ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ನೇಮಕಾತಿಗಳಿಗಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ 350 ಹುದ್ದೆಗಳನ್ನ ಒಳಗೊಂಡಿದೆ. BEL ನೇಮಕಾತಿ ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಇನ್ನು 31 ಜನವರಿ 2025ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ನೀಡಲಾಗಿದೆ. ಬಿಇ, ಬಿಟೆಕ್, ಬಿಎಸ್ಸಿ ತೇರ್ಗಡೆಯಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
BEL ಪ್ರೊಬೇಷನರಿ ಇಂಜಿನಿಯರ್ ನೇಮಕಾತಿ 2025
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 350 ಹುದ್ದೆಗಳಿಗೆ BEL ಪ್ರೊಬೇಷನರಿ ಇಂಜಿನಿಯರ್ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ಇನ್ನು ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಮುಂಚಿತವಾಗೆ ಒಂದಿಷ್ಟು ಮಾಹಿತಿ ತಿಳಿದಿರಬೇಕಾಗತ್ತದೆ. ಮೊದಲಿಗೆ BEL ಪ್ರೊಬೇಷನರಿ ಇಂಜಿನಿಯರ್ ಅಧಿಸೂಚನೆ 2025 ಅನ್ನು ಡೌನ್‌ಲೋಡ್ ಮಾಡಿ ನಂತರ ಅದರ ಮೂಲಕ ವೆಬ್‌ಸೈಟ್‌ಗಾಗಿ ನೇರ ಲಿಂಕ್ ಅನ್ನು ಬಳಸಿ.

BEL ಪ್ರೊಬೇಷನರಿ ಇಂಜಿನಿಯರ್ ನೇಮಕಾತಿ 2025 ಗಾಗಿ BEL ಅರ್ಜಿಗಳನ್ನು ಸ್ವೀಕರಿಸುತ್ತದೆ. ಅಭ್ಯರ್ಥಿಗಳು ಅಧಿಕೃತ ಅಪ್ಲಿಕೇಶನ್ ಲಿಂಕ್ ಅನ್ನು ಬಳಸಿಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗವು ಭಾರತದಾದ್ಯಂತ ಇರಲಿದೆ. ಇನ್ನು ಬಿಇ, ಬಿಎಸ್ಸಿ, ಬಿಟೆಕ್ ಪದವೀದರರು ಅರ್ಜಿ ಸಲ್ಲಿಸಬಹುದು ಇದರ ಅರ್ಜಿ ಶುಲ್ಕ 1000 ರೂ. ಇರುತ್ತದೆ.
ಪ್ರೊಬೇಷನರಿ ಇಂಜಿನಿಯರ್‌ಗಾಗಿ BELನಲ್ಲಿ 350 ಖಾಲಿ ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಯೊಂದು ಹುದ್ದೆಗೂ ತನ್ನದೇ ಆದ ಅರ್ಹತೆಗಳು ಮತ್ತು ಅನುಭವದ ಅವಶ್ಯಕತೆಗಳಿ ಇರುವಂತೆ ಈ ಹುದ್ದೆಗೂ ಕೂಡ ಒಂದಿಷ್ಟು ಅನುಭವ ಅರ್ಹತೆಗಳು ಬೇಕಾಗುತ್ತದೆ. BEL ಪ್ರೊಬೇಷನರಿ ಇಂಜಿನಿಯರ್ ಹುದ್ದೆಯ ಅವಕಾಶಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಎರಡು ರೀತಿಯ ಹುದ್ದೆಗಳು ಇರಲಿವೆ. ಪ್ರೊಬೇಷನರಿ ಇಂಜಿನಿಯರ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಹುದ್ದೆಗಳಿಗೆ ಪರೀಕ್ಷೆ ಇರಲಿದೆ. ಎಲೆಕ್ಟ್ರಾನಿಕ್ಸ್ ನಲ್ಲಿ 200 ಹುದ್ದೆ ಹಾಗು ಮೆಕ್ಯಾನಿಕಲ್ ನಲ್ಲಿ 150 ಹುದ್ದೆಗಳಿವೆ.
BEL ಪ್ರೊಬೇಷನರಿ ಇಂಜಿನಿಯರ್ ಅರ್ಜಿ ನಮೂನೆ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಒಟ್ಟು 350 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಅರ್ಜಿ ಆಹ್ವಾನಿಸಿದ್ದು, ಈ ಅರ್ಜಿ ಅಲ್ಲಿಕೆ ಈಗಾಗಲೇ ಆರಂಭವಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನ BEL ಆನ್‌ಲೈನ್ ಪೋರ್ಟಲ್ bel-india.in ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಇತರ ವಿಧಾನಗಳ ಮೂಲಕ ಮಾಡಿದ ಸಲ್ಲಿಕೆಗಳನ್ನ ಇಲ್ಲಿ ಸ್ವೀಕರಿಸಲಾಗುವುದಿಲ್ಲ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮಗಳು
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಸೇರಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನ ಅನುಸರಿಸಬೇಕು.
-BEL ಪ್ರೊಬೇಷನರಿ ಇಂಜಿನಿಯರ್ ನೇಮಕಾತಿ ಅಧಿಕೃತ ವೆಬ್‌ಸೈಟ್ ಪೋರ್ಟಲ್ bel-india.in ಗೆ ಭೇಟಿ ನೀಡಿ.
-ಪ್ರೊಬೇಷನರಿ ಇಂಜಿನಿಯರ್ ನೇಮಕಾತಿ ಲಿಂಕ್‌ಗಾಗಿ ನೋಡಿ.
-ನೀವು ಈ ಹುದ್ದೆಗೆ ಅರ್ಹರಾ ಎಂಬುದನ್ನು ತಿಳಿಯಲು ಅಧಿಸೂಚನೆಯನ್ನು ಓದಿ.
-ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನ ನೋಂದಾಯಿಸಿ.
-ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳನ್ನ ಹಾಕಿ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
-ನಿಮ್ಮ ಫೋಟೋ, ಸಹಿ ಮತ್ತು ಶೈಕ್ಷಣಿಕ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
-ನಂತರ ಅಲ್ಲಿ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
BEL ಪ್ರೊಬೇಷನರಿ ಇಂಜಿನಿಯರ್ ಹುದ್ದೆ ಅರ್ಹತೆ
BEL ಪ್ರೊಬೇಷನರಿ ಇಂಜಿನಿಯರ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾದ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕು. ಅರ್ಜಿ ಸಲ್ಲಿಸುವ ಮೊದಲು ಈ ಅರ್ಹತೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಅಗತ್ಯವಿರುವ ಅರ್ಹತೆಗಳ ಕುರಿತು ತಿಳಿಯಲು ಅರ್ಜಿದಾರರು ಹಿಂದಿನ ರ್ಷದ ಅರ್ಹತಾ ಮಾನದಂಡಗಳನ್ನು ಉಲ್ಲೇಖಿಸಬಹುದು. ಅಲ್ಲದೆ ಈ ಹುದ್ದೆಗೆ ಗರಿಷ್ಠ 25 ವರ್ಷ ಆಗಿರಬೇಕು.
ಇದಕ್ಕಾಗಿ ಆನ್‌ಲೈನ್ ಪರೀಕ್ಷೆ ಇರುತ್ತದೆ. ಅದರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಡಲಾಗುವುದು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಕರೆಯಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಇಮೇಲ್‌ಗಳನ್ನ ಕಳಿಸುತ್ತಾರೆ. ಈ ಆಯ್ಕೆ ಪ್ರಕ್ರಿಯೆಯು 2 ಹಂತಗಳನ್ನು ಒಳಗೊಂಡಿರುತ್ತದೆ. ಒಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ನಂತರ ಸಂದರ್ಶನ ಇರುತ್ತದೆ. ಒಟ್ಟು 125 ಅಂಕಗಳಿಗೆ 2 ಗಂಟೆಗಳ ಕಾಲ ಈ ಪರೀಕ್ಷೆ ನಡೆಯುತ್ತದೆ. ಹಾಗೆ ಇದರಲ್ಲಿ ನೆಗೆಟಿವ್ ಮೌಲ್ಯಮಾಪನ ಇರುತ್ತದೆ.


Click it and Unblock the Notifications