ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜೀವನಾಡಿಯಾಗಿದೆ. ನಮ್ಮ ಮೆಟ್ರೋ ಜಾಲ ವಿಸ್ತರಣೆಯನ್ನು ಮಾಡುತ್ತಲೇ ಇರುತ್ತದೆ. ಇದೀಗ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಜೊತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿಂದ 405 ಕೋಟಿ ರೂ.ಗಳ ಒಪ್ಪಂದವನ್ನು ಪಡೆದುಕೊಂಡಿದೆ.
ಹೌದು,ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 2 ಕ್ಕೆ ಏಳು ಹೆಚ್ಚುವರಿ ಮೆಟ್ರೋ ರೈಲುಗಳನ್ನು (42 ಕಾರುಗಳು) ಪೂರೈಸುವುದು ಈ ಆದೇಶದಲ್ಲಿ ಸೇರಿದ್ದು, ಒಪ್ಪಂದದಡಿಯಲ್ಲಿ ಒಟ್ಟು ರೈಲುಗಳ ಸಂಖ್ಯೆಯನ್ನು 53 (318 ಕಾರುಗಳು) ರಿಂದ 60 (360 ಕಾರುಗಳು) ಕ್ಕೆ ತರಲಾಗಿದೆ ಎಂದು ಬಿಇಎಂಎಲ್ ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ.

ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ವಿಶ್ವ ದರ್ಜೆಯ, ಸ್ಥಳೀಯವಾಗಿ ತಯಾರಿಸಿದ ಮೆಟ್ರೋ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಹೆಚ್ಚುವರಿ ಆದೇಶವು ಪುನರುಚ್ಚರಿಸುತ್ತದೆ ಎಂದು ಬಿಇಎಂಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಅವರು ಹೇಳಿಕೆಯನ್ನು ನೀಡಿದ್ದಾರೆ.
ಇತ್ತೀಚಿಗೆ ಅತ್ಯಾಧುನಿಕ ತಂತ್ರಜ್ಞಾನ, ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಕರ್ಯದ ಮೇಲೆ ಕೇಂದ್ರೀಕರಿಸಿ, ಈ ರೈಲುಗಳು ನಗರದ ಮೆಟ್ರೋ ಜಾಲದ ದಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಬಿಇಎಂಎಲ್ ಮೂರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರಕ್ಷಣಾ ಮತ್ತು ಏರೋಸ್ಪೇಸ್, ಗಣಿಗಾರಿಕೆ ಮತ್ತು ನಿರ್ಮಾಣ, ಮತ್ತು ರೈಲು ಮತ್ತು ಮೆಟ್ರೋಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಇದು ಬೆಂಗಳೂರು, ಕೋಲಾರ ಚಿನ್ನದ ಗಣಿ (ಕೆಜಿಎಫ್), ಮೈಸೂರು ಮತ್ತು ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯ ಮತ್ತು ರಾಷ್ಟ್ರವ್ಯಾಪಿ ಮಾರಾಟ ಮತ್ತು ಸೇವೆಗಳ ಜಾಲವನ್ನು ಹೊಂದಿದೆ.
ಬೆಂಗಳೂರಿನ ನಮ್ಮ ಮೆಟ್ರೋದ ವ್ಯಾಪ್ತಿ ಹೆಚ್ಚುತ್ತಿದೆ. ಸದ್ಯ ಎರಡು ಮಾರ್ಗಗಳಲ್ಲಿ ಮಾರ್ಗಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಮೆಟ್ರೋದ ಮುಂದುವರಿದ ಭಾಗಗಳ ಕೆಲಸ ನಡೆಯುತ್ತಿದೆ. ಇದರ ನಡುವೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮತ್ತು ಖಾಸಗಿ ಕಂಪನಿ ಎಂಬಸಿ ಆಫೀಸ್ ಪಾರ್ಕ್ಸ್ REIT ಹೊಸ ಒಪ್ಪಂದಕ್ಕೆ ಸಹಿ ಮಾಡಿವೆ. ಅಂದರೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ನಿರ್ಮಿಸಲು ಒಪ್ಪಂದವನ್ನು ಮಾಡಿಕೊಂಡಿದೆ.
ಯಾವೆಲ್ಲಾ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ?
ನಮ್ಮ ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ನಡೆಸುತ್ತಿರುವ ಮಾಹಿತಿಯ ಪ್ರಕಾರ ಸರ್ಕಾರ ಒಪ್ಪಿಗೆ ದೊರೆತ ಬಳಿಕ ಚಲ್ಲಘಟ್ಟದಿಂದ ಬಿಡದಿಯಿಂದ ರಾಮನಗರ ಜಿಲ್ಲೆಯವರೆಗೆ (15 ಕಿ.ಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (ಕನಕಪುರ) ವರೆಗೆ (24 ಕಿ.ಮೀ.), ಕಾಳೇನ ಅಗ್ರಹಾರ ರಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀ ಪಾರ್ಕ್ ವರೆಗೆ (68 ಕಿ.ಮೀ), ಹಾಗೂ ಬೊಮ್ಮಸಂದ್ರದಿಂದ ಅತಿಬೆಲೆವರೆಗೆ (11) ಮತ್ತು ಮಾದವರದಿಂದ ತುಮಕೂರುವರೆಗೆ (52 ಕಿ.ಮೀ) ಮೆಟ್ರೋ ವಿಸ್ತರಣೆಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದೆ. ಶೀಘ್ರವೇ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ವಿಸ್ತರಣೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಗುಲಾಬಿ ಮಾರ್ಗ ಪೂರ್ಣಗೊಳ್ಳುವ ಸಮಯ, ನಿಲ್ದಾಣಗಳು ಎಲ್ಲಿ ಎಂದು ಬಿಎಂಆರ್ ಸಿಎಲ್ ಮಾಗಿತಿಯನ್ನು ತಿಳಿಸಿದೆ. ಈ ಯೋಜನೆ ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ, ಬಣ್ಣದ ಮಾರ್ಗದಲ್ಲಿ ದೈನಂದಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರಿಗೆ ಹಚ್ಚಿನ ಲಾಭವನ್ನು ನಿರೀಕ್ಷೆ ಇದ ಎಂದು ಹೇಳಿದ್ದಾರೆ. ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲಾಗುತ್ತದೆ.


Click it and Unblock the Notifications