ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯದ ಟ್ರಾಫಿಕ್‌ನಿಂದ ಜನರು ಈಗಾಗಲೇ ಬೇಸತ್ತಿದ್ದಾರೆ. ಈ ಸಮಸ್ಯೆಯನ್ನ ಒಂದಷ್ಟು ಕಡಿಮೆ ಮಾಡುವ ಸಲುವಾಗಿ, ಅದರಲ್ಲೂ ವಿಶೇಷವಾಗಿ ಯಲಹಂಕ ಹಾಗೆ ನ್ಯಾಯಾಂಗ ಲೇಔಟ್ ಮತ್ತು ಹತ್ತಿರದ ಪ್ರದೇಶಗಳ ಪ್ರಯಾಣಿಕರಿಗೆ ಸಹಾಯವಾಗುವಂತೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ. ಈ ಯೋಜನೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಆಗುವಂತಹ ಟ್ರಾಫಿಕ್‌ಅನ್ನು ಕಡೆಮೆ ಮಾಡಬಹುದಾಗಿದೆ. ಆದರೆ ರಾfತೆ ನಿರ್ಮಿಸಲು ಜಾಗದ ಕೊರತೆ ಹಾಗು ಹಣ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಿದ್ಧವಾಗ್ತಿದೆ. ಇದರಿಂದ ರಸ್ತೆಯ ಹಲವಾರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ತೆಗೆದುಹಾಕುವ ಬಗ್ಗೆ ಆಲೋಚಿಸುತ್ತಿದ್ದಾರೆ. ಯಲಹಂಕ, ಜುಡಿಷಿಯಲ್ ಲೇಔಟ್ ಮತ್ತು ಬೇರೆಡೆ ಪ್ರಯಾಣಿಸುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನ ಪ್ರಾಧಿಕಾರ ಮಾಡ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ಬಳ್ಳಾರಿ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಿಸುವುದರಿಂದ ಗಮನಾರ್ಹವಾಗಿ ದಟ್ಟಣೆಯನ್ನು ಕಡಿಮೆ ಮಾಡಬಹುದು ಎನ್ನುವುದು ಪ್ರಾಧಿಕಾರದ ಅಭಿಪ್ರಾಯವಾಗಿದೆ. ಆದ್ರೆ ಇದೆಲ್ಲದರ ಮಧ್ಯೆ, ಪ್ರಧಿಕಾರ ತನ್ನ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿದುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣ ಅಥವಾ ಕೆಐಎಗೆ ಹೋಗುವ ಬಳ್ಳಾರಿ ಲ್ಲಿ ಜನರು ನಿರಂತರ ದಟ್ಟಣೆಯನ್ನ ಎದುರಿದುತ್ತಿದ್ದಾರೆ. ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಜಕ್ಕೂರು, ಅಲ್ಲಾಳಸಂದ್ರ ಮತ್ತು ಇತರ ಜಂಕ್ಷನ್‌ಗಳು ಸಾಮಾನ್ಯವಾಗಿ ಗ್ರಿಡ್‌ಲಾಕ್‌ನಲ್ಲಿರುತ್ತವೆ. ಹಾಗಾಗಿ ಈ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಿಸುವುದರಿಂದ ಈ ದಟ್ಟಣೆಯನ್ನ ಕಡಿಮೆ ಮಾಡಬಹುದು ಎಂದು NHAI ಅಭಿಪ್ರಾಯವಾಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹೆಬ್ಬಾಳದಿಂದ ಟ್ರಂಪೆಟ್ ಇಂಟರ್‌ಚೇಂಜ್‌ವರೆಗಿನ ಸರ್ವಿಸ್ ರಸ್ತೆ ಕಾಮಗಾರಿಯಿಂದ ಈಗಾಗಲೇ ಪರಿಸ್ಥಿತಿ ಹದಗೆಟ್ಟಿದೆ. ಹಾಗೆ ಭಾರತದ ಟೆಕ್ ಸಿಟಿಯಲ್ಲಿ ಪ್ರಯಾಣಿಕರು ಸಧ್ಯಕ್ಕೆ ಟ್ರಾಫಿಕ್‌ನಿಂದ ಪಾರಾಗಲು ತಕ್ಷಣದ ಪರಿಹಾರ ಇದಾಗಿದೆ.
ಅಂಡರ್‌ಪಾಸ್ ನಿರ್ಮಿಸಲು NHAIಗೆ ತಡೆಯಾಗಿರುವುದೇನು?
ಕಳಪೆ ಟ್ರಾಫಿಕ್ ಪರಿಸ್ಥಿತಿಯನ್ನು ಕಡಿಮೆ ಮಾಡಲು ಅಂಡರ್‌ಪಾಸ್ ಒಂದು ಅತ್ಯುತ್ತಮ ಮಾರ್ಗವಾಗಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ, ಆದ್ರೆ ಅದನ್ನು ನಿರ್ಮಿಸುವುದು ಈಗ ಅಷ್ಟು ಸುಲಭದ ಕೆಲವಲ್ಲ.
ಇನ್ನು ಈ ಕುರಿತು ಮಾತನಾಡಿದ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್, "ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಡ್ ಕಾರಿಡಾರ್‌ನ ಕೆಳಗೆ ಬಹು ಜಂಕ್ಷನ್‌ಗಳಿವೆ. ಅಂಡರ್‌ಪಾಸ್‌ಗಳನ್ನು ನಿರ್ಮಿಸುವುದರಿಂದ ಸಂಚಾರ ಮಾಡಲು ಜನರಿಗೆ ಇದು ಸಹಾಯ ಮಾಡುತ್ತದೆ. ಆದರೆ, ಜಾಗದ ಕೊರತೆಯು ಒಂದು ಸಮಸ್ಯೆಯಾಗಿದ್ದರೆ. ಜೊತೆಗೆ ಎಲಿವೇಟೆಡ್ ಕಾರಿಡಾರ್‌ಗಾಗಿ ನಿರ್ಮಿಸಲಾದ ದೈತ್ಯ ಪಿಲ್ಲರ್‌ಗಳು ಕೂಡ ಈಗ ಅಂಡರ್‌ಪಾಸ್ ನಿರ್ಮಿಸಲು ಒಂದು ರೀತಿಯ ಸವಾಲಾಗಿ ಬಿಟ್ಟಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಹೇಳಿದ್ದಾರೆ.
ಹಾಗೆ ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಅತೀ ಹೆಚ್ಚು ಹಣದ ಅಗತ್ಯವಿದ್ದು, ಹಣದ ಹಂಚಿಕೆ ಕುರಿತು ಅಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದರು.
ಅಂಡರ್ ಪಾಸ್ ಎಲ್ಲಿ ನಿರ್ಮಾಣವಾಗಲಿದೆ?
ಇನ್ನು ನಾವು ಅಂಡರ್‌ಪಾಸ್ ಎಲ್ಲಿ ನಿರ್ಮಾಣವಾಗಲಿದೆ ಎಂದು ನೋಡೋದಾದ್ರೆ, ಹೆಬ್ಬಾಳ ಮೇಲ್ಸೇತುವೆಯಿಂದ ಏರ್‌ಪೋರ್ಟ್‌ಗೆ ಪ್ರಯಾಣಿಸುವ ಪ್ರಯಾಣಿಕರು ಟೋಲ್ ಗೇಟ್ ಬಳಿಯ ಸಾದಹಳ್ಳಿ ಗೇಟ್‌ವರೆಗು ಅವರಿಗೆ ಟ್ರಾಫಿಕ್ ಎದುರಾಗುವುದಿಲ್ಲ. ಆದ್ರೂ ಕೂಡ, ಎಲಿವೇಟೆಡ್ ಕಾರಿಡಾರ್‌ನ ಕೆಳಗಿನ ಮುಖ್ಯ ರಸ್ತೆಗಳಲ್ಲಿ ಬರುವ ಚಾಲಕರು ಪ್ರತಿ ಟ್ರಾಫಿಕ್ ಲೈಟ್‌ನಲ್ಲಿ ಅತೀ ಹೆಚ್ಚು ದಟ್ಟಣೆಯನ್ನ ಎದುರಿಸುತ್ತಾರೆ. ಇನ್ನು ಅಲ್ಲಿರುವ ಸಿಗ್ನಲ್‌ಗಳನ್ನು ತೆಗೆದುಹಾಕುವುದರಿಂದ ಸಹಕಾರನಗರ, ಬ್ಯಾಟರಾಯನಪುರ, ನ್ಯಾಯಾಂಗ ಬಡಾವಣೆ, ಯಲಹಂಕ, ಜಕ್ಕೂರು ಮತ್ತು ಇತರ ಪ್ರದೇಶಗಳ ದೈನಂದಿನ ಪ್ರಯಾಣಿಕರ ಪ್ರಯಾಣಕ್ಕೆ ಸಹಾಯವಾಗುತ್ತದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಾದಹಳ್ಳಿಯಲ್ಲಿ ಕೆಳಸೇತುವೆ ನಿರ್ಮಿಸಲು ಹೊರಟಿದೆ. ಏರ್‌ಪೋರ್ಟ್‌ಗೆ ತೆರಳುವ ವಾಹನ ಚಾಲಕರಿಗೆ ಸಹಾಯ ಮಾಡಲು ಐಎಎಫ್ ಯಲಹಂಕ ನಿಲ್ದಾಣದ ಬಳಿ 750 ಮೀಟರ್ ಅಂಡರ್‌ಪಾಸ್ ರಸ್ತೆಯನ್ನ ನಿರ್ಮಿಸಲು ಸಂಸ್ಥೆ ಯೋಜನೆಯನ್ನ ಮಾಡ್ತಿದೆ. ಅಲ್ಲದೆ ಕಟ್ ಮತ್ತು ಕವರ್ ವಿಧಾನದಡಿ ಅಂಡರ್‌ಪಾಸ್ ರಸ್ತೆಯನ್ನ ನಿರ್ಮಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ನಲ್ಲಿ ಬೆಂಗಳೂರು ಜನರ ಪ್ರಮುಖ ಸಮಸ್ಯೆಯಾಗಿರುವ ಈ ಟ್ರಾಫಿಕ್ ಸಮಸ್ಯೆಯನ್ನ ನಿವಾರಿಸಲು ಪ್ರಾಧಿಕಾರ ಹೊಸ ಯೀಜನೆಯನ್ನ ಜನರ ಮುಂದಿಡ್ತಿದೆ. ಆದ್ರೆ ಒಮ್ಮೆ ಜಾಗದ ಕೊರತೆ ಹಣದ ಕೊರತೆಯೆಂದು ಕಾಮಗಾರಿ ಶುರುವಿಗು ಮುನ್ನವೇ ಕೊನೆಯಾಗ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣದಿಂದ ಜನರಿಗೆ ಟ್ರಾಫಿಕ್‌ನಿಂದ ಮುಕ್ತಿ ಸಿಗಬಹುದಾ ಎಂಬುದನ್ನ ಕಾದು ನೋಡಬೇಕಿದೆ.


Click it and Unblock the Notifications