ಸ್ವಚ್ಛ ಸರ್ವೇಕ್ಷಣ 2024: ಸ್ವಚ್ಛತೆ ಕಡೆಗೆ ಒಂದು ಹೆಜ್ಜೆ..ಬೆಂಗಳೂರು ನಾಗರಿಕರು ಪಾಲ್ಗೊಳ್ಳುವಂತೆ ಬಿಬಿಎಂಪಿ ಮನವಿ..!

ಸ್ವಚ್ಛತೆ ಎಲ್ಲಾ ನಾಗರಿಕರ ಮೇಲಿರುವ ಜವಾಬ್ದಾರಿ. ನಮ್ಮ ನಗರ, ನಾವು ವಾಸಿಸುವ ಸ್ಥಳ ಎಷ್ಟು ಸ್ವಚ್ಛವಾಗಿರುತ್ತದೋ, ಅಷ್ಟೇ ಸ್ವಚ್ಛವಾದ ಗಾಳಿಯನ್ನು ಪ್ರಕೃತಿ ನೀಡುತ್ತದೆ. ಹೀಗಾಗಿ ಪ್ರತಿಯೊಬ್ಬರ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆ ಎನ್ನುವುದು ಅಗತ್ಯವಾಗಿ ಪಾಲಿಸಬೇಕಾಗಿದೆ. ಹೀಗಾಗಿಯೇ ಬಿಬಿಎಂಪಿ ಸ್ವಚ್ಛತೆ ಕಡೆಗೆ ಒಂದು ಹೆಜ್ಜೆ ಇಡಲು ಮುಂದಾಗಿದೆ. ಅಂದರೆ ಸ್ವಚ್ಛತೆಯ ದೃಷ್ಟಿಯಿಂದ ಸ್ವಚ್ಛ ಸರ್ವೇಕ್ಷಣ 2024 ಅಧಿಕೃತವಾಗಿ ಆರಂಭಿಸಿರುವ ಬಗ್ಗೆ, ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ತಿಳಿಸಿದೆ. ಹಾಗೂ ಬೆಂಗಳೂರಿನ ಎಲ್ಲಾ ನಾಗರಿಕರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.

ಸ್ವಚ್ಛ ಸರ್ವೇಕ್ಷಣ 2024: ಬೆಂಗಳೂರು ನಾಗರಿಕರಿಗೆ BBMP ಕರೆ..!

ನಗರವನ್ನು ಸ್ವಚ್ಛವಾಗಿಸಲು, ಆರೋಗ್ಯಕರಗೊಳಿಸಲು, ಮತ್ತು ಸುಸ್ಥಿರವನ್ನಾಗಿ ಮಾಡಲು ಸ್ವಚ್ಛತೆಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ. ಹೀಗಾಗಿಯೇ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ವಾರ್ಷಿಕ ಸಮೀಕ್ಷೆಯನ್ನು ನಡೆಸುತ್ತಿದೆ. ದೇಶದ ಎಲ್ಲಾ ನಗರಗಳ ಸ್ವಚ್ಛತಾ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ. ಹೀಗಾಗಿ ನಗರ ಸ್ವಚ್ಛತೆಗಾಗಿ ಬಿಬಿಎಂಪಿ ಈ ಸ್ವಚ್ಛ ಸರ್ವೇಕ್ಷಣಾ 2024 ಮೂಲಕ ಸ್ವಚ್ಛತೆ ಕಡೆಗೆ ಹೆಜ್ಜೆ ಇಟ್ಟಿದೆ. ಇದರಲ್ಲಿ ನಾಗರಿಕರ ಭಾಗವಹಿಸುವಿಕೆಯಿಂದ ಮಾತ್ರ ನಮ್ಮ ನಗರಕ್ಕೆ ಉತ್ತಮ ಶ್ರೇಣಿಯನ್ನು ತಲುಪಿಸಬಹುದು. ಹಾಗೂ ನಗರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರು ನಾಗರಿಕರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದೆ.

ಸ್ವಚ್ಛ ಸರ್ವೇಕ್ಷಣದ ಮಹತ್ವ ಏನು?

ಸ್ವಚ್ಛ ಸರ್ವೇಕ್ಷಣವು ನಗರಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಹುಟ್ಟುಹಾಕುತ್ತದೆ. ಇದು ಉತ್ತಮ ತ್ಯಾಜ್ಯ ನಿರ್ವಹಣೆ ಮತ್ತು ಶೌಚಾಲಯ ನಿರ್ವಹಣೆಯನ್ನು ಉತ್ತೇಜಿಸುವ ಮೂಲಕ ಸ್ವಚ್ಛತೆ ಎಡೆಗೆ ಜನರ ದೃಷ್ಟಿಕೋನವನ್ನು ಬದಲಿಸುತ್ತದೆ. ಈ ಸಮೀಕ್ಷೆಯು ತ್ಯಾಜ್ಯ ವಿಂಗಡನೆ, ತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ನಾಗರಿಕರ ಪ್ರತಿಕ್ರಿಯೆ ಮುಂತಾದ ವಿಷಯಗಳನ್ನು ಅಳೆಯುತ್ತದೆ. ಸ್ವಚ್ಛ ಪರಿಸರವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ಉತ್ತಮ ವಾಯು ಗುಣಮಟ್ಟವನ್ನು ಒದಗಿಸುತ್ತದೆ, ಮತ್ತು ನಗರಕ್ಕೆ ನೈಸರ್ಗಿಕ ಶೋಭೆಯನ್ನು ನೀಡುತ್ತದೆ. ಈ ಒಂದು ಉದ್ದೇಶದಿಂದ ಸ್ವಚ್ಛ ಭಾರತ ಅಭಿಯಾನ ಗುರಿಗಳನ್ನು ಅನುಸರಿಸುತ್ತದೆ. ಇದು ಭಾರತದ ಸ್ವಚ್ಛತೆ ಮತ್ತು ಹಸಿರನ್ನು ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಸ್ಥಳೀಯ ಆಡಳಿತವನ್ನು ಹೆಚ್ಚು ಹೊಣೆಗಾರರನ್ನಾಗಿಸುತ್ತದೆ ಎನ್ನಲಾಗಿದೆ.

ಇದರಲ್ಲಿ ಪಾಲ್ಗೊಳ್ಳುವುದು ಹೇಗೆ..?

ಬೆಂಗಳೂರು ನಾಗರಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು, sbmurban.org/feedback ಎಂಬ ವೆಬ್‌ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿ. ಸ್ವಚ್ಛತಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ವಚ್ಛತಾ ಸಮಸ್ಯೆಗಳನ್ನು ವರದಿ ಮಾಡಿ, ತ್ಯಾಜ್ಯ ಸಂಗ್ರಹಣೆಗಾಗಿ ಮನವಿ ಮಾಡಿ ಮತ್ತು ಸ್ಥಳೀಯ ಸ್ವಚ್ಛತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ. SS2024 ನಿಮ್ಮ ನಗರ ಅಪ್ಲಿಕೇಶನ್ ಮೂಲಕ ನಿಮ್ಮ ನಗರಕ್ಕಾಗಿ ಮತ ಚಲಾಯಿಸಿ ಮತ್ತು ಶ್ರೇಣೀಕರಣವನ್ನು ಪ್ರಭಾವಿತಗೊಳಿಸಿ.

ಸ್ವಚ್ಛ ನಗರದಿಂದ ಆಗುವ ಪ್ರಯೋಜನಗಳೇನು..?

ಈ ಸ್ವಚ್ಛ ಸರ್ವೇಕ್ಷಣಾ 2024ರಿಂದ ಕಸ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ರೋಗ ಹರಡುವಿಕೆಯನ್ನು ತಡೆಯಬಹುದು. ಸ್ವಚ್ಛ ಬೀದಿಗಳು ಮತ್ತು ಸಾರ್ವಜನಿಕ ಸ್ಥಳಗಳು ನಗರವನ್ನು ಆಕರ್ಷಕವಾಗಿಸುತ್ತವೆ. ಸ್ವಚ್ಛ ನಗರ ಪ್ರವಾಸಿಗರು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತದೆ, ಆದ್ದರಿಂದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ವಚ್ಛತೆ ಮತ್ತು ಸ್ವಸ್ಥ ಪರಿಸರ ನಾಗರಿಕರ ಸಮಗ್ರ ಸುಖ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ. ಒಟ್ಟಾರೆ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದಲೇ ಈ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮಗಳು ನಡೆಯುತ್ತಿವೆ.

ಬೆಂಗಳೂರಿನ ನಾಗರಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಿಬಿಎಂಪಿ ಮನವಿ ಮಾಡಿದೆ. ಅದರಂತೆ ಎಲ್ಲರೂ ಸಹಕರಿಸಿದರೆ ಸ್ವಚ್ಛ ಬೆಂಗಳೂರಿಗಾಗಿ ಶ್ರಮಿಸಿದ ಫಲ ದೊರೆಯುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+