ವಾಹನ ಸವಾರರೇ ಇಲ್ಲಿ ಕೇಳಿ ಈ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ..! ಹೌದು,ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗದಲ್ಲಿ ಹೆಡಿಗೆನಬೆಲೆ (ಹೊಸ್ಕೋಟೆ ಬಳಿ) ಯಿಂದ ಸುಂದರಪಾಳ್ಯದ (ಕೆಜಿಎಫ್ ಬಳಿ)ವರೆಗಿನ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ವಾಹನ ಸವಾರರ ಆರ್ಥಿಕ ಸಂಕಷ್ಟ ಎದುರಾಗಬಹುದು..!
ಹೌದು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಸದ್ಯಕ್ಕೆ ಈ ಮಾರ್ಗವು ಏಳು ತಿಂಗಳಿಗೂ ಹೆಚ್ಚು ಕಾಲದಿಂದ ಉಚಿತವಾಗಿ ಬಳಕೆಗೆ ಲಭ್ಯವಿದೆ. ಆದರೆ,71 ಕಿ.ಮೀ ಉದ್ದದ ಈ ಮಾರ್ಗವು ಪೂರ್ಣಪ್ರಮಾಣದಲ್ಲಿ ಸಂಯೋಜನೆಗೊಂಡ ನಂತರ ಮತ್ತು ಜಿಲ್ಲಾ ಮಟ್ಟದ ಸಮನ್ವಯ ಕಾರ್ಯಗಳು ಪೂರ್ಣಗೊಂಡ ಬಳಿಕ ಟೋಲ್ ಸಂಗ್ರಹಣೆ ಪ್ರಾರಂಭ ಮಾಡಲಾಗಿದೆ.

ಯಾವ ವಾಹನಗಳಿಗೇ ಎಷ್ಟು ದರ ಏರಿಕೆ?
ವರದಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಹೆಡಿಗೆನಬೆಲೆಯಿಂದ ಸುಂದರಪಾಳ್ಯಕ್ಕೆ ಕಾರು ಮತ್ತು ಜೀಪ್‌ಗಳ ಏಕಮುಖ ಚಲನೆಗೆ185 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ ಹಿಂದಿರುಗುವ ಪ್ರಯಾಣಕ್ಕೆ 275 ರೂ ಆಗಲಿದೆ. ಆದರೆ ಹಿಮ್ಮುಖ ದಿಕ್ಕಿನಲ್ಲಿ ಪ್ರಯಾಣಿಸುವಾಗ ಒಂದೇ ಪ್ರಯಾಣಕ್ಕೆ 190 ಶುಲ್ಕ ಕೂಡ ಅನ್ವಯವಾಗುತ್ತದೆ. ಒಂದು ತಿಂಗಳ ಅವಧಿಗೆ 50 ಟ್ರಿಪ್‌ಗಳ ಮಾಸಿಕ ಪಾಸ್‌ಗೆ ಒಂದು ದಿಕ್ಕಿನಲ್ಲಿ 6,105 ರೂ ಮತ್ತು ಹಿಮ್ಮುಖ ದಿಕ್ಕಿನಲ್ಲಿ 6,260 ರೂ. ದರವನ್ನು ನಿಗದಿಯನ್ನು ಮಾಡಲಾಗಿದೆ.
ಇತರ ವಾಹನಗಳಿಗೆ ವಿಧಿಸಲಾಗುವ ಟೋಲ್ ದರಗಳು ವಾಹನದ ವರ್ಗ ಮತ್ತು ಪ್ರಯಾಣದ ದಿಕ್ಕನ್ನು ಅವಲಂಬಿಸಿ ಬದಲಾಗುತ್ತವೆ. ಲಘು ವಾಣಿಜ್ಯ ವಾಹನಗಳು (LCV), ಲಘು ಸರಕು ವಾಹನಗಳು (LGV) ಮತ್ತು ಮಿನಿ ಬಸ್‌ಗಳಿಗೆ ಹೆಡಿಗೆನಬೆಲೆಯಿಂದ ಸುಂದರಪಾಳ್ಯಕ್ಕೆ ಒಂದು ಬಾರಿ ಪ್ರಯಾಣಿಸಲು 295 ರೂ ಮತ್ತು ಹಿಂದಿರುಗುವ ಪ್ರಯಾಣಕ್ಕೆ 445 ರೂ ಶುಲ್ಕವನ್ನು ನೀವು ಕಟ್ಟಬೇಕಾಗುತ್ತದೆ.
ಸುಂದರಪಾಳ್ಯದಿಂದ ಹೆಡಿಗೆನಬೆಲೆಗೆ ಪ್ರಯಾಣಿಸುವ ವಾಹನಗಳಿಗೆ ಕ್ರಮವಾಗಿ 305 ರೂ ಮತ್ತು 455 ರೂ.ಗಳ ದರಗಳನ್ನು ನಿಗದಿಪಡಿಸಲಾಗಿದೆ.
ಟ್ರಕ್‌ಗಳು ಮತ್ತು ಬಸ್‌ಗಳಂತಹ ಭಾರೀ ವಾಹನಗಳಿಗೆ ಹೆಡಿಗೆನಬೆಲೆಯಿಂದ ಒಂದು ಬಾರಿಯ ಪ್ರಯಾಣಕ್ಕೆ 620 ರೂ. ಮತ್ತು ಹಿಂದಿರುಗುವ ಪ್ರಯಾಣಕ್ಕೆ 930 ರೂ. ಶುಲ್ಕ ವಿಧಿಸಲಾಗುವುದು. ಸುಂದರಪಾಳ್ಯದಿಂದ ಇದೇ ಮಾರ್ಗವಾಗಿ ಬರುವ ವಾಹನಗಳಿಗೆ 635 ರೂ. ಮತ್ತು 955 ರೂ.ಗಳ ದರಗಳು ಅನ್ವಯವಾಗುತ್ತದೆ.
ತಿಂಗಳ ಮೊದಲ ದಿನ ಟೋಲ್ ದರ ಹೆಚ್ಚಳ
ಪ್ರತಿ ತಿಂಗಳು ಮೊದಲ ದಿನ ಒಂದೆಲ್ಲಾ ಒಂದು ಬದಲಾವಣೆಗಳು ಜಾರಿಗೆ ಬರುತ್ತೇವೆ. ಕೆಲವೊಂದು ಟೋಲ್ ಗಳು ದರ ಏರಿಕೆಯನ್ನು ಮಾಡುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. ಬೆಂಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ನೈಸ್ ರಸ್ತೆಯ ಟೋಲ್ ದರಗಳು ಜುಲೈ 1ನೇ ತಾರೀಖು ಮಧ್ಯರಾತ್ರಿಯಿಂದಲೇ ಏರಿಕೆಯಾಗಿವೆ. ಈ ರಸ್ತೆಯು ನಗರದ ಹೊರವಲಯದಲ್ಲಿ ಸಂಚರಿಸುವವರಿಗೆ ಟೋಲ್ ದರ ಹೆಚ್ಚಳದಿಂದ ಜೇಬಿಗೆ ಕತ್ತರಿ ಬಿದ್ದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಟೋಲ್ ದರಗಳ ಏರಿಕೆಯು ವಾಹನ ಸವಾರರ ಮೇಲೆ ಹಾಗೂ ಸಾರ್ವಜನಿಕ ಸಾರಿಗೆಯ ದರಗಳ ಮೇಲೂ ಕೂಡ ಹೆಚ್ಚಿನ ಪರಿಣಾಮ ಬೀರುವಂತಹ ಸಾಧ್ಯತೆ ಹೆಚ್ಚಾಗಿ ಇದೆ. ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.


Click it and Unblock the Notifications