ಬೆಂಗಳೂರು: ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 2,000 ಅರ್ಜಿಗಳನ್ನು ತಿರಸ್ಕರಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶದ ಬಳಿಕ ಸ್ಥಳೀಯ ಯೋಜನಾ ಅಧಿಕಾರಿಗಳು ಪ್ಲ್ಯಾಟ್ ಲೇಔಟ್ ಅಭಿವೃದ್ಧಿಗೆ ಅನುಮೋದನೆ ನೀಡಿದರೆ ಮಾತ್ರ ನೀಡಲು ನಿರ್ಧರಿಸಿದೆ.
ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಒಂದು ತಿಂಗಳಲ್ಲಿ ಕಟ್ಟಡ ನಿರ್ಮಾಣದ 1000 ಅರ್ಜಿಗಳು ಬಂದಿವೆ. ಇನ್ನು ಕೆಳ ತಿಂಗಳಿನಿಂದ ಸುಮಾರು 2000 ಅರ್ಜಿಗಳು ಪೆಂಡಿಂಗ್ ಇವೆ. ಈ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಅಗತ್ಯ ಕಡತಗಳನ್ನು ಲಗತ್ತಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಹಿತದ ದೃಷ್ಟಿಯಿಂದ ಆದೇಶವನ್ನು ಮಾರ್ಪಡಿಸುವಂತೆ ನೋಂದಾಯಿತ ಎಂಜಿನಿಯರ್‌ಗಳ ಗುಂಪು ಬಿಬಿಎಂಪಿಗೆ ಮನವಿ ಮಾಡಿಕೊಂಡಿದೆ.

ಎಂಜಿನಿಯರ್‌ಗಳು ಏನು ಹೇಳುತ್ತಾರೆ?
ಬಿಬಿಎಂಪಿ ಯ ಕೋರ್ ಪ್ರದೇಶಗಳಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿರುವ ಆಸ್ತಿಗಳ ಮೇಲೆ ಈ ಆದೇಶ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವುಗಳಲ್ಲಿ ಹೆಚ್ಚಿನ ಕಟ್ಟಡ ಯೋಜನೆ ಅನುಮೋದನೆ ಪಡೆಯುವಲ್ಲಿ ಯಾವುದೇ ಸಮಸ್ಯೆ ಎಂದು ಇಂಜಿನಿಯರ್ ಪ್ರಸನ್ನ ಬಿಸಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಈ ಆದೇಶ ಬೊಮ್ಮನಹಳ್ಳಿ, ಮಹಾದೇವಪುರ, ಆರ್‌ಆರ್ ನಗರ, ದಾಸರಹಳ್ಳಿ ಹಾಗೂ ಯಲಹಂಕ ವಲಯದಲ್ಲಿ ಇವರುವವರಿಗೆ ತೊಂದರೆ ಆಗುತ್ತದೆ. ಏಕೆಂದರೆ ಇತ್ತೀಚಿನ ಪಾಲಿಕೆ ಆದೇಶದ ಪ್ರಕಾರ ಕಟ್ಟಡ ನಿರ್ಮಾಣ ಯೋಜನೆ ಮಂಜೂರಾತಿ ಪಡೆಯುವುದು ಸಾಧ್ಯವಾಗುತ್ತಿಲ್ಲ.
ಈ ಪ್ರದೇಶದಲ್ಲಿರುವ ಶೇಕಡಾ 30 ರಿಂದ 40 ರಷ್ಟು ಲೇಔಟ್‌ಗಳು ಮಾತ್ರ ಬಿಡಿಎ, ಕೆಎಚ್‌ಬಿ ಹಾಗೂ ಇತರೆ ಅನುಮತಿ ಪಡೆದಿವೆ. ಇನ್ನು ಉಳಿದ ಶೇಕಡಾ 60 ರಿಂದ 70 ಪ್ರತಿಷತ ಲೇಔಟ್ ಗಳು ಯಾವುದೇ ಪರವಾನಿಗೆ ಪಡಿದಿಲ್ಲ ಎಂದು ಪ್ರಸನ್ನ ಬಿಸಿ ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ಪಾಲಿಕೆ ನೀಡಿರುವ ಆದೇಶದ ಬಗ್ಗೆ ಇನ್ನೊಬ್ಬ ಎಂಜಿನಿಯರ್ ಬೆಳಕು ಹರಿಸಿದ್ದಾರೆ. ಬಿಬಿಎಂಪಿ ಹೊಸ ಆದೇಶದಿಂದ ಚಿಕ್ಕ ಸೈಟ್ ಹೊಂದಿದವರು ಸಹ ಪರವಾನಿಗೆ ಪಡೆಯುವುದು ಅಗತ್ಯವಾಗಿದೆ. ಆದರೆ ಶೇಕಡಾ 10 ರಷ್ಟು ಆಸ್ತಿಯನ್ನು ನಾಗರಿಕ ಸೌಲಭ್ಯಗಳಿಗೆ ಹಸ್ತಾಂತರಿಸಿದ್ದರಿಂದ ಅವರು ಅದನ್ನು ಪಡೆಯಲು ಸಾಧ್ಯವಿಲ್ಲ.
ಎಂಜಿನಿಯರ್‌ಗಳ ಪ್ರಕಾರ, ಬಡ ಮತ್ತು ಮಧ್ಯಮ ವರ್ಗದ ಜನರು ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ ಪಡೆಯಲು ಸಾಧ್ಯವಿಲ್ಲ. ಕಟ್ಟಡ ನಿರ್ಮಿಸಲು ಪರವಾನಿಗೆ ಲಭಿಸಿಲ್ಲ ಎಂದು ಅವರು ಮನೆ ಕಟ್ಟುವುದನ್ನು ನಿಲ್ಲಿಸಲು ಸಾಧ್ಯವೆ ಇಲ್ಲ. ಬಿಬಿಎಂಪಿ ಅವರು ನಿರ್ಮಿಸಿದ ಕಟ್ಟಡಗಳ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಕಾನೂನನ್ನು ಗೌರವಿಸಿ ಕಟ್ಟಡ ಕಟ್ಟದ ಖಾಲಿ ಪ್ಲಾಟ್ ಬಿಟ್ಟು ಬಿಡುತ್ತಾರೆ. ಹೀಗಾಗಿ ಬಿಬಿಎಂಪಿ ಅವರ ಆಸ್ತಿಯಿಂದ ತೆರಿಗೆ ಸಂಗ್ರಹಿಸಲು ಸಾಧ್ಯವಿಲ್ಲ.
ಸಿಟಿಎಸ್ ನಂಬರ್ ಇರುವವರಿಗೆ ಅನುಮೋದನೆ ನೀಡಲು ಯಾವುದೇ ತೊಂದರೆ ಇಲ್ಲ ಎಂದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಮತ್ತು ಕರ್ನಾಟಕ ಗೃಹ ಮಂಡಳಿ (KHB), ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಫಲಾನುಭವಿಗಳ ಹಂಚಿಕೆಗೂ ಯಾವುದೇ ತೊಂದರೆ ಇಲ್ಲ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications