For Quick Alerts
ALLOW NOTIFICATIONS  
For Daily Alerts

ಬಾರ್ಬಿಕ್ಯೂ ನೇಷನ್‌ ಐಪಿಒ ಇಂದಿನಿಂದ ಶುರು: ಬೆಲೆ 498-500 ರೂಪಾಯಿ

|

ದೇಶಾದ್ಯಂತ ಅನೇಕ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಬಾರ್ಬಿಕ್ಯೂ ನೇಷನ್‌ ಹಾಸ್ಪಿಟಲಿಟಿ ಐಪಿಒ ಬುಧವಾರದಿಂದ ಆರಂಭವಾಗಿದ್ದು, ಆರಂಭಿಕ ಪ್ರೈಸ್ ಬ್ಯಾಂಡ್‌ ಅನ್ನು 498-500 ರೂಪಾಯಿ ನಿಗದಿಪಡಿಸಲಾಗಿದೆ. ಮಾರ್ಚ್‌ 24ರಿಂದ ಆರಂಭಗೊಂಡಿರುವ ಐಪಿಒ, ಮಾರ್ಚ್‌ 26ರಂದು ಮುಕ್ತಾಯವಾಗಲಿದೆ.

15 ಪ್ರಮುಖ ಹೂಡಿಕೆದಾರರನ್ನು ಒಳಗೊಂಡಿರುವ ಬಾರ್ಬಿಕ್ಯೂ ನೇಷನ್‌ 202 ಕೋಟಿ ರೂಪಾಯಿ ಸಂಗ್ರಹಿಸಲು 40,57,861 ಷೇರುಗಳನ್ನು ಮಾರಾಟ ಮಾಡಲಿದೆ.

ನವೆಂಬರ್ 30, 2019 ರ ಹೊತ್ತಿಗೆ ಬಾರ್ಬಿಕ್ಯೂ ನೇಷನ್‌ ಭಾರತದ 73 ನಗರಗಳಲ್ಲಿ ಮತ್ತು ವಿದೇಶದಲ್ಲಿ 7 ರೆಸ್ಟೋರೆಂಟ್ ಸೇರಿದಂತೆ 138 ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದೆ.

ಬಾರ್ಬಿಕ್ಯೂ ನೇಷನ್‌ ಐಪಿಒ ಇಂದಿನಿಂದ ಶುರು: ಬೆಲೆ 498-500 ರೂಪಾಯಿ

ಮಾರ್ಚ್ 23 ರಂದು ಪ್ರಮುಖ ಹೂಡಿಕೆದಾರರಿಗೆ ಪ್ರತಿ ಷೇರಿಗೆ 500 ರೂ.ಗೆ 4.06 ಮಿಲಿಯನ್ ಈಕ್ವಿಟಿ ಷೇರುಗಳನ್ನು ನಿಗದಿಪಡಿಸಿದೆ ಎಂದು ಕಂಪನಿ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.

ದೇಶದ ಖ್ಯಾತ ಷೇರು ಹೂಡಿಕೆದಾರ ರಾಕೇಶ್ ಝಂಝನ್‌ವಾಲಾ ಬೆಂಬಲಿತ ಬಾರ್ಬಿಕ್ಯೂ ನೇಷನ್‌ನಲ್ಲಿ ಏಳು ವಿದೇಶಿ ಬಂಡವಾಳ ಹೂಡಿಕೆದಾರರು ಫಿಡೆಲಿಟಿ, ಈಸ್ಟ್‌ಪ್ರಿಂಗ್ ಇನ್ವೆಸ್ಟ್‌ಮೆಂಟ್, ನೋಮುರಾ, ಗೋಲ್ಡ್ಮನ್ ಸ್ಯಾಚ್ಸ್, ಕುಬರ್ ಇಂಡಿಯಾ ಮತ್ತು ಯುಪಿಎಸ್ ಗ್ರೂಪ್ ಟ್ರಸ್ಟ್ ಸೇರಿಕೊಂಡಿವೆ. ಈ ಪ್ರತಿಯೊಬ್ಬ ಹೂಡಿಕೆದಾರರಿಗೆ 2,70,510 ಈಕ್ವಿಟಿ ಷೇರುಗಳನ್ನು ಅಂದಾಜು ರೂ. 13.53 ಕೋಟಿ ರೂಪಾಯಿಯಂತೆ, ಒಟ್ಟು ರೂ. 94.68 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದೆ.

English summary

Barbeque Nation Raises Rs 202 Crore From 15 Anchor Investors

Barbeque Nation Hospitality Ltd said it has raised Rs202 crore from 15 anchor investors ahead of its initial public offering (IPO) which opens on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X