ಬೆಂಗಳೂರಿಗರೇ ಇಲ್ಲಿ ಕೇಳಿ.. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 22 ಆಸ್ತಿಗಳಿದ್ದು, ಎಲ್ಲ ಆಸ್ತಿಗಳ ಮಾಲೀಕರು ಕೂಡ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಅಂತಿಮ ಬಿಬಿಎಂಪಿ ಇ-ಖಾತಾ ಪಡೆದುಕೊಳ್ಳಬೇಕು ಎಂದು ಪಾಲಿಕೆಯಿಂದ ಪ್ರಕಟಣೆ ಹೊರಡಿಸಲಾಗಿದೆ. ಅಂತಿಮ ಇ-ಖಾತಾ ಪಡೆದುಕೊಳ್ಳುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ನಾಗರಿಕರಿಗೆ ಅನುಕೂಲವಾಗುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಯಸಿದರೂ ಸಹ, ನಿಮ್ಮ ಮಾಹಿತಿ ಮತ್ತು ಆಸ್ತಿ ಫೋಟೋವನ್ನು ನೀಡದೆ ಅವರು ನಿಮ್ಮ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ. ಸುಮಾರು 22 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ BBMPeAasthi.karnataka.gov.in ನಲ್ಲಿ ಹಾಕಲಾಗಿರುತ್ತದೆ.

ಬಿಬಿಎಂಪಿ ಇ-ಖಾತಾ ಮತ್ತು ಆಸ್ತಿ ತೆರಿಗೆಯನ್ನು ಪಡೆಯಲು ಅನುಕೂಲ ಆಗುವಂತೆ ಕೆಳಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿರುವ ಎರಡು ವಿಡಿಯೋಗಳ ಲಿಂಕ್ ಕೂಡ ನೀಡಲಾಗಿದೆ. ಸಂಬಂಧಪಟ್ಟ ಆಸ್ತಿ ಮಾಲೀಕರು ಈ ವಿಡಿಯೋ ನೋಡಿ ಅದರಲ್ಲಿ ಕೊಡಲಾಗಿರುವ ಆಯ್ಕೆಗಳ ಅನುಸಾರ ಇ-ಖಾತಾ ಪಡೆದುಕೊಳ್ಳಬಹುದು. ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿದ್ದರೆ ಬಿಬಿಎಂಪಿ ಸೂಚಿಸಿದ ವಿಡಿಯೋಗಳು ಪ್ರಸಾರ ಆಗಲಿವೆ. ಇನ್ನು ಯಾವುದೇ ಅನುಮಾನ, ಗೊಂದಲಗಳು ಉಂಟಾದಲ್ಲಿ ಇ-ಖಾತಾ ಸಹಾಯವಾಣಿ 94806 83695ಗೆ ನೀವು ಕರೆ ಮಾಡಬಹುದು.ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಅನ್ನು ನೀವು ತಿಳಿದುಕೊಳ್ಳಬಹುದು.
ವೀಡಿಯೊ ನೋಡುವ ಮೂಲಕ ಇ-ಖಾತಾ ಪಡೆಯಿರಿ
ಕನ್ನಡ:
ಇಂಗ್ಲಿಷ್:
ಇ-ಖಾತಾ ಸಹಾಯವಾಣಿ ಸಂಖ್ಯೆ : 94806 83695
ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ ಮತ್ತು ವಾರ್ಡ್‌ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ನಿಮ್ಮ ಆಸ್ತಿಯನ್ನು ಹುಡುಕಬಹುದಾಗಿದೆ.
(1) ಮಾಲೀಕರ ಆಧಾರ್
(2) ಆಸ್ತಿ ತೆರಿಗೆ ಅರ್ಜಿ ಸಂಖ್ಯೆ (ಆಸ್ತಿ ತೆರಿಗೆ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ದತ್ತಾಂಶವನ್ನು ಪಡೆಯುತ್ತದೆ)
(3) ಮಾರಾಟ/ನೋಂದಣಿ ಪತ್ರದ ಸಂಖ್ಯೆ (ಉಪ ನೋಂದಣಿದಾರರಿಂದ ಸ್ವಯಂಚಾಲಿತವಾಗಿ ಅದನ್ನು ಪಡೆಯುತ್ತದೆ)
(4) ಬೆಸ್ಕಾಂ 10-ಅಂಕಿಯ ಐಡಿ (ಖಾಲಿ ನಿವೇಶನಗಳಿಗೆ ಐಚ್ಛಿಕ)
(5) ಆಸ್ತಿ ಫೋಟೋ
ಬಿಬಿಎಂಪಿ ದಾಖಲೆಗಳೊಂದಿಗೆ ವಿವರಗಳು ಹೊಂದಿಕೆಯಾದರೆ - ನಿಮ್ಮ ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿ. ಮಾಹಿತಿ ಲಭ್ಯವಿಲ್ಲದಿದ್ದಾಗ ಅಥವಾ ಪಾಲಿಕೆಯ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಮಾತ್ರ, ಪ್ರಕರಣವನ್ನು ಸಹಾಯಕ ಕಂದಾಯ ಅಧಿಕಾರಿಗೆ ಉಲ್ಲೇಖಿಸಲಾಗುತ್ತದೆ.
15,000 ಕೋಟಿ ಯೋಜನೆ!
ಬಿಬಿಎಂಪಿ ದೊಡ್ಡ ನಿರ್ಧಾರ ಬೆಂಗಳೂರಿಗೆ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬಿಬಿಎಂಪಿ ದೊಡ್ಡ ನಿರ್ಧಾರವನ್ನು ತಗೆದುಕೊಳ್ಳಲು ಮುಂದಾಗಿದೆ.ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರಿನ ಜನರರು ಬೇಸತ್ತು ಹೋಗಿದ್ದಾರೆ ಇದಕೆಲ್ಲಾ ಮುಕ್ತಿ ನೀಡಲು ಸುಮಾರು 15,000 ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಲು ಬಿಬಿಎಂಪಿ ಪ್ರಸ್ತಾಪ ಮಾಡಿದೆ. ಬೆಂಗಳೂರಿನ ಜನರಿಗೆ ಅನುಕೂಲವಾಗಲಿ ಎಂದು ಸುಮಾರು 46 ಕಿ. ಮೀ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ತಜ್ಞರು ರೂಪಿಸುವಂತೆಯೇ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಒಳಗೊಂಡಂತೆ ಸುಮಾರು 15,000 ಕೋಟಿ ವೆಚ್ಚದ ಒಂದು ಡಜನ್ ಯೋಜನೆಗಳನ್ನು ಬಿಬಿಎಂಪಿ ಪ್ರಸ್ತಾಪ ಮಾಡಿದೆ.
ನಿರ್ಮಾಣಕ್ಕೆ ಎಷ್ಟು ಕೋಟಿ ವೆಚ್ಚ?
ನವದೆಹಲಿ ಮೂಲದ ಅಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಇಂಕ್ ಸಿದ್ಧಪಡಿಸಿರುವ ಕಾರ್ಯಸಾಧ್ಯತಾ ವರದಿಯ ಪ್ರಕಾರ 11 ಎಲಿವೇಟೆಡ್ ಕಾರಿಡಾರ್ ಯೋಜನೆಗಳಿವೆ. ಅವುಗಳಲ್ಲಿ ಐದಕ್ಕೆ ಸುಮಾರು 10,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ತಿಳಿಸಿದ್ದಾರೆ.


Click it and Unblock the Notifications