ಬೆಂಗಳೂರಿನಲ್ಲಿ ಆರು ಲಕ್ಷಕ್ಕೂ ಅಧಿಕ ಬಿ-ಖಾತಾ ಆಸ್ತಿಗಳನ್ನು ಹೊಂದಿರುವ ಮಾಲೀಕರಿಗೆ ಅನುಕೂಲವಾಗುವ ನೂತನವಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಎ ಮತ್ತು ಬಿ ಖಾತೆಗಳನ್ನು ನೀಡುವ ನಿಯಮಗಳಿಗೆ ಸಚಿವ ಸಂಪುಟವು ಗುರುವಾರ ಒಪ್ಪಿಗೆಯನ್ನು ಸೂಚಿಸಿದೆ.ಹಾಗಿದ್ದರೆ ಹೊಸ ನಿಯಮಗಳಲ್ಲಿ ಏನೆಲ್ಲಾ ಷರತ್ತುಗಳಿವು ಎಮಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ಬಂದಿರುವ ಮುಖ್ಯ ಉದ್ದೇಶವೆಂದರೆ, ಬಿ-ಖಾತಾ ಹೊಂದಿರುವ ಬೆಂಗಳೂರಿನ ನಿವೇಶನಗಳಲ್ಲಿನ ನಿರ್ಮಾಣಗಳನ್ನು ಕ್ರಮಬದ್ಧಗೊಳಿಸುವುದರ ಜೊತೆಗೆ ಇದರ ಮೇಲಿನ ನಿಯಂತ್ರಣ ಹೇರುವುದು ಮತ್ತು ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದರಿಂದ ಸರ್ಕಾರದ ಆದಾಯ ಹೆಚ್ಚಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
1961ರಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ ಬಿ-ಖಾತಾ ಆಸ್ತಿಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ವ್ಯಾಪ್ತಿಯಿಂದ ಹೊರತಾಗಿತ್ತು.ಇದರಿಂದಾಗಿ ಇಂತಹ ಸ್ಥಳಗಳಲ್ಲಿ ಅನಿಯಂತ್ರಿತ ಕಟ್ಟಡ ನಿರ್ಮಾಣಗಳು ಹೆಚ್ಚಾಗಿವೆ. ಇದು ಅಸುರಕ್ಷಿತ ಕಟ್ಟಡಗಳಿಗೆ ಕಾರಣವಾಗಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಗೆ ಸಿಲುಕವಂತೆ ಮಾಡಿತ್ತು.
1961ರ ಕೆಟಿಸಿಪಿ ಕಾಯ್ದೆಯ ಸೆಕ್ಷನ್ 17ರ ಪ್ರಕಾರ, ಈಗಾಗಲೇ ಅನಧಿಕೃತ ಲೇಔಟ್‌ನಲ್ಲಿ ನಿರ್ಮಾಣಗೊಂಡಿರುವ ಖಾತಾ ಇಲ್ಲದ ಅಥವಾ ಬಿ-ಖಾತಾ ಹೊಂದಿರುವ ಕಟ್ಟಡಗಳಿಗೆ ಎ-ಖಾತಾ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ಕೆಲವು ನಿರ್ದಿಷ್ಟ ಷರತ್ತುಗಳನ್ನು ಸಾರ್ವಜನಿಕರಿಗೆ ಅನುಚರಿಸಬೇಕಾಗುತ್ತದೆ.
ಈಗಾಗಲೇ ಬೆಂಗಳೂರಿನಲ್ಲಿ ನಿರ್ಮಾಣ ಕಾರ್ಯಗಳು ನಡೆದಿರುವ ಬಿ-ಖಾತಾ ಭೂಮಿಗೆ ಕಟ್-ಆಫ್ ದಿನಾಂಕವನ್ನು ಸೆಪ್ಟೆಂಬರ್ 30, 2024 ಎಂದು ನಿಗದಿಯನ್ನು ಮಾಡಲಾಗಿತ್ತು. ಇದು ಬಹುಮಹಡಿ ಕಟ್ಟಡಗಳಿಗೂ ಮತ್ತು ಸಾಮಾನ್ಯ ಮನೆಗಳಿಗೂ ಈ ಮನಿಯಮಗಳು ಅನ್ವಯವಾಗುತ್ತದೆ.
ಬೆಮಹಳೂರಿನಲ್ಲಿ ಕಳೆದ ವರ್ಷ ಸೆಪ್ಟೆಂಬರ್ 30ರ ನಂತರ ನಿರ್ಮಾಣವಾಗುವ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡುವುದನ್ನು 2024ರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಅಡಿಯಲ್ಲಿ ನಿರ್ಬಂಧವನ್ನು ಮಾಡಲಾಗಿತ್ತು. ಆದಕ್ಕಾಗಿ ಈ ಹೊಸ ನಿಯಮವನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಿ ಖಾತಾ ನಿವೇಶನಗಳಿಗೆ ಎ ಖಾತಾವನ್ನು ನೀಡಬಹುದು ಎಂಬ ಒಪದಪಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು,ಬೆಂಗಳೂರಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಮತ್ತು ಆಡಳಿತದಲ್ಲಿ ಶಿಸ್ತು ತರಲು, ನಾವು ಜಿಬಿಎ ಪ್ರದೇಶದಲ್ಲಿ ಎ ಮತ್ತು ಬಿ ಖಾತೆಗಳನ್ನು ನಿಯಂತ್ರಂವನ್ನು ಮಾಡಲಾಗಿದೆ ಎಂದಿದ್ದಾರೆ.
ನಗರದಲ್ಲಿ ಮಾಲೀಕತ್ವದ ಹಕ್ಕುಗಳನ್ನು ಘೋಷಿಸಲು ಅನುಕೂಲವಾಗುವಂತೆ ಬಿ-ಖಾತಾದ ಕಾನೂನು ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರವು ನಿರ್ಧರವನ್ನು ಮಾಡಿದೆ ಎಂದು ಹೇಳಲಾಗಿದೆ.
ಈ ಕ್ರಮವು ಬಿ-ಖಾತಾ ಆಸ್ತಿಗಳ ಮಾಲೀಕರಿಗೆ ಮಾಲೀಕತ್ವದ ಭದ್ರತೆಯನ್ನು ನೀಡುತ್ತದೆ ಎಂದು ಹೇಳಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ/ಬಿಬಿಎಂಪಿಯ ತೆರಿಗೆ ವ್ಯಾಪ್ತಿಗೆ ಸುಮಾರು 6 ಲಕ್ಷ ಬಿ-ಖಾತಾ ಆಸ್ತಿಗಳು ಒಳಪಡುತ್ತವೆ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಬಿಬಿಎಂಪಿಯಿಂದ ಮುಂದಿನ ದಿನಗಳಲ್ಲಿ ಒಂದು ವಿವರವಾದ ಆದೇಶ ಹೊರಬರುವ ನಿರೀಕ್ಷೆಯಿದೆ ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.

ಕಂದಾಯ ಭೂಮಿಯಾಗಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳ ಅಡಿಯಲ್ಲಿ ಸರ್ವೆ ಸಂಖ್ಯೆ/ಹಿಸ್ಸಾ ಸರ್ವೆ ಸಂಖ್ಯೆಯನ್ನು ಪರಿವರ್ತಿಸುವುದು ಕಡ್ಡಾಯ. ಅಲ್ಲದೆ, ಇದು ಬೆಂಗಳೂರಿನ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡಬೇಕು. ಮಾಲೀಕರು ಒಂದೇ ನಿವೇಶನ ಅಥವಾ ಲೇಔಟ್ ಆಗಿ ಅನುಮೋದನೆ ಪಡೆಯುವುದು ಅಗತ್ಯವಾಗಿರುತ್ತದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಪ್ರಕಾರ ಎಲ್ಲ ನಿಯಮಗಳನ್ನು ಅನುಸರಿಸಿದ ನಂತರ ಬಿಬಿಎಂಪಿಯಿಂದ ಎ-ಖಾತಾ ನೀಡಲಾಗುತ್ತದೆ. ಒಂದು ವೇಳೆ ಅದು ಬಹುಮಹಡಿ ಕಟ್ಟಡವಾಗಿದ್ದಲ್ಲಿ, ಮಾಲೀಕರು ವಾಸಸ್ಥಳ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ಆ ಬಳಿಕ ಬಿಬಿಎಂಪಿಯಿಂದ ಆಸ್ತಿ ಮತ್ತು ಕಟ್ಟಡಕ್ಕೆ ಎ-ಖಾತಾವನ್ನು ನೀಡಲಾಗುತ್ತದೆ.


Click it and Unblock the Notifications