ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಭದ್ರತಾ ಪಡೆಯ CISF ಸಿಬ್ಬಂದಿಯನ್ನು ನೇಮಿಸಲಾಗಿದೆ. ಭದ್ರತಾ ಪಡೆಗಳು ಶಸ್ತ್ರ ಸಜ್ಜಿತರಾಗಿ ವಿಮಾನ ನಿಲ್ದಾಣದಲ್ಲಿ ರೌಂಡ್ಸ್ ಹಾಕುತ್ತಿವೆ. ಪ್ರಯಾಣಿಕರಿಗೆ 3 ಗಂಟೆ ಮುಂಚಿತವಾಗಿ ಬರಲು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸೂಚನೆ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಯುದ್ಧೋಪಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸಲಹೆ ಮಾರ್ಗಸೂಚನೆಯನ್ನು ನೀಡಲಾಗಿದೆ.

ಹೊಸ ಮಾರ್ಗಸೂಚಿಯ ಪ್ರಕಾರ, ಎಲ್ಲ ಪ್ರಯಾಣಿಕರು ತಮ್ಮ ವಿಮಾನಯಾನಕ್ಕಾಗಿ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ತಲುಪಬೇಕು ಎಂಬ ಸೂಚನೆ ಹೊರಡಿಸಲಾಗಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿಯಲ್ಲಿಯೇ ಹೆಚ್ಚಿನ ತಪಾಸಣೆ ನಡೆಯಲಿದೆ. ಇನ್ನೂ ಪ್ರಯಾಣಿಕರು ಹೆಚ್ಚಿನ ಸಮಯ ಮೀಸಲಿಟ್ಟುಕೊಳ್ಳುವಂತೆ ಮನವಿಯನ್ನು ಮಾಡಿಕೊಂಡಿದ್ಧಾರೆ.
ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿ ಮಾಡಲಾಗಿದೆ. ಪ್ರತೀ ಪ್ರಯಾಣಿಕನು ವಿಮಾನ ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ನಿಲ್ದಾಣಕ್ಕೆ ತಲುಪಬೇಕು ಎಂಬ ಹೊಸ ಮಾರ್ಗಸೂಚಿ ಜಾರಿ ಮಾಡಲಾಗಿದೆ.
ಸಂತ್ರಸ್ತ ಪ್ರದೇಶಗಳತ್ತ ಪ್ರಯಾಣಿಸುವವರಿಗೆ ವಿಶೇಷ ಭದ್ರತಾ ತಪಾಸಣೆ ನಡೆಯಲಿದ್ದು, ಇದನ್ನು CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ), ಸ್ಥಳೀಯ ಪೊಲೀಸ್ ಮತ್ತು ಹವಾಮಾನ ಇಲಾಖೆಯ ಜಂಟಿ ಕಾರ್ಯಾಚರಣೆ ಮೂಲಕ ಕಡ್ಡಾಯಗೊಳಿಸಲಾಗಿದೆ.
ವಿಮಾನ ಬರುವುದಕ್ಕಿಂತ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಡುವುದು ಪ್ರಯಾಣಿಕರ ಹೊಣೆಗಾರಿಕೆ. ಇದು ಅವರ ಸುರಕ್ಷತೆಯ ಕಾಳಜಿಯಿಂದಲೇ ಎಂದು ವಿಮಾನ ಸಂಸ್ಥೆ ಹೇಳಿದೆ.
ಚೆಕ್-ಇನ್, ಭದ್ರತೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಗೆ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ. ಪ್ರಯಾಣಿಕರು ಸಹಕಾರ ನೀಡುವುದಾಗಿ ಹೇಳಿದೆ.
ಪ್ರಯಾಣಿಕರಿಗೆ ಸಲಹೆ:
- ಪ್ರಯಾಣದ ದಿನದಂದು ಹೆಚ್ಚು ಸಮಯ ಮೀಸಲಿಡಿ.
- ವೆಹಿಕಲ್ ಪಾರ್ಕಿಂಗ್‌ಗೂ ಹೆಚ್ಚಿನ ತಪಾಸಣೆ ನಡೆಯುವ ಸಾಧ್ಯತೆ ಇದೆ.
- ಮೊಬೈಲ್ ಮೆಸೆಜ್ ಅಥವಾ ಏರ್‌ಲೈನ್ ಅಪ್‌ಡೇಟ್‌ಗಳು ತಪ್ಪದೇ ಗಮನಿಸಿ.
ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಬದಲಾಗಿದೆ..?
- ಎಲ್ಲ ಟರ್ಮಿನಲ್‌ಗಳಲ್ಲಿ ವರ್ಧಿತ ಸ್ಕ್ರೀನಿಂಗ್ (Enhanced Screening) ಪ್ರಕ್ರಿಯೆಗಳು ಜಾರಿಯಲ್ಲಿವೆ.
- ಪ್ರಯಾಣಿಕರು ಪಾಸ್‌ಪೋರ್ಟ್, ಟಿಕೆಟ್ ಹಾಗೂ ಇತರ ಗುರುತಿನ ದಾಖಲೆಗಳನ್ನು ಸಿದ್ಧವಾಗಿ ಇಡಬೇಕು.
- ಬೆಲ್ಟ್, ಶೂ, ಎಲೆಕ್ಟ್ರಾನಿಕ್ ಸಾಧನಗಳನ್ನು ತಪಾಸಣೆಗೆ ತೆಗೆದುವ ಸಮಯ ಹೆಚ್ಚು ಇರಲಿರುವ ಹಿನ್ನೆಲೆಯಲ್ಲಿ, ತಾಳ್ಮೆಯೊಂದಿಗೆ ಸಹಕರಿಸಲು ಸೂಚನೆ ಇದೆ.
- ಸಿಐಎಸ್‌ಎಫ್, ಬೆಂಗಳೂರು ನಗರ ಪೊಲೀಸ್ ಹಾಗೂ ಇಂಟೆಲಿಜೆನ್ಸ್ ಬ್ಯೂರೊ ಸಂಪರ್ಕದಲ್ಲಿ ಸುತ್ತು ತಿರುವುಗಳ ತಪಾಸಣೆ ನಡೆಯುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಅಮಾಯಕರನ್ನು ಕಳೆದುಕೊಂಡಿದ್ದು, ದೇಶವ್ಯಾಪಿ ತೀವ್ರ ಭದ್ರತಾ ಆತಂಕ ಉಂಟಾಗಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಆಧಾರಿತ ಉಗ್ರರ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಗಡಿಭಾಗಗಳಲ್ಲಿ ಯುದ್ಧದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಈ ಬೆಳವಣಿಗೆಗಳು ಐಪಿಎಲ್ 2025 ಮೇಲೂ ಪರಿಣಾಮ ಬೀರಿ, ಬಿಸಿಸಿಐ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.
ಪಾತಾಳಕ್ಕೆ ಕುಸಿದ ಪಾಕಿಸ್ತಾನದ ಷೇರು
'ಪಾಪಿ'ಸ್ತಾನಕ್ಕೆ ಬಿಗ್ ಶಾಕ್! ಪಾತಾಳಕ್ಕೆ ಕುಸಿದ ಪಾಕಿಸ್ತಾನ ಷೇರು ಮಾರುಕಟ್ಟೆ. ಬರೋಬ್ಬರಿ 820 ಬಿಲಿಯನ್ ನಷ್ಟ ಉಂಟಾಗಿದೆ.ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಸಂಘರ್ಷ ಜೋರಾಗುತ್ತಿದ್ದಂತೆ, ಪಾಕಿಸ್ತಾನ ಷೇರು ಮಾರುಕಟ್ಟೆಯೂ ಕುಸಿತ ಕಾಣುತ್ತಿದೆ. ಇದು ಆರ್ಥಿಕ ವ್ಯವಸ್ಥೆ ಕುಂಠಿತಕ್ಕೆ ಮುನ್ಸೂಚನೆ ಎಂಬಂತಿದೆ.


Click it and Unblock the Notifications