ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 1,212 ಫ್ಲಾಟ್ ಗಳನ್ನು ಡಿಸೆಂಬರ್ 14 ( ಶನಿವಾರ) ನಡೆದ ಫ್ಲಾಟ್ ಮೇಳದಲ್ಲಿ ಸ್ಥಳದಲ್ಲಿಯೇ ಮಾರಾಟ ಮಾಡಲಾಗುತ್ತಿದ್ದು, ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ.
ಹೌದು, ಫ್ಲಾಟ್ ಮೇಳ ಆಯೋಜಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇವಲ ಒಂದೇ ದಿನದಲ್ಲಿ 200 ಖರೀದಿದಾರರನ್ನು ಕಂಡು ಸಂತಸ ವ್ಯಕ್ತಪಡಿಸಿದೆ. ಸರಿಸುಮಾರು 600 ಜನರು ಮೇಳದಲ್ಲಿ ಭಾಗವಹಿಸಿದ್ದು, ಅದರಲ್ಲಿ 200 ಜನರಿಗೆ ತಮ್ಮ ಹಂಚಿಕೆ ಪತ್ರಗಳನ್ನು ಸ್ವೀಕರಿಸಲು ಸ್ಥಳದಲ್ಲೇ ಆರಂಭಿಕ ಠೇವಣಿ ಪಾವತಿಸಿ ಫಾಟ್ ಖರೀದಿ ಮಾಡಿದ್ದಾರೆ.

ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಿತು. ಅಲ್ಲದೇ, ತಿಪ್ಪಸಂದ್ರದಲ್ಲಿ ನಿರ್ಮಿಸಲಾಗಿರುವ ನೂರಾರು 1 BHK ಫ್ಲಾಟ್ ಗಳ ಮಾರಾಟವೂ ನಡೆಯಲಿದೆ.
3BHK ಫ್ಲಾಟ್ 30 ಲಕ್ಷ
ಬೆಂಗಳೂರು-ಮೈಸೂರು ರಸ್ತೆಗೆ ಸಮೀಪವಿರುವ ಕಣಮಿಣಿಕೆ ವಸತಿ ಸಂಕೀರ್ಣದಲ್ಲಿ ಒಟ್ಟು 748 2BHK ಮತ್ತು 464 3BHK ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು. 2BHK ಫ್ಲಾಟ್‌ಗಳ ಬೆಲೆ ರೂ. 25 ಲಕ್ಷದಿಂದ 30 ಲಕ್ಷ, 3BHK ಫ್ಲಾಟ್‌ಗಳ ಬೆಲೆ ರೂ. 40 ಲಕ್ಷದಿಂದ 64 ಲಕ್ಷ ವಿದೆ.
ಇನ್ನೂ ಫ್ಲಾಟ್ ಹೆಚ್ಚುವರಿಯಾಗಿ, 50 ವ್ಯಕ್ತಿಗಳು ಚೆಕ್‌ಗಳನ್ನು ಒದಗಿಸಿದ್ದಾರೆ ಮತ್ತು ಸೋಮವಾರ ಅವರ ಹಂಚಿಕೆ ಪತ್ರಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಫ್ಲಾಟ್‌ಗಳನ್ನು ಹಳೆಯ ದರದಲ್ಲಿ ಮಾರಾಟ ಮಾಡಲಾಗುತ್ತಿದೆ, ಆದರೆ ಉಳಿದ ಘಟಕಗಳ ಬೆಲೆಗಳನ್ನು ಶೀಘ್ರದಲ್ಲೇ ಪರಿಷ್ಕರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
1BHK ಫ್ಲಾಟ್‌ಗಳ ಬೆಲೆ ರೂ. 14.5 ಲಕ್ಷ
ತಿಪ್ಪಸಂದ್ರ ವಸತಿ ಯೋಜನೆಯ 1BHK ಫ್ಲಾಟ್‌ಗಳ ಬೆಲೆ ರೂ. 14.5 ಲಕ್ಷ ಎಂದು ಮಾಹಿತಿ ನೀಡಲಾಗಿದೆ ತಿಪ್ಪಸಂದ್ರ ವಸತಿ ಯೋಜನೆಯನ್ನು ಜೆ. ಪಿ. ನಗರ 9ನೇ ಫೇಸ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ಕನಕಪುರ ರಸ್ತೆಯಲ್ಲಿರುವ ಸೌತ್ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 1 ಕಿ. ಮೀ. ದೂರದಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು ಲೋನ್ ಪ್ರಕ್ರಿಯೆಗಳಿಗೆ ನೆರವಾದರು.
ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಬಿಡಿಎ ಹಣಕಾಸು ಸದಸ್ಯ ಡಾ.ಎ.ಲೋಕೇಶ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಇಂಬಾವಳಿ ಮತ್ತು ಬಸವ ರೆಡ್ಡಿ ಸೇರಿದಂತೆ ಬಿಡಿಎ ಅಧಿಕಾರಿಗಳು ಫ್ಲಾಟ್ ಮೇಳದಲ್ಲಿ ಉಪಸ್ಥಿತರಿದ್ದರು.


Click it and Unblock the Notifications