ಬೆಲೆ ಏರಿಕೆಯ ಬರೆಯನ್ನು ಸರ್ಕಾರ ಸಾರ್ವಜನಿಕರ ಮೇಲೆ ಎಳೆಯುತ್ತಾಳೆ ಇದೆ.ಇದೀಗ ಬೆಂಗಳೂರು ವಿಮಾನ ನಿಲ್ದಾಣದ ಟೋಲ್ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆಯನ್ನು ಕೊಟ್ಟಿದೆ.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬಲು ದುಬಾರಿಯಾಗಲಿದೆ.
ಹೌದು, ಒಂದು ಕಡೆ ಗ್ಯಾರಂಟಿ ಮೂಲಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದರೆ ಮತ್ತೊಂದು ಕಡೆ ಬೆಲೆ ಏರಿಕೆ ಮೂಲಕ ಜನರ ಜೋಬನ್ನು ರಾಜ್ಯ ಸರ್ಕಾರ ಬರಿದು ಮಾಡುತ್ತಿದೆ. ಇದು ಸಾಲದ್ದು ಎಂದು ಕೇಂದ್ರ ಸರ್ಕಾರ ಸಹ ಟೋಲ್ ಹೆಚ್ಚಳಕ್ಕೆ ಅನುಮೋದನೆ ಕೊಟ್ಟು ಮತ್ತೆ ಸಾರ್ವಜನಿಕ ಬೆಲೆ ಏರಿಕೆಯ ಬರೆ ಹಾಕಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂರ್ಪಕ ಕಲ್ಪಿಸುವ ಸಾದಹಳ್ಳಿ ಟೋಲ್ ಮತ್ತು ಹೊಸಕೋಟೆಯಿಂದ ದಾಬಸ್‌ಪೇಟೆವರೆಗೆ ನಿರ್ಮಾಣವಾಗಿರುವ ನೂತನ ಎಸ್‌ಆರ್‌ಆರ್ ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕವನ್ನು ಮಂಗಳವಾರ ಮಧ್ಯರಾತ್ರಿಯಿಂದಲೇ ಹೆಚ್ಚಳ ಮಾಡಿದೆ.ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಪ್ರಯಾಣಿಕರಿಗೆ ಹೆಚ್ಚು ದುಬಾರಿಯನ್ನಾಗಿ ಮಾಡಿದೆ.
ಈ ಟೋಲ್ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಅತ್ಯಂತ ದುಬಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಲಿದೆ ಕೆಂಪೇಗೌಡ ವಿಮಾನ ನಿಲ್ದಾಣ. ಇದರಿಂದ ದಿನನಿತ್ಯ ಓಡಾಟ ಮಾಡುವವ ಪ್ರಯಾಣಿಕರ ಮೇಲೆ ಇನ್ನಷ್ಟು ಹೊರೆಯಾಗುತ್ತದೆ.ಈ ಹೊಸ ದರಗಳು ಒಂದು ಬಾರಿಯ ಪ್ರಯಾಣಕ್ಕೆ ಮತ್ತು 24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣ ಎರಡಕ್ಕೂ ಈ ಹೊಸ ಶುಲ್ಕ ಅನ್ವಯವಾಗುತ್ತದೆ.
ಹೊಸ ಪರಿಷ್ಕೃತ ಟೋಲ್ ಶುಲ್ಕದ ವಿವರಗಳು
ಏಕಮುಖ ಸಂಚಾರದ ಪ್ರಯಾಣಕ್ಕೆ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು (ಲಘು ಮೋಟಾರು ವಾಹನಗಳು) 120 ರೂ. ಮತ್ತು 24 ಗಂಟೆಗಳ ಒಳಗೆ ಹಿಂತಿರುಗಲು 180 ರೂ. ಶುಲ್ಕ ವಿಧಿಸಲಾಗುತ್ತದೆ. ಪ್ರಸ್ತುತ ದರಗಳು 115 ರೂ. ಮತ್ತು 170 ರೂ. ಇದೆ.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಈಗ ಒಂದೇ ಪ್ರಯಾಣಕ್ಕೆ 185 ರೂ. ಮತ್ತು ಹಿಂತಿರುಗುವ ಪ್ರಯಾಣಕ್ಕೆ 275 ರೂ. ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು 175 ರೂ. ಮತ್ತು 265 ರೂ ಗಳು ಆಗಿದೆ.
ಬಸ್ಸುಗಳು ಮತ್ತು ಟ್ರಕ್‌ಗಳ ಟೋಲ್ ಅನ್ನು ಏಕಮುಖ ಪ್ರಯಾಣಕ್ಕೆ 370 ರೂ.ಗೆ ಮತ್ತು ಹಿಂತಿರುಗುವ ಪ್ರಯಾಣಕ್ಕೆ 550 ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ದರಗಳು 355 ರೂ. ಮತ್ತು 535 ರೂ.ಗಳಾಗಿವೆ.
ಭಾರೀ ಮೋಟಾರ್ ನಿರ್ಮಾಣ ಉಪಕರಣಗಳು ಮತ್ತು ಮೂರರಿಂದ ಆರು ಆಕ್ಸಲ್ ವಾಹನಗಳು ಸೇರಿದಂತೆ ದೊಡ್ಡ ವಾಹನಗಳಿಗೆ ಒಂದೇ ಪ್ರಯಾಣಕ್ಕೆ 560 ರೂ. ಮತ್ತು ಹಿಂತಿರುಗಲು 840 ರೂ. ಸುಂಕವನ್ನು ನಿಗದಿಪಡಿಸಲಾಗಿದೆ. ಏಳು ಆಕ್ಸಲ್‌ಗಳಿಗಿಂತ ಹೆಚ್ಚು ಹೊಂದಿರುವ ಭಾರೀ ವಾಹನಗಳಿಗೆ ಈಗ ಏಕಮುಖ ಪ್ರಯಾಣಕ್ಕೆ 725 ರೂ. ಮತ್ತು ಹಿಂತಿರುಗಲು 1,090 ರೂ. ಶುಲ್ಕ ವಿಧಿಸಲಾಗುತ್ತದೆ.
ರಸ್ತೆ ನಿರ್ವಹಣೆ ಮತ್ತು ಮೂಲಸೌಕರ್ಯ ಸುಧಾರಣೆಗಳ ಅಗತ್ಯನ್ನು ಪೂರೈಕೆ ಮಾಡಲು ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ ಎಂದು ಅಧಿಕಾರಿಗಳು ಈ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಾಗ ಅಥವಾ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ ಸಂಚರಿಸಿದರೆ ಪ್ರಯಾಣ ದುಬಾರಿಯಾಗಿದ್ದು,ಹೊಸ ಶುಲ್ಕ ಪರಿಷ್ಕರಣೆಯು ನಿತ್ಯ ಪ್ರಯಾಣ ಮಾಡುವವರ ಮೇಲೆ ನೇರ ಪರಿಣಾಮ ಬೀರಲಿದೆ. ಅದೇ ರೀತಿ ಸರಕು ಸಾಗಣೆಯ, ಸಾರ್ವಜನಿಕ ಸಾರಿಗೆ ಮುಂತಾದವುಗಳ ಮೇಲಿನ ಸುಂಕದ ಹೊರೆ ಅಂತಿಮವಾಗಿ ಜನರ ಮೇಲೆಯೇ ಬೀಳಲಿದೆ.
ಟೋಲ್ ಶುಲ್ಕ ಹೆಚ್ಚಳವು ಪ್ರಯಾಣಿಕರು ಮತ್ತು ಸಾರಿಗೆ ನಿರ್ವಾಹಕರಲ್ಲಿ ಕಳವಳವನ್ನು ಉಂಟುಮಾಡಿದೆ, ಹೆಚ್ಚುತ್ತಿರುವ ವೆಚ್ಚಗಳು ತಮ್ಮ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಳ ಮಾಡುತ್ತಿದೆ.ಇದರಿಂದ ಬಡವರಿಗೆ ಸಂಕಷ್ಟ ಎದುರಾಗಿದೆ.


Click it and Unblock the Notifications