ಬೆಂಗಳೂರು, ಅ. 19: ಅಮೆರಿಕದ ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ (ಟಿಇವಿ) ಕಂಪನಿ ಜೊತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿ ಹೈಡ್ರೋಜನ್ ಫುಯಲ್ ಸೆಲ್‌ಗಳ ತಯಾರಿಕೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದರಂತೆ, ಟಿಇವಿ ಸಂಸ್ಥೆ ಫುಯೆಲ್ ಸೆಲ್ ತಯಾರಿಕೆಗೆ ಬೇಕಾದ ತಂತ್ರಜ್ಞಾನವನ್ನೂ ಬಿಎಎಲ್‌ಗೆ ನೀಡುತ್ತದೆ.
ಬಿಇಎಲ್ ಮತ್ತು ಟಿಇವಿ ಸಹಯೋಗದಲ್ಲಿ ತಯಾರಾಗುವ ಜಲಜನಕ ಇಂಧನದ ಸೆಲ್‌ಗಳು ಭಾರತೀಯ ಮಾರುಕಟ್ಟೆ ಹಾಗೂ ಕೆಲ ಆಯ್ದ ವಿದೇಶೀ ಮಾರುಕಟ್ಟೆಗಳಿಗೆ ಸರಬರಾಜಾಗಲಿವೆ.
ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ಮತ್ತು ಸ್ವಚ್ಛ ಇಂಧನ ತಯಾರಿಸಲು ಕೇಂದ್ರ ಸರಕಾರ ಹೈಡ್ರೋಜನ್ ಫುಯೆಲ್ ಮಿಷನ್‌ಗೆ ಒತ್ತು ಕೊಟ್ಟಿದೆ. ಕ್ಲೀನ್ ಎನರ್ಜಿಗಳ ಪೈಕಿ ಒಂದು ಎಂದು ಪರಿಗಣಿಸಲಾಗಿರುವ ಹೈಡ್ರೋಜನ್ ಇಂಧನದ ತಯಾರಿಕೆಗೆ ಸರಕಾರ ಪುಷ್ಟಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆಗೆ ಟಿಇವಿ ಜೊತೆ ಬಿಇಎಲ್‌ನ ಒಪ್ಪಂದವಾಗಿದೆ.

ಸಾರಿಗೆ, ಇಂಧನ ಸಂಗ್ರಹ ಇತ್ಯಾದಿಗೆ ಸ್ವಚ್ಛ ಇಂಧನದ ಅಳವಡಿಕೆಗೆ ಕೇಂದ್ರ ಸರಕಾರ ಆದ್ಯತೆ ಕೊಟ್ಟಿದೆ. ಅದಕ್ಕೆ ಬದ್ಧವಾಗಿ ಇ-ಮೊಬಿಲಿಟಿ (ಎಲೆಕ್ಟ್ರಿಕ್ ವಾಹನ ಸಾಗಾಟ) ಮೊದಲಾದ ಹಲವು ಕಾರ್ಯಗಳಿಗೆ ಕ್ಲೀನ್ ಎನರ್ಜಿ ಅಗತ್ಯ ಇದೆ. ಈ ಬೇಡಿಕೆ ಪೂರೈಸಲು ಟಿಇವಿ ಜೊತೆಗಿನ ಒಪ್ಪಂದ ಉಪಯುಕ್ತವಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿ ಸಂಸ್ಥೆ ಹೇಳಿದೆ.
ಟಿಇವಿಯಿಂದ ಆರ್ ಅಂಡ್ ಡಿ ಕೇಂದ್ರ
ಟ್ರೈಟಾನ್ ಎಲೆಕ್ಟ್ರಿಕ್ ವೆಹಿಕಲ್ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸತಲ್ಲ. ಅಮೆರಿಕದ ಈ ಕಂಪನಿ ಭಾರತದಲ್ಲಿ ಈಗಾಗಲೇ ತಯಾರಿಕಾ ಘಟಕ ಹಾಗೂ ಆರ್ ಅಂಡ್ ಡಿ ಕೇಂದ್ರಗಳನ್ನು ಸ್ಥಾಪಿಸಿದೆ. ಹೈಡ್ರೋಜನ್ ಇಂಧನ ಚಾಲಿತ ವಾಹನಗಳ ಕ್ಷೇತ್ರಕ್ಕೆ ಇತ್ತೀಚೆಗೆ ಅಡಿ ಇಟ್ಟಿದೆ. ಹೈಡ್ರೋಜನ್ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಬಸ್ಸುಗಳನ್ನು ತಯಾರಿಸುವ ಕಾರ್ಯವನ್ನು ಟಿಇವಿ ಆರಂಭಿಸಿದೆ.

ಮಾಲಿನ್ಯಕಾರಕವಲ್ಲದ ಹೈಡ್ರೋಜನ್ ಇಂಧನ
ವಾಯುಮಾಲಿನ್ಯ ನಿಯಂತ್ರಣಕ್ಕೆ ಹೈಡ್ರೋಜನ್ ಇಂಧನ ಬಹಳ ಪರಿಣಾಮಕಾರಿ ಎಂದು ಭಾವಿಸಲಾಗಿದೆ. ಹೈಡ್ರೋಜನ್ ಚಾಲಿತ ವಾಹನದಿಂದ ಹೊರಹೋಗುವ ಹೊಗೆಯಲ್ಲಿ ಹಾನಿಕಾರಕ ಅಂಶಗಳು ಇರುವುದಿಲ್ಲ ಎನ್ನಲಾಗುತ್ತದೆ. ಹೀಗಾಗಿ ಇದನ್ನು ಝೀರೋ ಎಮಿಷನ್ ಇಂಧನ ಎಂದು ಕರೆಯಲಾಗುತ್ತದೆ.
ಸಾಂಪ್ರದಾಯಿಕ ಎಲೆಕ್ಟ್ರಿಕ್ ವಾಹನಕ್ಕಿಂತ ಹೈಡ್ರೋಜನ್‌ಶಕ್ತ ವಾಹನ ಬಹಳ ಸಮರ್ಥವಾಗಿರುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ರೀಚಾರ್ಜ್ ಮಾಡಲು ಗಂಟೆಗಟ್ಟಲೆ ಬೇಕಾಗುತ್ತದೆ. ಅದರೆ, ಪೆಟ್ರೋಲ್, ಡೀಸೆಲ್ ರೀತಿ ಹೈಡ್ರೋಜನ್ ಇಂಧನವನ್ನು ಬಹಳ ಬೇಗ ಭರ್ತಿ ಮಾಡಬಹುದು.
ಹೈಡ್ರೋಜನ್ ಇಂಧನ ಸಾಮಾನ್ಯವಾಗಿ ಗ್ಯಾಸ್ ರೂಪದಲ್ಲಿರುತ್ತದೆ. ಹೈಡ್ರೋಜನ್ ಫುಯೆಲ್ ಸೆಲ್‌ಗಳು ಈ ಅನಿಲವನ್ನು ಶಕ್ತಿಯಾಗಿ ಮಾರ್ಪಡಿಸುವ ಕೆಲಸ ಮಾಡುತ್ತದೆ.


Click it and Unblock the Notifications