ಬೀದಿ ನಾಯಿಗಳಿಗೆ 'ಚಿಕನ್ ರೈಸ್' ಈ ಯೋಜನೆಗಾಗಿ 2.88 ಕೋಟಿ ಖರ್ಚು.. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೇ ಮೊದಲ ಬಾರಿಗೆ ನಾಯಿಗಳಿಗೆ ಆಹಾರ ನೀಡುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಬೆಂಗಳೂರು ನಗರದಾದ್ಯಂತ ಸುಮಾರು 5,000 ಬೀದಿ ನಾಯಿಗಳಿಗೆ ಪ್ರತಿದಿನ 'ಚಿಕನ್ ರೈಸ್' ವಿತರಿಸುವಂತಹ ಗುರಿಯನ್ನು ಹೊಂದಿದೆ.
ಬಿಬಿಎಂಪಿ ಹೊಸ ಯೋಜನೆಯ ಮಾಹಿತಿ ಪ್ರಕಾರ ಪ್ರತಿ ಒಂದು ಬೀದಿ ನಾಯಿಗೆ ದಿವಸಕ್ಕೆ 22 ರೂಪಾಯಿಗಳನ್ನು ಖರ್ಚ ಮಾಡಲಾಗುತ್ತದೆ.ಸಾರಿಗೆ ವೆಚ್ಚ ಸೇರಿದಂತೆ ಸುಮಾರು ವರ್ಷಕ್ಕೆ ಅಂದಾಜು ಸುಮಾರು 2.88 ಕೋಟಿ ರೂಪಾಯಿಗಳಷ್ಟು ವೆಚ್ಚ ತಗುಲುತ್ತದೆ.ಈ ಯೋಜನೆಯ ವ್ಯಾಪ್ತಿಗೆ ಸುಮಾರು 5,000 ಬೀದಿ ನಾಯಿಗಳನ್ನು ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ಈ ಯೋಜನೆಯು ಆರಂಭದಲ್ಲಿ 'ಕುಕ್ಕೀರ್ ತಿಹಾರ್' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬೀದಿ ಬದಿಯ ಪ್ರಾಣಿಗಳ ಆರೈಕೆಯಲ್ಲಿ ಸಮುದಾಯದ ಜವಾಬ್ದಾರಿಯನ್ನು ಹೆಚ್ಚಿಸಲು ಸಾರ್ವಜನಿಕ ಭಾಗವಹಿಸುವಿಕೆಯ ಅಭಿಯಾನವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ನಗರದಲ್ಲಿ ಪದೇ ಪದೇ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಆಹಾರ ಕಾರ್ಯಕ್ರಮವನ್ನು ಜಾರಿಗೆ ತರುವುದರಿಂದ ಬೀದಿ ನಾಯಿಗಳ ಕಡಿತ ಕಡಿಮೆಯಾಗುವುದು. ಬೀದಿನಾಯಿಗಳಿಗೆ 'ಚಿಕನ್ ರೈಸ್' ನೀಡುವುದರಿಂದ ಆಹಾರದ ಕೊರೆತೆ ಉಂಟಾಗುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಅವರು ಮಾಹಿತಿಯನ್ನು ತಿಳಿಸಿದ್ದಾರೆ.
ಈ ಹಿಂದೆ ಬಿಬಿಎಂಪಿಯು ನಾಗರಿಕರಿಗೆ ಸ್ವಯಂಸೇವಕರಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಮನವಿ ಮಾಡಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರದ ಕಾರಣ, ಯೋಜನೆಗೆ ಹಣವನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿಯನ್ನು ತಿಳಿಸಿದ್ದಾರೆ.
ಬಿಬಿಎಂಪಿ ಹೊರಡಿಸಿರುವ ಟೆಂಡರ್ ಪ್ರಕಾರ, ಪಶುಸಂಗೋಪನಾ ಇಲಾಖೆಯು ಬಿಬಿಎಂಪಿಯ ಎಂಟು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ, ಆರ್.ಆರ್ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಯಲಹಂಕ ಮತ್ತು ಮಹದೇವಪುರಗಳಲ್ಲಿ ಪ್ರತಿ ವಲಯಕ್ಕೆ 500 ನಾಯಿಗಳಿಗೆ ಪ್ರತಿದಿನ ಆಹಾರ ಸೇವೆಗಳನ್ನು ಒದಗಿಸಲು ನೋಂದಾಯಿತ ಸೇವಾ ಪೂರೈಕೆದಾರರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಮೊದಲ ಹಂತದ ಮಾರಾಟಗಾರು ದಿನಕ್ಕೆ ಸುಮಾರು 4,000 ನಾಯಿಗಳಿಗೆ ಮಾತ್ರ ಆಹಾರ ನೀಡಲಾಗುತ್ತದೆ.ಆದರೆ, ವಲಯಗಳಲ್ಲಿ ಒಟ್ಟು ಅಂದಾಜು ಸಂಖ್ಯೆ 5,000 ಆಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ದಿಂದ ನೋಂದಾಯಿಸಲ್ಪಟ್ಟ ಆಹಾರ ಸೇವಾ ಪೂರೈಕೆದಾರರು ಮಾತ್ರ ಬೀದಿ ನಾಯಿ ಆಹಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಳ್ಳತ್ತಾರೆ. ಇವರು ಆಹಾರ ಪೂರೈಕೆಗೆ ಒಪ್ಪಿಕೊಂಡ ಒಪ್ಪಂದ ಒಂದು ವರ್ಷದವರೆಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ. ಮಾರಾಟಗಾರು ಇನ್ನೂ ಮುಂದವರೆಸಬೇಕೆದುಕೊಂಡರೆ ಬಿಬಿಎಂಪಿ ಮುಖ್ಯ ಆಯುಕ್ತರ ಅನುಮೋದನೆಗೆ ಅನುಗುಣವಾಗಿ ಒಂದು ವರ್ಷದವರೆಗೆ ವಿಸ್ತರಿಸುವ ಸಾಧ್ಯತೆಯಿದೆ.
ಬೀದಿ ನಾಯಿ ಆಹಾರ ಪೂರೈಕೆ ಕಾರ್ಯಕ್ರಮದಲ್ಲಿ ಆಯ್ಕೆ ಪ್ರಕ್ರಿಯೆಯು ಕಡಿಮೆ ವೆಚ್ಚದ ಆಯ್ಕೆ (LCS) ವಿಧಾನವನ್ನು ಆಯ್ಕೆ ಮಾಡಿಕೊಡಲಾಗುತ್ತದೆ.ಈ ಪ್ರಕ್ರಿಯೆಯು ಸಂಪೂರ್ಣವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ (https://kppp.karnataka.gov.in) ಮೂಲಕ ನಡೆಯುತ್ತದೆ.
ಬೆಂಗಳೂರಿನ ಎಂಟು ವಲಯಗಳಲ್ಲಿ ಪ್ರತಿಯೊಂದಕ್ಕೂ ನಾಯಿ ಆಹಾರ ಸೇವೆಗಾಗಿ ಅಂದಾಜು ವಾರ್ಷಿಕ ಬಜೆಟ್ 36 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಏಜೆನ್ಸಿಗಳು ಒಂದು ಅಥವಾ ಹೆಚ್ಚಿನ ವಲಯಗಳಿಗೆ ಬಿಡ್ ಸಲ್ಲಿಸಬಹುದು. ಆದರೆ, ಬಹು ವಲಯಗಳ ಅಂತಿಮ ಹಂಚಿಕೆಯು ಅರ್ಹ ಬಿಡ್ ಸಲ್ಲಿಸಿದವರ ಒಟ್ಟು ಸಂಖ್ಯೆಯ ಮೇಲೆ ಅವಲವಿತವಾಗುರುತ್ತದೆ.
ಆಯ್ಕೆಯಾದ ಮಾರಾಟಗಾರರು ಅಡುಗೆಗಾಗಿ ಅಗತ್ಯವಾದ ಮೂಲಸೌಕರ್ಯವನ್ನು ಅವರೇ ಭರಿಸಬೇಕಾಗುತ್ತದೆ. ಇದಲ್ಲದೇ ನೀರು ಮತ್ತು ವಿದ್ಯುತ್ ಬಿಲ್‌ಗಳು ಸೇರಿದಂತೆ ಖರ್ಚುಗಳನ್ನು ಸಹ ಅವರೇ ನೋಡಿಕೊಳ್ಳಬೇಕು. ಬೀದಿ ನಾಯಿಗಳು ಆಹಾರ ನೀಡುವ ಸ್ಥಳಗಳಲ್ಲಿ ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ.
ಬೀದಿ ನಾಯಿಗಳಿಗಾಗಿ ತಯಾರಿಸಿದ ಊಟವು ಕಟ್ಟುನಿಟ್ಟಾದ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಆಹಾರವನ್ನು ಒಂದು ಕಡೆ ತಯಾರಿಸಿ, ಪ್ರತಿ ವಲಯದಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ವಿತರಣೆಯನ್ನು ಅವರು ಮಾಡಬೇಕು.
ಒಟ್ಟಾರೆಯಾಗಿ ಬಿಬಿಎಂಪಿಯ ಈ ನೂತನ ಯೋಜನೆಯು ಬೀದಿ ನಾಯಿಗಳ ಹಸಿವು ನೀಗಿಸುವಲ್ಲಿ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಂತೂ ಇದೆ.


Click it and Unblock the Notifications