ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್ ಪ್ಲಾಜಾದಲ್ಲಿ ದಶಕಗಳಿಗಿಂತ ಈ ಬಾರಿ ದಾಖಲೆಯ ಹಣ ಸಂಗ್ರಹವಾಗಿದೆ ಎಂದು ಹೆಳಲಾಗ್ತಿದೆ. ದೇವನಹಳ್ಳಿ (ಸಾದಹಳ್ಳಿ) ಬಳಿ ಇರುವ ಟೋಲ್ ಪ್ಲಾಜಾವು ₹308.01 ಕೋಟಿಗಳಷ್ಟು ಅತಿ ಹೆಚ್ಚು ಟೋಲ್‌ಅನ್ನು ಸಂಗ್ರಹಿಸಿದೆ. ಅಲ್ಲದೆ 2023-24ರ ಆರ್ಥಿಕ ವರ್ಷದಲ್ಲಿ ದಶಕದ ಅತ್ಯಧಿಕ ಟೋಲ್ ಸಂಗ್ರಹ ಇದಾಗಿದೆ. ಇನ್ನು ಕರ್ನಾಟಕ ರಾಜ್ಯದಾದ್ಯಂತ ಇರುವ 42 ಟೋಲ್ ಪ್ಲಾಜಾಗಳಲ್ಲಿ ಇದು ಅತ್ಯಧಿಕ ದಾಖಲೆಯನ್ನ ಸಾಧಿಸಿದೆ. ಹಾಗೆ 2014-15ರಲ್ಲಿ ₹125.75 ಕೋಟಿ ಸಂಗ್ರಹವಾಗಿತ್ತು, ಆದರೆ ಈ ಬಾರಿ ಅದಕ್ಕಿಂತ ಅಧಿಕವಾಗಿ ಸಂಗ್ರಹವಾಗಿದೆ ಎಂದು ದಶಕದ ಅವಧಿಯ ಡೇಟಾ ಬಹಿರಂಗಪಡಿಸಿದೆ. ಇನ್ನು ಇದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ ಎನ್ನಲಾಗ್ತಿದೆ.
ರಸ್ತೆ ಸಾರಿಗೆ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2023-24ರಲ್ಲಿ ಕರ್ನಾಟಕ ರಾಜ್ಯದಾದ್ಯಂತ 40 ಟೋಲ್ ಪ್ಲಾಜಾಗಳಿಂದ ಟೋಲ್ ಪ್ಲಾಜಾಗಳಿಂದ ಒಟ್ಟು 2,859.90 ಕೋಟಿ ಟೋಲ್ ಸಂಗ್ರಹವಾಗಿದೆ ಎಂಬ ಮಾಹಿತಿ ಇದೆ.

ರಾಜ್ಯಸಭೆ ಸದಸ್ಯರೊಬ್ಬರು ಭಾರತೀಯ ಟೋಲ್ ಪ್ಲಾಜಾಗಳ ಕುರಿತು ಕೇಳಿದಾಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತು ಸಂಪೂರ್ಣ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದರಲ್ಲಿ ಟೋಲ್ ಸಂಗ್ರಹವು ಕಳೆದ 10 ವರ್ಷಗಳಲ್ಲಿ 2014-15 ರಿಂದ 2023-24 ರವರೆಗೆ ಟೋಲ್ ಆದಾಯದಲ್ಲಿ ದೃಢವಾದ ಬೆಳವಣಿಗೆಯನ್ನು ತೋರಿಸುತ್ತದೆ.
2014-15ರಲ್ಲಿ ಬೆಂಗಳೂರು-ನೆಲಮಂಗಲ ಪ್ಲಾಜಾ ₹59.31 ಕೋಟಿ ಸಂಗ್ರಹವಾಗಿತ್ತು. ಇನ್ನು ಅದಕ್ಕೆ ಹೋಲಿಸಿದರೆ ಈ ಬಾರಿ ಅಂದರೆ 2023-24ರಲ್ಲಿ ₹103.41 ಕೋಟಿ ಗಳಿಸಿದೆ ಎಂಬ ಮಾಹಿತಿ ಇದೆ.
ಇನ್ನು ಈ ಕುರಿತು ಸಂಚಾರ ತಜ್ಞ ಎಂಎನ್ ಶ್ರೀಹರಿ ಮಾತನಾಡಿದ್ದು, ಕಳೆದ 10 ವರ್ಷಗಳಲ್ಲಿ ವಿಶೇಷವಾಗಿ ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಮತ್ತು ರಾಜಧಾನಿಯನ್ನು ಹಾಗೆ ಕರ್ನಾಟಕದ ಇತರ ಭಾಗಗಳಿಗೆ ಸಂಪರ್ಕಿಸುವ ಬೆಂಗಳೂರು-ನೆಲಮಂಗಲ ಪ್ಲಾಜಾದಲ್ಲಿ ಟೋಲ್ ಸಂಗ್ರಹದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದರು. ಅಲ್ಲದೆ ಇಂತಹ ಅಂಕಿಅಂಶಗಳು ತ್ವರಿತ ಏರಿಕೆಯನ್ನು ತೋರುತ್ತವೆ. ಈ ಪ್ರಮುಖ ಆರ್ಥಿಕ ಕಾರಿಡಾರ್‌ನಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಟೋಲ್ ಸಂಗ್ರಹ ಕೂಡ ಹೆಚ್ಚಾಗಿದೆ.
ನೆಲಮಂಗಲ ಮತ್ತು ದೇವನಹಳ್ಳಿ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಹೆಚ್ಚಳವಾಗುತ್ತಿರೋದು ಇದು ಬೆಂಗಳೂರು ಸುತ್ತಮುತ್ತಲಿನ ಸಂಪರ್ಕದ ಬೇಡಿಕೆಗಳು ಮತ್ತು ನಗರ ವಿಸ್ತರಣೆಯನ್ನ ಪ್ರತಿಬಿಂಬಿಸುತ್ತದೆ.
ಕರ್ನಾಟಕ ರಾಜ್ಯ ತನ್ನ ಹೆದ್ದಾರಿ ಜಾಲವನ್ನು ವಿಸ್ತರಿಸುವುದರಿಂದ, ಟೋಲ್ ಆದಾಯವು ಕೂಡ ನಿರ್ಣಾಯಕ ಹಣಕಾಸಿನ ಮೂಲವಾಗಿ ಉಳಿಯುತ್ತದೆ. ಅಲ್ಲದೆ, ಬಳಕೆದಾರರ ಆದಾಯ ಸಂಗ್ರಹಣೆಯನ್ನು ಸಮತೋಲನಗೊಳಿಸುವುದು ಹಾಗೆ ರಿಯಾಯಿತಿ ಅವಧಿಯ ನಂತರ ಟೋಲ್-ಫ್ರೀ ಪ್ರವೇಶವನ್ನು ಒಡದಗಿಸುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಕೂಡ ನಾವು ಕಾಪಾಡಿಕೊಳ್ಳುವುದು ಬಹಳ ಪ್ರಮುಖವಾಗಿದೆ ಎಂದು ಶ್ರೀಹರಿ ಹೇಳಿದರು.
ಪರ್ಯಾಯ ರಸ್ತೆ
ನಗರದಲ್ಲಿ ಈಗಾಗಲೇ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯು ಗಮನಾರ್ಹ ಟೋಲ್ ಆದಾಯವನ್ನ ಸಂಗ್ರಹಿಸುತ್ತಿದೆ. ಇನ್ನು ಇದರ ನಿರ್ವಹಣೆಯಲ್ಲಿ ಪಾರದರ್ಶಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನ ಹುಟ್ಟುಹಾಕುತ್ತಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (KSTOA) ತಿಳಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನೆಗೆ ಬೇಕಾಗುವ ಹಣ, ಟೋಲ್‌ನಿಂದ ಸಂಗ್ರಹಿಸಿದ ಹಣ ಮತ್ತು ಅದರ ನಿರ್ವಹಣೆಗೆ ಬೇಕಾಗುವ ಆದಾಯದ ಕುರಿತು ಸಂಪೂರ್ಣ ಡೇಟಾವನ್ನು ಬಹಿರಂಗಪಡಿಸುವುದು ಬಹಳ ಮುಖ್ಯವಾಗಿದೆ ಎಂದು ಕೆಎಸ್‌ಟಿಒಎ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದರು.
ಬೆಂಗಳೂರು ವಿಮಾನ ನಿಲ್ದಾಣ ಟೋಲ್ ಪ್ಲಾಜಾದಲ್ಲಿ ಅಧಿಕ ಹಣ ಸಂಗ್ರಹಕ್ಕರ ಕಾರಣ ಪ್ರಯಾಣಿಕರ ದಟ್ಟಣೆ ಜೊತೆಗೆ ಸುತ್ತಮುತ್ತ ಪ್ರದೇಶಗಳಿಗೆ ಸಾಗಾಟ ಮಾಡುವ ಭಾರೀ ಸರಕು. ಹೀಗಾಗಿ ಈ ಪ್ರದೇಶದಲ್ಲಿ ಅಧಿಕ ಮೊತ್ತದ ಟೋಲ್ ಅಂಗ್ರಹವಾಗುತ್ತದೆ ಎನ್ನಲಾಗ್ತಿದೆ. ಅಲ್ಲದೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಂದ ವೇಗವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಸರಿಹೊಂದಿಸುವ ಸಲುವಾಗಿ ಅಂತರರಾಷ್ಟ್ರೀಯ ಮಾನದಂಡಗಳ ಪರ್ಯಾಯ ರಸ್ತೆಯ ಅವಶ್ಯಕ. ಹೆಚ್ಚಿದೆ. ಇನ್ನು ಪರ್ಯಾಯ ಮಾರ್ಗದ ಬಗ್ಗೆ ಈಗಾಗಲೇ ಯೋಚಿಸಿದ್ದು, ಹೆಣ್ಣೂರು, ಥಣಿಸಂದ್ರ, ಬಾಗಲೂರು, ಬಂಡಿ ಕೊಡಿಗೇಹಳ್ಳಿ, ಮೈಲನಹಳ್ಳಿ, ಚಿಕ್ಕನ ಹಳ್ಳಿ, ಬೇಗೂರು ಮೂಲಕ ವಿಮಾನ ನಿಲ್ದಾಣಕ್ಕೆ ಹೊಸ ಪರ್ಯಾಯ ಮಾರ್ಗವನ್ನು ಅಭಿವೃದ್ಧಿಪಡಿಸಲು ನಾವು ನಿರ್ಧಾರಿಸಿದ್ದೇವೆ ಎಂದು ಹೇಳಿದರು.
ಸರ್ಕಾರ ಟೋಲ್ ಸಂಗ್ರಹಿಸುತ್ತದೆ, ಆದ್ರೆ ಅತಿಯಾದ ಮೊತ್ತವನ್ನ ಏಕೆ ವಿಧಿದುತ್ತದೆ ಎಂಬ ಪ್ರಶ್ನೆ ಎಲ್ಲರಿಗಿದೆ. ಅಲ್ಲದೆ ವಿಮಾನ ನಿಲ್ದಾಣ ಪ್ಲಾಜಾದಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತಿದ್ದು, ಈ ಹಣ ಹೇಗೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಮುಖ್ಯವಾಗಿ ಪಾರದರ್ಶಕತೆ ಇಲ್ಲ. ಟೋಲ್ ಆದಾಯ ಮತ್ತು ಅದರ ವೆಚ್ಚದ ಬಗೆಗಿನ ವಿವರವಾದ ಮಾಹಿತಿ ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿತ್ಯ ಪ್ರಯಾಣಿಸುವ ಮಹೇಶ್ ರಾವ್ ಹೇಳಿದರು.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ



Click it and Unblock the Notifications