ಅಭಿವೃದ್ದಿ ಹೊಂದಿದ ವಿದೇಶಿ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಸಾರಿಗೆಗೆ ಬಸ್‌ಗಳ ಸಹಿತ ಅನೇಕ ಟ್ಯಾಕ್ಸಿಗಳ ಸೇವೆ ಇದ್ದು, ಉತ್ತಮ ಸೇವೆ ನೀಡುತ್ತಿದೆ. ಆದರೆ ಭಾರತದಲ್ಲಿ ಇತ್ತೀಚಿಗೆ ಟ್ಯಾಕ್ಸಿ ಸೇವೆಗಳಲ್ಲಿ ಸುಧಾರಣೆ ಕಂಡು ಬಂದಿದ್ದರೂ ರಿಕ್ಷಾಗಳೇ ಇಲ್ಲಿನ ಸಾರಿಗೆ ವ್ಯವಸ್ಥೆಯ ಪ್ರಮುಖ ಮೂಲವಾಗಿದೆ. ಅದರಲ್ಲೂ ಮಹಾನಗರಗಳಲ್ಲಿ ಆಟೋ ರಿಕ್ಷಾಗಳು ನಿಗದಿಗಿಂತ ಹೆಚ್ಚಿನ ಹಣವನ್ನು ಪಡೆಯುತ್ತದೆ ಎಂಬ ಆರೋಪ ಕೂಡ ಇದೆ.
ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ಈ ವಿಚಾರದಲ್ಲಿ ಗ್ರಾಹಕರು ಹಾಗೂ ರಿಕ್ಷಾ ಚಾಲಕರ ನಡುವೆ ಮಾತಿನ ಸಮರ ನಡೆಯುತ್ತಲೇ ಇರುತ್ತದೆ. ಇನ್ನು ಸದ್ಯದ ವಿಚಾರವೇನೆಂದರೆ ಸದ್ಯ ಬೆಂಗಳೂರಿನಲ್ಲಿ ರಿಕ್ಷಾ ಚಾಲಕರು ತಮಗೆ ನೀಡಲಾಗುತ್ತಿರುವ ಕನಿಷ್ಠ ದರವನ್ನು 30 ರೂ.ನಿಂದ 40 ರೂ.ಗೆ ಏರಿಸುವಂತೆ ಹಾಗೂ ಪ್ರತೀ ಕಿ.ಮೀ.ಗೆ 15 ರಿಂದ 20 ರೂ. ವರೆಗೆ ಹೆಚ್ಚಿ ನೀಡುವಂತೆ ಹೊಸ ಬೇಡಿಕೆ ಇಟ್ಟಿದೆ.

ಬೆಲೆಗಳಲ್ಲಿ ಹೆಚ್ಚಾಗುವ ಸಾಧ್ಯತೆ?
ಇನ್ನು ಇದೇ ವಿಚಾರದಲ್ಲಿ ಚರ್ಚೆ ನಡೆಸುವ ಸಲುವಾಗಿ ಡಿಸೆಂಬರ್ 23ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ಬೆಂಗಳೂರಿನಲ್ಲಿ ಆಟೋ ಯೂನಿಯನ್‌ಗಳೊಂದಿಗೆ ಸಭೆ ನಡೆಸಲು ಯೋಜನೆ ಹಾಕಿಕೊಂಡಿದ್ದು, ದರ ಪರಿಷ್ಕರಣೆ ಕುರಿತು ಚರ್ಚೆ ನಡೆಸಲಿದೆ. ಹಾಗಾಗಿ ಮುಂದೆ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ದರದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಹಜವಾಗಿಯೇ ಇದರಿಂದ ಮಧ್ಯಮ ವರ್ಗದ ಜನತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎನ್ನಲಾಗಿದೆ.
ಯಾಕೆಂದರೆ ಶ್ರೀಮಂತರ ತಮ್ಮ ಸಾಗಾಟಕ್ಕೆ ಕಾರುಗಳ ಬಳಕೆ ಮಾಡುವುದು ಸಾಮಾನ್ಯ. ಆದರೆ ಬಡ ಮಧ್ಯಮ ವರ್ಗದ ಜನತೆ ಈಗಲೂ ಹೆಚ್ಚಾಗಿ ಆಟೋ ರಿಕ್ಷಾಗಳ ಬಳಕೆ ಮಾಡುವುದರಿಂದ ಸಹಜವಾಗಿಯೇ ದರ ಹೆಚ್ಚಳದಿಂದ ಜನತೆ ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನಲಾಗಿದೆ. ಕೊನೆಯ ಬಾರಿಗೆ ದರ ಪರಿಷ್ಕರಣೆಯು 2021ರಲ್ಲಿ ಆಗಿದ್ದು, ಆ ಬಳಿಕ ಕೋವಿಡ್ ಸೇರಿದಂತೆ ಕಾರಣಾಂತರಗಳಿಂದ ಇದಕ್ಕೆ ಸಂಬಂಧಿಸಿದ ನಿರ್ಧಾರವು ಮುಂದೂಡಲಾಗಿತ್ತು. ಸದ್ಯ ನಡೆಯಲಿರುವ ಸಭೆಯಲ್ಲಿ ದರ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.
ದರ ಹೆಚ್ಚಿಸಲು ಚಾಲಕರ ಕಾರಣಗಳೇನು?
ಇನ್ನು ಆಟೋ ರಿಕ್ಷಾಗಳ ಕನಿಷ್ಠ ದರ ಹೆಚ್ಚಳಕ್ಕೆ ಚಾಲಕರು ತಮ್ಮದೇ ಆದ ಕಾರಣಗಳನ್ನು ನೀಡುತ್ತಾರೆ. ಎಲ್‌ಪಿಜಿ ದರದಲ್ಲಿ ಇತ್ತೀಚಿಗೆ ಏರಿಕೆಯಾಗುತ್ತಲೇ ಇದ್ದು, ಅದೂ ಅಲ್ಲದೆ ದೈನಂದಿನ ವೆಚ್ಚಗಳು, ನಿರ್ವಹಣಾ ವೆಚ್ಚಗಳು ಏರಿಕೆಯಾಗುತ್ತಿದ್ದು, ದರ ಹೆಚ್ಚಳದ ಅನಿವಾರ್ಯತೆ ಇದೆ ಎಂದು ಅವರು ವಾದಿಸುತ್ತಾರೆ. ದರಗಳು ಮತ್ತು ಹೊಸ ಆಟೋ ರಿಕ್ಷಾಗಳ ಬೆಲೆಗಳು ಕೂಡ ಗಗನಕ್ಕೇರಿವೆ. ಕಳೆದ ದಶಕದಲ್ಲಿ ಆಟೋ ದರಗಳು ಕೇವಲ ಎರಡು ಬಾರಿ (2013 ಮತ್ತು 2021) ಪರಿಷ್ಕರಿಸಲ್ಪಟ್ಟಿವೆ, ಹಣದುಬ್ಬರದೊಂದಿಗೆ ಹಣ ಪರಿಷ್ಕರಣೆ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗಿದೆ.
ಆಟೋ ದರಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಿದರೆ ಅದು ಚಾಲಕರು ಮತ್ತು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ನ್ಯಾಯಯುತ ದರದಲ್ಲಿ ಆಟೋಗಳ ಲಭ್ಯತೆಯನ್ನು ಕೂಡ ಮಾಡುತ್ತದೆ. ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಮೂಲಕ ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ರುದ್ರಮೂರ್ತಿ ತಿಳಿಸಿದ್ದಾರೆ.
ಆದರ್ಶ ಆಟೋ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ ಸಂಪತ್ ಪ್ರತಿಕ್ರಿಯೆ ನೀಡುತ್ತಾ, 'ಕರ್ನಾಟಕದ ಇತರ ನಗರಗಳಲ್ಲಿ ಈಗಾಗಲೇ ಕನಿಷ್ಠ ದರ 40 ರೂ. ಇರುವ ನಗರಗಳ ಮಾದರಿಯನ್ನು ಬೆಂಗಳೂರು ಅನುಸರಿಸಬೇಕು. ಶಿವಮೊಗ್ಗ, ಮಂಗಳೂರು, ಉಡುಪಿಯಂತಹ ಕಡೆಗಳಲ್ಲಿ ಕನಿಷ್ಠ ಆಟೋ ದರವು ಪ್ರತೀ ಮೊದಲ ಎರಡು ಕಿ.ಮೀ.ಗೆ 40 ರೂ. ಇದೆ. ಹಾಗಾಗಿ ಬೆಂಗಳೂರಿನಲ್ಲಿ ಜೀವನವೆಚ್ಚ ಏರಿಕೆಯಾಗುತ್ತಿರುವುದನ್ನು ಗಮನಿಸಿ ದರಗಳನ್ನು ಕೂಡ ಏರಿಸಬೇಕು ಎಂದು ತಿಳಿಸಿದ್ದಾರೆ.
ಒಕ್ಕೂಟಗಳಲ್ಲೇ ಭಿನ್ನಾಭಿಪ್ರಾಯ?
ಸದ್ಯ ರಿಕ್ಷಾಗಳ ಕನಿಷ್ಠ ದರ ಏರಿಕೆ ಮಾಡಬೇಕೆಂಬ ನಿರ್ಧಾರಗಳು ಒಕ್ಕೂಟಗಳಲ್ಲೇ ಭಿನ್ನಾಭಿಪ್ರಾಯವನ್ನು ಹೊಂದಿದೆ ಎನ್ನಲಾಗಿದೆ. ಯಾಕೆಂದರೆ ರಾಜ್ಯ ಸರ್ಕಾರವು ಈಗಾಗಲೇ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಬಹುತೇಕ ಮಹಿಳೆಯರೆಲ್ಲರೂ ಸರ್ಕಾರಿ ಬಸ್‌ಗಳನ್ನೇ ಆಶ್ರಯಿಸುತ್ತಿದ್ದಾರೆ. ಒಂದು ವೇಳೆ ರಿಕ್ಷಾಗಳ ದರ ಹೆಚ್ಚಿಸಿದರೆ ಎಲ್ಲಾ ಮಹಿಳೆಯರು ಕೂಡ ಸರ್ಕಾರಿ ಬಸ್‌ಗಳನ್ನೇ ಆಶ್ರಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ರಿಕ್ಷಾಗಳಿಗೆ ಬರುವ ಆದಾಯವು ತಪ್ಪಲಿದೆ ಎಂಬ ಆತಂಕವನ್ನು ಒಕ್ಕೂಟಗಳು ಹೊಂದಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications