ಬೆಂಗಳೂರು ದುಬಾರಿ ದುನಿಯಾ ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಹೌದು,ಬೆಂಗಳೂರಿನಲ್ಲಿ ಎಲ್ಲನ್ನೂ ದುಬಾರಿಯೇ.. ಓಡಾಡುವ ಮೊಟ್ರೋದಿಂದ ಇಡಿದು ಅಡುಗೆ ಮಾಡುವ ಪದಾರ್ಥಗಳವರೆಗೂ ತುಂಬಾನೇ ಕಾಸ್ಟ್ಲಿ ಇರುತ್ತದೆ.ಆದರೆ ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಿದ್ದು, ಶೇ 20ರಿಂದ 45ರಷ್ಟು ತೆರಿಗೆಯನ್ನು ಹೆಚ್ಚಳ ಮಾಡಿ ಜನರಿಗೆ ಬೆಲೆ ಏರಿಕೆಯ ಬರೆಎಳೆದಿದೆ.ಇದು 22 ಲಕ್ಷ ಜನರಿಗೆ ತೆರಿಗೆ ಬಿಸಿ ಸುಡಲಿದೆ.
ಹೌದು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ಮೇಲಿನ ತೆರಿಗೆಯನ್ನು ಶೇ 20ರಿಂದ 45ರಷ್ಟು ಹೆಚ್ಚಿಸಿದೆ. ಈ ಬದಲಾವಣೆಗಳು ಆಸ್ತಿಯ ಪ್ರಕಾರ ಮತ್ತು ಸ್ಥಳೀಯ ಮಾರ್ಗದರ್ಶಿ ಮೌಲ್ಯಗಳ ಆಧಾರದ ಮೇಲೆ ವಿಧಿಸಲಾಗುತ್ತದೆ. ಇದಕ್ಕೆ ವಿವಿಧ ಬಡಾವಣೆಗಳ ನಿವಾಸಿಗಳಿಂದ ಹಾಗೂ ಸಂಘಗಳು ತೆರಿಗೆ ಹೆಚ್ಚಳದ ವಿರೋಧ ಅಗ್ರಹ ವ್ಯಕ್ತಪಡಿಸಿದ್ದಾರೆ.

1.22 ಲಕ್ಷದ ಜನರಿಗೆ ತೆರಿಗೆ ಏರಿಕೆಯ ಬಿಸಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೆಗೆದುಕೊಂಡ ಈ ತೆರಿಗೆ ಹೆಚ್ಚಳದ ನಿರ್ಧಾರವು ವಿಶೇಷವಾಗಿ ಬಿಡಿಎ ಅಭಿವೃದ್ಧಿಪಡಿಸಿದ ಮತ್ತು ಅನುಮೋದಿತ ಬಡಾವಣೆಗಳಲ್ಲಿ ನಿವಾಸವಾಗಿರುವ ಸಾವಿರಾರು ಜನರಿಗೆ ತೆರಿಗೆ ಏರಿಕೆಯ ಬಿಸಿ ತಟ್ಟಲಿದೆ.
ಈ ತೆರಿಗೆ ಹೆಚ್ಚಳದಿಂದ ಹತ್ತಿರದ 1.22 ಲಕ್ಷಕ್ಕೂ ಹೆಚ್ಚು ಮನೆಮಾಲೀಕರು/ನಿವಾಸಿಗಳು ಪ್ರಭಾವಿತರಾಗುವ ಸಾಧ್ಯತೆ ಇದೆ. ಪ್ರಭಾವಿತ ಪ್ರಮುಖ ಬಡಾವಣೆಗಳೆಂದರೆ ಅರ್ಕಾವತಿ ಬಡಾವಣೆ,ಬನಶಂಕರಿ ಬಡಾವಣೆ,ನಾಡಪ್ರಭು ಕೆಂಪೇಗೌಡ ಬಡಾವಣೆ,ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳು, ಹಂಚಿಕೆ ಮಾಡಿರುವ ವಸತಿ ಸಮುಚ್ಚಯಗಳು ಇತರ ಅಭಿವೃದ್ಧಿಗೊಳಿಸಿದ ಬಡಾವಣೆಗಳು (ಒಟ್ಟು 9 ಬಡಾವಣೆಗಳು)ಗಳು ಮೇಲೆ ಇದರ ಪ್ರಭಾವ ಇರಲಿದೆ. ಸುಮಾರು 1.22 ಲಕ್ಷಕ್ಕೂ ಹೆಚ್ಚು ಜನರಿಗೆ ತೆರಿಗೆ ಏರಿಕೆಯ ಬಿಸಿ ಮುಟ್ಟುಲಿದೆ.
ಹಲವು ವರ್ಷಗಳಿಂದ ಸಾವಿರ ರೂಪಾಯಿಗಳಷ್ಟಿದ್ದ ವರ್ಷಿಕ ತೆರಿಗೆ, ಈಗ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಇದು ಮಧ್ಯಮ ವರ್ಗದ ಮನೆಮಾಲೀಕರಿಗೆ ಆರ್ಥಿಕ ಒತ್ತಡವನ್ನು ತರಲಿದೆ. ಮುಖ್ಯವಾಗಿ ನಿವೃತ್ತರು, ನಿಜ ಜೀವನೋಪಾಯದೊಂದಿಗೆ ಬದುಕುತ್ತಿರುವವರು ಹೆಚ್ಚು ಪರಿಣಾಮವನ್ನು ಅನುಭವಿಸಲಿದ್ದಾರೆ. ಹಳೆಯ ವಲಯ ಆಧಾರಿತ ದರ ಬದಲು, ಪ್ರತಿ ಆಸ್ತಿಯ ಮಾರ್ಗದರ್ಶಿ ಮೌಲ್ಯದ ಆಧಾರದ ಮೇಲೆ ಹೊಸ ದರ ಪ್ರಭಾವ ಬೀರುತ್ತದೆ.
ಬಿಡಿಎ ಸ್ಪಷ್ಟನೆ ಏನು?
ಬಿಡಿಎ ಹೇಳುವಂತೆ ತೆರಿಗೆ ದರ ಪರಿಷ್ಕರಣೆ ದೀರ್ಘ ಕಾಲದ ಬಳಿಕ ಮಾಡಲಾಗಿದೆ. ಇದರಿಂದ ಬಡಾವಣೆ ನಿರ್ವಹಣೆ, ರಸ್ತೆಗಳು, ನೈರ್ಮಲ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಸಿಗುತ್ತದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಡಿಎ ಪ್ರತಿವರ್ಷ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳಿಂದ 55 ರಿಂದ 60 ಕೋಟಿ ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಹತ್ತು ವರ್ಷಕ್ಕೂ ಹೆಚ್ಚು ಕಾಲ, ಸುಮಾರು 40 ಕೋಟಿ ಬಾಕಿಯಾಗಿ ಉಳಿದಿದ್ದು, ಇನ್ನೂ ಇದು ಪಾವತಿಸದ ತೆರಿಗೆ ರೂಪದಲ್ಲಿದೆ. ಈ ಬಾಕಿಯು ವಸತಿಗೃಹಗಳು, ಖಾಸಗಿ ಬಡಾವಣೆಗಳು ಮತ್ತು ಕೆಲವು ವಾಣಿಜ್ಯ ಆಸ್ತಿಗಳಿಂದ ಬರುತ್ತದೆ. ಪರಿಷ್ಕೃತ ತೆರಿಗೆಯ ದರಗಳನ್ನು ಏಪ್ರಿಲ್ 28ರಂದು ವೆಬ್‌ಸೈಟ್‌ನಲ್ಲಿ ಬಿಡಿಎ ಪ್ರಕಟಿಸಿದೆ.
2025-26ನೇ ಸಾಲಿನ ಆಸ್ತಿ ತೆರಿಗೆಗಳನ್ನು ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ನಿರ್ಧರಿಸಲಾಗುವುದು. ಆಸ್ತಿ ಇರುವ ಸ್ಥಳ, ವಿಸ್ತೀರ್ಣ, ಆಸ್ತಿಯಿರುವ ಪ್ರದೇಶದಲ್ಲಿ ಮಾಡಿರಬಹುದಾದ ಯಾವುದೇ ಸುಧಾರಣೆ, ಮಾರ್ಪಾಡುಗಳ ಆಧಾರದ ಮೇಲೆ ತೆರಿಗೆ ನಿಗದಿ ಪಡಿಸಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದೆ.
ಒಟ್ಟಿನಲ್ಲಿ ಬೆಂಗಳೂರಿಗರು ಕಷ್ಟಪಟ್ಟು ದುಡಿದ ಹಣವನೆಲ್ಲಾ ಬೆಲೆ ಏರಿಕೆಯ ವಸ್ತುಗಳಿಗೆ ಹಾಗೂ ತೆರಿಗೆ ಕಟ್ಟುಬೇಕಾಗುತ್ತದೆ. ಒಂದರ ಮೇಲೆ ಒಂದಂತೆ ಬೆಲೆ ಏರಿಕೆಗಳು ಬೆಂಗಳೂರು ಜನರನ್ನು ಕಾಡುತ್ತಲೇ ಇದೆ.


Click it and Unblock the Notifications