ಬೆಂಗಳೂರು: ಇತ್ತೀಚೆಗೆ ಒಬ್ಬ ಆಟೋ ಚಾಲಕ, ತನ್ನ ಆಟೋದಲ್ಲಿ, "ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ" ಎಂಬ ಪೋಸ್ಟರ್ ಪ್ರದರ್ಶಿಸಿ ಗಮನಸೆಳೆದಿದ್ದ. ಆದರೆ ಇದೀಗ ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವುದು ಆಟೋ ಚಾಲಕನೊಬ್ಬ ತನ್ನ ಆಟೋ ರಿಕ್ಷಾದಲ್ಲಿ ಅಂಟಿಸಿಕೊಂಡಿದ್ದ ಪೋಸ್ಟರ್.
ಹೌದು, ಜೀವನದಲ್ಲಿ ನಾವು ಏನಾದರೂ ಸಾಧಿಸಲೇಬೇಕೆಂದು ಬೆಂಗಳೂರು ಸಿಟಿ ಕಡೆಗೆ ಮುಖ ಮಾಡುತ್ತೇವೆ.ಇಲ್ಲಿ ನಮ್ಮಗೆ ಯಶಸೇ ಸಿಗಬಹುದು ಇಲ್ಲವೇ ಸೋತು ಸ್ಮಶಾನನೇ ಸೇರಬಹುದು ಇದೆಲ್ಲಾ ಗೊತ್ತಿದ್ದರೂ ನಾವು ಮಾತ್ರ ಹೊಸ ಉದ್ಯಮವನ್ನು ಕಟ್ಟಿ ಕಟ್ಟುತ್ತೇವೆ ಎಂಬ ಆಸೆಗಳನಿಟ್ಟುಕೊಂಡು ನಾವು ಗೊತ್ತಿಲ್ಲದ ಊರು, ಬೆಂಗಳೂರುಗೆ ಬರುತ್ತೇವೆ. ಇದು ಸ್ಟಾರ್ಟ್‌ಅಪ್‌ಗಳ ರಾಜಧಾನಿ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಆದರೆ ಅವರು ಹಠ ಮಾತ್ರ ಕೈ ಬಿಡುವುದಿಲ್ಲ ಅದಕ್ಕಾಗಿ ಬೇರೆ ಬೇರೆ ತರಹದ ಸರ್ಕಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತೆ ಇಲ್ಲವೇ ಬ್ಯಾಡ್ ಕಾಮೆಂಟ್ ಗಳಿಗೆ ಆಹಾರವಾಗುತ್ತಿವೆ.

ನಾವು ಅತಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಲನ್ನು ಬಳಸುವುದರಿಂದ ನಮ್ಮಗೆ ಅನೇಕ ವೈರಲ್ ವಿಚಾರಗಳು ಸಿಗುತ್ತೆ.. ಅದರಲ್ಲೂ ಕೆಲವು ಇಂಟರೆಸ್ಟಿಂಗ್ ವಿಷಯಗಳು ನಮ್ಮ ಗಮನ ಸಳೆಯುತ್ತಾವೆ. ಅದರಲ್ಲೂ ಇತ್ತೀಚಿಗೆ ಆಟೋ ಚಾಲಕನೊಬ್ಬ ತನ್ನ ಆಟೋ ರಿಕ್ಷಾದಲ್ಲಿ ಅಂಟಿಸಿಕೊಂಡಿದ್ದ ಪೋಸ್ಟರ್ ವೈರಲ್ ಆಗುತ್ತಿದೆ.
ಅಟೋ ಚಾಲಕ ಸ್ಯಾಮುವೆಲ್ ಕ್ರಿಸ್ಟಿ ತನ್ನ ಆಟೋದಲ್ಲಿ ಹಾಕಿಕೊಂಡ ಪೋಸ್ಟರ್‌ನ ಫೋಟೋ ತೆಗೆದ ಪ್ರಯಾಣಿಕರೊಬ್ಬರು ರೆಡ್ಡಿಟ್‌ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಸ್ಯಾಮುವೆಲ್ ಕ್ರಿಸ್ಟಿ ಪದವೀಧರನಾಗಿದ್ದು, ತನ್ನದೇ ಆದ ನವೋದ್ಯಮದ ಕನಸು ಕಂಡಿದ್ದಾರೆ. ಇದಕ್ಕೆ ಹೂಡಿಕೆದಾರರನ್ನು ಹುಡುಕುತ್ತಿದ್ದಾರೆ. ಎಂಬುವುದು ಪೋಸ್ಟರ್‌ನ ಅರ್ಥ.
ಆಟೋದಲ್ಲಿರುವ ಪೋಸ್ಟರ್‌ನಲ್ಲಿರುವುದು ಏನು..?
"ಹಾಯ್ ಪ್ರಯಾಣಿಕರೇ, ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನು ಪದವೀಧರ. ನನ್ನ ನವೋದ್ಯಮ ಸಾಕಾರಗೊಳಿಸಲು ಹಣವನ್ನು ಸಂಗ್ರಹಿಸಲು ನೋಡುತ್ತಿದ್ದೇನೆ. ನಿಮಗೆ ಆಸಕ್ತಿ ಇದ್ದರೆ, ದಯವಿಟ್ಟು ನನ್ನೊಂದಿಗೆ ಮಾತನಾಡಿ" ಎಂದು ಆತ ಬರೆದುಕೊಂಡಿದ್ದಾನೆ.
ಪ್ರತಿಕ್ರಿಯೆ ಹೀಗಿತ್ತು..?
ಆಟೋ ಡ್ರೈವರ್‌ನ ವಿಶಿಷ್ಟ ನಿಧಿಸಂಗ್ರಹಣೆ ವಿಧಾನವು ರೆಡ್ಡಿಟ್‌ನಲ್ಲಿ ಹಲವಾರು ಕಾಮೆಂಟ್ ಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಒಬ್ಬ ಬಳಕೆದಾರ ಚಾಲಕನ ಪ್ರಯತ್ನವನ್ನು ಶ್ಲಾಘಿಸಿದ್ದು, "ಇದು ಉತ್ತಮ ಪ್ರಯತ್ನ ಎಂದು ನಾನು ಭಾವಿಸುತ್ತೇನೆ. ಅವನು ಏನಾದರೂ ಒಳ್ಳೆಯದನ್ನು ಮಾಡುತ್ತಿದ್ದಾನೆ ಮತ್ತು ಆಶಿಸುತ್ತೇನೆ ಅವನು ಯಶಸ್ವಿಯಾಗುತ್ತಾನೆ!" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, "ಅವನು ಆಸಕ್ತಿ ಹೊಂದಿದ್ದರೆ, ನಾನು ಅವನಿಗೆ ಸಹಾಯ ಮಾಡಬಲ್ಲೆ" ಎಂದು ಬರೆದಿದ್ದಾರೆ.
ಅನೇಕರು ಅವರಿಗೆ ಯಶಸ್ಸನ್ನು ಹಾರೈಸಿದರೆ, ಇತರರು ಸಂದೇಹದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. "ದೇವರು ಅವನನ್ನು ಆಶೀರ್ವದಿಸಲಿ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ಇದೊಂದು ಹಗರಣವೂ ಆಗಿರಬಹುದು, ಬೆಂಗಳೂರಿನಲ್ಲಿ ಆಟೋ ಚಾಲಕರು ದೊಡ್ಡ ವಂಚಕರು." ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಚಾಲಕರ ಬಗ್ಗೆ ಆರೋಪಗಳು, ಟೀಕೆಗಳು ಏನೇ ಇರಬಹುದು. ಆದರೆ ಅವರು ಹೊಸ ಆಲೋಚನೆಗಳೊಂದಿಗೆ ಗಮನಸೆಳೆಯುತ್ತಿರುವುದು ಅಚ್ಚರಿ. ಇನ್ನೂ ಆಟೋ ಚಾಲಕನ ಪೋಸ್ಟರ್ ಅನ್ನು ಪ್ರಯಾಣಿಕರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.


Click it and Unblock the Notifications