯಾಂಕ್ ಗಳಿಗೆ 2021ನೇ ಇಸವಿ ನಕಾರಾತ್ಮಕವಾಗಿದೆ. ಇನ್ಷೂರರ್ ಗಳ ಪಾಲಿಗೆ ಬಾಹ್ಯ ನೋಟ ಸ್ಥಿರವಾಗಿದೆ, ಎಂದಿದೆ.

ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಬ್ಯಾಂಕ್ ಗಳ ಬಂಡವಾಳ ಇಳಿಕೆ

"ಏಷ್ಯಾ ಪೆಸಿಫಿಕ್ ಭಾಗದಲ್ಲಿ ಬ್ಯಾಂಕ್ ಗಳ ನಾನ್ ಪರ್ಫಾರ್ಮಿಂಗ್ ಸಾಲಗಳು ಮತ್ತು ಇನ್ಷೂರರ್ ಗಳ ಹೂಡಿಕೆ ಪೋರ್ಟ್ ಫೋಲಿಯೋದ ಏರಿಳಿತದ ಕಡೆಗೆ ಗಮನ ನೀಡಬೇಕು. ಬೆಳವಣಿಗೆ ಹಾದಿಯಲ್ಲಿ ಇರುವ ಏಷ್ಯಾದಲ್ಲಿ ಮುಂದಿನ ಎರಡು ವರ್ಷದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗುತ್ತದೆ. ಖಾಸಗಿ ಅಥವಾ ಸಾರ್ವಜನಿಕ ಬಂಡವಾಳ ಪೂರೈಕೆ ಇಲ್ಲದಿದ್ದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ದೊಡ್ಡ ಮಟ್ಟದಲ್ಲೇ ಇಳಿಕೆ ಆಗುತ್ತದೆ," ಎಂದು ಮೂಡೀಸ್ ಹೇಳಿದೆ.

ಭಾರತ ಮತ್ತು ಥಾಯ್ಲೆಂಡ್ ನಲ್ಲಿ ಆರ್ಥಿಕ ಹೊಡೆತ ವಿಪರೀತ ಬಿದ್ದು, ಕೆಲವು ಬಗೆಯ ಸಾಲಗಳಲ್ಲಿ ಐತಿಹಾಸಿಕವಾಗಿಯೇ ಅತಿ ಕೆಟ್ಟ ಸ್ಥಿತಿ ಇದೆ. ಅಲ್ಲಿನ ಬಹುತೇಕ ಬ್ಯಾಂಕ್ ಗಳಲ್ಲಿ ನಾನ್ ಪರ್ಫಾರ್ಮಿಂಗ್ ಲೋನ್ಸ್ (ಎನ್ ಪಿಎಲ್) ಹೆಚ್ಚಾಗಲಿದೆ ಎನ್ನಲಾಗಲಿದೆ.

ಲಾಭದ ಬೆಳವಣಿಗೆ ಅಲ್ಪ ಪ್ರಮಾಣದಲ್ಲಿ ಇರಲಿದೆ. ಕಡಿಮೆ ಬಡ್ಡಿ ದರ ಹಾಗೂ ಸಾಲ ತೆಗೆದುಕೊಳ್ಳುವವರ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೆ ಸಾಲ ಪಡೆಯುವ ಪ್ರಮಾಣದಲ್ಲಿ ಇಳಿಕೆಯಿಂದ ಬಂಡವಾಳಕ್ಕೆ ಹಣ ಪೂರೈಕೆ ಆಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

English summary

Banks in India to see capital decline over two years without fresh infusion: Moody’s

According to Moody's report, banks capital in India will decline in next 2 years. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X