ಪಾರ್ಕಿಂಗ್ ಮೇಲಿನ ಆಸ್ತಿ ತೆರಿಗೆ ಕಡಿತಕ್ಕೆ ಚಿಂತನೆ: ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕರ ಮೇಲೆ ಶುಲ್ಕದ ಹೊರೆ ಹೆಚ್ಚಾಗಿದೆ. ಈ ಬೆಲೆ ಏರಿಕೆಗಳ ನಡುವೆ ಶುಲ್ಕದ ಭಾರ ತಡೆಯೋಕಾಗದೇ ಸಾಮಾನ್ಯ ವರ್ಗದ ಜನರು, ದಿಕ್ಕೆಟ್ಟು ಹೋಗಿದ್ದಾರೆ. ಇಂಥಾ ಹೊತ್ತಲ್ಲೇ ಬಿಬಿಎಂಪಿ ಜನರಿಗೆ ಒಂದು ನಿಟ್ಟುಸಿರು ಬಿಡುವ ಸುದ್ದಿ ನೀಡಲು ಪ್ರಯತ್ನಿಸುತ್ತಿದೆ. ಅಂದರೆ ಪಾರ್ಕಿಂಗ್ ಪ್ರದೇಶಗಳಿಗೆ ಆಸ್ತಿ ತೆರಿಗೆ ದರಗಳಲ್ಲಿ ಗಮನಾರ್ಹ ಕಡಿತ ಮತ್ತು ಪ್ರಮಾಣೀಕರಣ ಮಾಡಬೇಕೆಂದು ಬಿಬಿಎಂಪಿ ಪ್ರಸ್ತಾಪಿಸಿದೆ. ಇದರ ಅನುಸಾರ ಯೂನಿಟ್ ಏರಿಯಾ ಮೌಲ್ಯದ ಮೇಲೆ ತೆರಿಗೆ ವಿಧಿಸುವ ಚಿಂತನೆ ನಡೆಸುತ್ತಿದೆ.

ಇನ್ನು ಬೆಲೆ ಏರಿಕೆಗಳ ನಡುವೆ ಈ ತೆರಿಗೆ ಹೊಸದಾಗಿ ವಿಧಿಸಿರುವುದು ಎಂಬ ತಪ್ಪು ಸಂದೇಶ, ಹಲವೆಡೆ ಹರಡಿದೆ. ಇದರಿಂದ ಸಾಮಾನ್ಯ ವರ್ಗದ ಜನರು ಕೋಪಗೊಂಡಿದ್ದರು. ಆದರೆ ಇದು ಇತ್ತೀಚೆಗೆ ವಿಧಿಸಿರುವ ಹೊಸ ತೆರಿಗೆಯಲ್ಲ. ಇದು ದಶಕಗಳಿಂದ ಜಾರಿಯಲ್ಲಿರುವ ಲೆವಿಯ ತರ್ಕಬದ್ಧಗೊಳಿಸುವಿಕೆ ಎಂದು ನಾಗರಿಕ ಸಂಸ್ಥೆ ಸ್ಪಷ್ಟಪಡಿಸಿದೆ.
ದಶಕಗಳಿಂದ ಅಂದರೆ, 2008ರಿಂದಲೂ ನಗರದ ಆಸ್ತಿ ಮಾಲೀಕರು, ಪಾರ್ಕಿಂಗ್‌ಗಾಗಿ ಮೀಸಲಿಟ್ಟ ಪ್ರದೇಶಗಳ ಮೇಲೆ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ. ಈ ಪಾರ್ಕಿಂಗ್‌ಗಾಗಿ ಅನ್ವಯವಾಗುವ ದರವನ್ನು ಐತಿಹಾಸಿಕವಾಗಿ ಮುಖ್ಯ ಆಸ್ತಿಯ ಯುಎವಿಯ 50% ಎಂದು ನಿಗದಿಪಡಿಸಲಾಗಿದೆ. ಹಾಗೆಯೇ ಇದರ ಅನುಸಾರ ವಾಣಿಜ್ಯ ಆಸ್ತಿಗಳಲ್ಲಿ ಪ್ರತಿ ಚದರ ಅಡಿಗೆ ಸುಮಾರು 12.5 ರೂ.ಗಳನ್ನು ಪಾರ್ಕಿಂಗ್ ಪ್ರದೇಶದ ತೆರಿಗೆಯನ್ನಾಗಿ ಅನುವಾದಿಸಿತು. ಆದರೀಗ ವಾಣಿಜ್ಯ ಸ್ಥಳಗಳಿಗೆ ಪ್ರತಿ ಚದರ ಅಡಿಗೆ ಸರಾಸರಿ 7 ರೂಪಾಯಿ ಮತ್ತು ವಸತಿ ಪ್ರದೇಶಗಳಿಗೆ ಪ್ರತಿ ಚದರ ಅಡಿಗೆ 2.1 ರೂಪಾಯಿ ಪಾರ್ಕಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲು, ಬಿಬಿಎಂಪಿ ಫ್ಲಾಟ್ ದರವನ್ನು ಪ್ರಸ್ತಾಪಿಸಿದೆ
ಅಂದಹಾಗೆ ವಾಣಿಜ್ಯ ಮತ್ತು ಇತರ ವಸತಿಯೇತರವಾಗಿರುವ ಆಸ್ತಿಗಳಿಗೆ ಬೇರೆಯದ್ದೇ ಮೊತ್ತವಾಗಿದೆ. ಅಂದರೆ ಇವುಗಳಲ್ಲಿ ಪ್ರತಿ ಚದರ ಅಡಿಗೆ 3 ರೂಪಾಯಿ ಮತ್ತು ವಸತಿ ಆಸ್ತಿಗಳಿಗೆ ಪ್ರತಿ ಚದರ ಅಡಿಗೆ 2 ರೂಪಾಯಿ ಎನ್ನಲಾಗಿದೆ. ಈ ಪರಿಷ್ಕೃತ ದರಗಳು ಕರಡು ಅಧಿಸೂಚನೆಯ ಭಾಗವಾಗಿದೆ. ಆದರೆ ಈ ಪರಿಷ್ಕರಣೆಯ ದರ ಇನ್ನೂ ಜಾರಿಗೆ ಬಂದಿಲ್ಲ.
ಮುಖ್ಯವಾಗಿ ಬೆಂಗಳೂರು ನಾಗರಿಕರ ಮೇಲಿರುವ ದೊಡ್ಡ ಆರ್ಥಿಕ ಭಾರವನ್ನು, ಕಡಿಮೆ ಮಾಡುವ ಉದ್ದೇಶ ಬಿಬಿಎಂಪಿಗಿದೆ. ಅದಕ್ಕಾಗಿ ಪಾರ್ಕಿಂಗ್ ಸ್ಥಳಗಳ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕರಡು ಹೊರಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ. ಆದರೆ ದುರದೃಷ್ಟವಶಾತ್, ಮಾಧ್ಯಮಗಳ ಕೆಲವು ಭಾಗಗಳು ಇದನ್ನು ಹೊಸ ತೆರಿಗೆಯ ಪರಿಚಯ ಎಂದು ತಪ್ಪಾಗಿ ನಿರೂಪಿಸಿವೆ, ಇದು ಸಂಪೂರ್ಣವಾಗಿ ತಪ್ಪಾಗಿದೆ. ಇದು ಕಡಿತ ಮತ್ತು ತರ್ಕಬದ್ಧಗೊಳಿಸುವ ಕ್ರಮವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ಇದು ಹೊಸ ತೆರಿಗೆ ಎಂಬ ವದಂತಿ ನಾಗರಿಕರವರೆಗೂ ಹರಡಿದ್ದು, ಅದನ್ನು ನಿರ್ಲಕ್ಷಿಸುವಂತೆ ಬಿಬಿಎಂಪಿ ಕೋರಿಕೆ ಮಾಡಿದೆ. ಈ ವದಂತಿ ಬದಲಾಗಿ ಪ್ರಸ್ತಾವಿತ ಕಡಿತದ ಲಾಭವನ್ನು ಪಡೆದುಕೊಳ್ಳುವಂತೆ ನಾಗರಿಕರನ್ನು ತಿಳಿಸಿದೆ. ಹಾಗೆಯೇ ಇದು ತೆರಿಗೆಯನ್ನು ಸರಳೀಕರಿಸುವ ಜೊತೆಗೆ ಉತ್ತಮ ನಗರ ಯೋಜನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಾಸ್ತವವಾಗಿ, ನಾಗರಿಕರ ಪ್ರತಿಕ್ರಿಯೆಯ ಆಧಾರದ ಮೇಲೆ, ಸರ್ಕಾರವು ವಸತಿ ಪಾರ್ಕಿಂಗ್ ತೆರಿಗೆ ದರಗಳಲ್ಲಿ ಮತ್ತಷ್ಟು ಕಡಿತವನ್ನು ಪರಿಗಣಿಸುತ್ತಿದೆ.
ಇನ್ನು 2024-2ರ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ, ಪಾರ್ಕಿಂಗ್ ಸಂಬಂಧಿತ ಆಸ್ತಿ ತೆರಿಗೆಯಿಂದ ಸಂಗ್ರಹಿಸಲಾದ 211 ಕೋಟಿ ರೂ.ಗಳಿಂದ ಸುಮಾರು 40 ಕೋಟಿ ರೂ.ಗಳ ಆದಾಯ ಕೊರತೆಯನ್ನು ನಿರೀಕ್ಷಿಸಲಾಗಿದೆ ಎಂಬ ಅಸಮಾಧಾನದ ಸಂಗತಿ ಹೊರ ಬಿದ್ದಿದೆ. ಬಿಬಿಎಂಪಿಯ ಈ ಹೊಸ ನಿರ್ಧಾರವು ಒಂದು ಸಕಾರಾತ್ಮಕ ಹೆಜ್ಜೆಯಾಗಿ ಪರಿಗಣಿಸಬಹುದು. ಇದು ದಶಕಗಳಿಂದಲೂ ಅಸಮಂಜಸವಾಗಿದ್ದ ಪಾರ್ಕಿಂಗ್ ಆಸ್ತಿಗಳ ತೆರಿಗೆ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿ, ಸರಳೀಕರಣದ ಮೂಲಕ ನಾಗರಿಕರಿಗೆ ನಿವೇಶನ ಶ್ರೇಣಿಯ ಆಧಾರದ ಮೇಲೆ ನ್ಯಾಯಸಮ್ಮತವಾದ ತೆರಿಗೆ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇಂಥ ಕ್ರಮದಿಂದ ಒಂದು ಕಡೆ ಬಿಬಿಎಂಪಿಗೆ ಸಮಂಜಸ ಆದಾಯ ಬರಲು ಸಾಧ್ಯವಾಗುತ್ತದೆ, ಮತ್ತೊಂದೆಡೆ ನಾಗರಿಕರ ಮೇಲೆ ಇರುವ ತೆರಿಗೆ ಭಾರವನ್ನು ಕೂಡ ಸುಧಾರಿಸಬಹುದಾಗಿದೆ. ನಾಗರಿಕರ ಸಹಕಾರದಿಂದ ಮತ್ತು ಸ್ಪಷ್ಟ ಮಾಹಿತಿ ಹರಿವಿನಿಂದ ಈ ಪ್ರಸ್ತಾವಿತ ವ್ಯವಸ್ಥೆ ಜನಪರವಾಗಬಹುದೆಂಬ ನಿರೀಕ್ಷೆಯಿದೆ.
More From GoodReturns

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ



Click it and Unblock the Notifications