ಇಲ್ಲಿ ಕೇಳಿ..ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಇಂದು (ಮಾರ್ಚ್ 31) ಕೊನೆಯ ದಿನವಾಗಿದೆ. ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ತೆರಿಗೆಯನ್ನು ನೀವು ಈ ದಿನ ಮುಗಿಯವ ಬಳಗೆ ಪಾವತಿ ಮಾಡಬೇಕು.ಇಲ್ಲವಾದಲ್ಲಿ ಡಬಲ್ ಹಣವನ್ನು ಕಟ್ಟಬೇಕಾಗುತ್ತದೆ. ಹಾಗಿದ್ರೆ ಎಷ್ಟು ದಂಡ ಕಟ್ಟಬೇಕು? ಬಡ್ಡಿ ಎಷ್ಟು ಬರಬಹುದು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಹೌದು. ಆಸ್ತಿ ತೆರಿಗೆ ಪಾವತಿಗೆ ಇವತ್ತೇ ಇದೇ ಕೊನೆಯದಿನ. ಇಂದು ಆಸ್ತಿ ತೆರಿಗೆ ಪಾವತಿ ಮಾಡದಿದ್ರೆ ತೆರಿಗೆ ಜೊತೆಗೆ 100% ದಂಡ ಕೂಡ ಪಾವತಿಸಬೇಕಾಗುತ್ತದೆ. ನಿಮ್ಮ ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಕಟ್ಟಬೇಕಾಗುತ್ತದೆ. ಇದರ ಜೊತೆಗೆ ವಾರ್ಷಿಕ ಶೇ.15 ಬಡ್ಡಿ ಸಹ ಇರುತ್ತದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಯಲ್ಲಿ ಈ ಹಿಂದೆ ಮೊತ್ತವು ದುಪ್ಪಟ್ಟುಗೊಳಿಸಿತ್ತು ದಂಡವನ್ನು ಕಡಿತ ಮಾಡಿ, ಇತ್ತೀಚೆಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಈಗ ಆಸ್ತಿ ತೆರಿಗೆಯ ಸಮಾನ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.
100 ರೂ. ಆಸ್ತಿ ತೆರಿಗೆ ಇದ್ದರೆ, ಇನ್ನೂ 100 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ, ಈ ಕೊನೆಯ ಅವಕಾಶವು ಇಂದು (ಮಾರ್ಚ್ 31) ಮುಕ್ತಾಯಗೊಳ್ಳುತ್ತದೆ. ಅದರ ನಂತರ, ಇನ್ನೂ ತೆರಿಗೆ ಪಾವತಿಸದಿದ್ದರೆ, 100% ದಂಡ (ಆಸ್ತಿ ತೆರಿಗೆಯ ಮೊತ್ತದ ಸಮಾನ) ಜೊತೆಗೆ 15% ಬಡ್ಡಿಯೂ ಲಭ್ಯವಾಗುತ್ತದೆ.
ಯಾವ ವರ್ಷದ ತೆರಿಗೆ ಬಾಕಿಗೆ ಎಷ್ಟು ಬಡ್ಡಿ ಬಿಳುತ್ತೆ?
2022-23 ಸಾಲಿನ ವರ್ಷದ ಅಥವಾ ಅದಕ್ಕಿಂತ ಮೊದಲಿನ ತೆರಿಗೆ ಬಾಕಿಗೆ ವಾರ್ಷಿಕ ಶೇ 9 ರ ಬಡ್ಡಿಇದೆ. 2023-24 ರ ಬಾಕಿಗೆ ಶೇ 15 ರ ಬಡ್ಡಿ ವಿಧಿಸಲಾಗುತ್ತದೆ. 2024-25 ರ ಹಣಕಾಸು ವರ್ಷಕ್ಕೆ ತೆರಿಗೆ ಬಾಕಿ ಇದವರಿಗೆ ಶೇ 15 ರ ಬಡ್ಡಿ ಕಟ್ಟಬೇಕಾಗುತ್ತದೆ.
ಉದಾಹರಣೆಗೆ:
1,000 ರೂ. ಆಸ್ತಿ ತೆರಿಗೆ ಇದ್ದರೆ, 1,000 ರೂ. ದಂಡದೊಂದಿಗೆ 15% ಬಡ್ಡಿ (150 ರೂ.) ಸೇರಿಕೊಂಡು, ಒಟ್ಟು 2,150 ರೂ. ಪಾವತಿ ಮಾಡಬೇಕಾಗುತ್ತದೆ.
ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಇಲ್ಲಿಯವರಿಗೆ 4,604 ಕೋಟಿ ರೂಪಾಯಿ ವಸೂಲಿ ಆಗಿದೆ.
ಮಾರ್ಚ್ 31 ರವರೆಗೆ ಆಸ್ತಿ ತೆರಿಗೆ ಪಾವತಿಸದವರು ಮುಂದಿನ ಆರ್ಥಿಕ ವರ್ಷ ಪ್ರಾರಂಭವಾದ ನಂತರ 100% ದಂಡವನ್ನು ಕಟ್ಟಬೇಕಾಗುತ್ತದೆ. ಆದರೆ, ಇಂದು ರಾತ್ರಿ 12 ಗಂಟೆ ಒಳಗೆ ತೆರಿಗೆ ಪಾವತಿಸಿದರೆ, ಸಮಾನ ಮೊತ್ತದ ದಂಡ (ಆಸ್ತಿ ತೆರಿಗೆಯ ಮೊತ್ತದ ಸಮಾನ ದಂಡ) ಹೊರತುಪಡಿಸಿ, ನೀವು ಬಚಾವ್ ಆಗಬಹುದು.
ಬಿಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ) ಕಂದಾಯ ಇಲಾಖೆಯು ರಂಜಾನ್ ರಜೆಯನ್ನು ರದ್ದುಪಡಿಸಿ ಇಂದು ರಾತ್ರಿ 11 ರವರೆಗೆ ಕಚೇರಿಗಳನ್ನು ತೆರೆದಿಡಲಿದೆ, ಇದರಿಂದ ಆಸ್ತಿ ತೆರಿಗೆ ಪಾವತಿಗೆ ಸಹಾಯ ಮಾಡಲಾಗುತ್ತಿದೆ. ಹೀಗಾಗಿ, ಆಸ್ತಿ ತೆರಿಗೆ ಪಾವತಿಸಲು ಇಂದು ರಾತ್ರಿ 11 ಗಂಟೆ ತನಕ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ, ನಿಮ್ಮ ತೆರಿಗೆ ಪಾವತಿಯನ್ನು ಮಾಡಿ, 100% ದಂಡ ಹಾಗೂ 15% ಬಡ್ಡಿ ತಪ್ಪಿಸಿಕೊಳ್ಳಲು ಅವಕಾಶವಿದೆ. ಆದ್ದರಿಂದ, ಇದನ್ನು ಗಮನದಲ್ಲಿ ಇಟ್ಟುಕೊಂಡು ತೆರಿಗೆ ಪಾವತಿಸದಿದ್ದರೆ ನಿಮ್ಮ ಹಣಕಾಸಿನ ಮೇಲೆ ಒತ್ತಡ ಬೀರುವುದಿಲ್ಲ. ನೀವು ಬಿಬಿಎಂಪಿ ಕಾಯ್ದೆಯಲ್ಲಿ ತಿದ್ದುಪಡಿ ಹಿನ್ನೆಲೆ ಡಬಲ್ ತೆರಿಗೆಯನ್ನು ಕಟ್ಟಬೇಕಾಗುತ್ತದೆ


Click it and Unblock the Notifications