ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಈಗಂತೂ ಇಕಾಮರ್ಸ್ ವೆಬ್ ಸೈಟ್‌ಗಳು ಸಹ ಗ್ರಾಹಕರಿಗೆ ಬೇಕಿದ್ದ ಮನೆ ಬಳಕೆಯ ಪದಾರ್ಥಗಳನ್ನು ಸಹ ಕಡಿಮೆ ದುಡ್ಡಿನಲ್ಲಿ ನೀಡುತ್ತವೆ. ಇದರಿಂದ ವ್ಯಾಪಾರಿಗಳಿಗೆ ಪೆಟ್ಟು ಬಿದ್ದಿದೆ. ಆದರೆ ಈ ವ್ಯಾಪಾರಿ ತನ್ನಲ್ಲಿರುವ ಉತ್ಪನ್ನವನ್ನು ಮಾರಾಟ ಮಾಡಲು ಕಂಡುಕೊಂಡ ಪ್ಲ್ಯಾನ್ ನೋಡಿ ಗ್ರಾಹಕರು ಸಹ ಈ ಅಂಗಡಿಗೆ ಹೋಗಿ ಒಮ್ಮೆ ಆ ವ್ಯಾಪರಿ ಬಳಿ ಇರುವ ಉತ್ಪನವನ್ನು ಪರಿಶೀಲಿಸುವಂತೆ ಆಗಿದೆ.
ವ್ಯಾಪಾರಿಯ ಸೃಜನಶೀಲತೆಯನ್ನು ಈ ಬಿತ್ತಿ ಪತ್ರದಲ್ಲಿ ನೋಡಬಹುದಾಗಿದೆ. ಅಸಲಿಗೆ ಗ್ರಾಹಕರು ಹಣವನ್ನು ಉಳಿಸಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ನಾಲ್ಕೈದು ವೆಬ್ ಸೈಟ್ ಚೆಕ್ ಮಾಡಿ ಕಡಿಮೆ ಬೆಲೆ ಎಲ್ಲಿದೆ ಅಲ್ಲಿಂದ ಆರ್ಡರ್ ಮಾಡುತ್ತಾರೆ. ಆದರೆ ಈ ವ್ಯಾಪಾರಿ ಗ್ರಾಹಕರಿಗೆ ಹೆಚ್ಚಿನ ತೊಂದರೆಯನ್ನು ನೀಡದೆ, ಬೇರೆ ಫ್ಲಾಟ್ ಫಾರ್ಮ್‌ನಲ್ಲಿ ತೆಂಗಿನ ಕಾಯಿಯ ಬೆಲೆ ಹಾಗೂ ತನ್ನಲ್ಲಿ ಕೊಂಡರೆ ಬೆಲೆ ಎಷ್ಟು ಎಂಬುದನ್ನು ಸ್ಪಷ್ಟವಾಗಿ ಬರೆದು ತನ್ನ ಅಂಗಡಿಯ ಗೋಡೆಗೆ ಅಂಟಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಪೋಸ್ಟ್ ವೈರಲ್
ವ್ಯಾಪಾರಿ ತನ್ನ ಅಂಗಡಿಯ ಹೊರಗಡೆ ಬಿಗ್ ಬಾಸ್ಕೆಟ್‌ನಲ್ಲಿ ತೆಂಗಿನಕಾಯಿ ಕೊಂಡರೆ 70 ರೂಪಾಯಿ ಆಸು ಪಾಸು. ಜೆಪ್ಟೋದಲ್ಲಿ ಹಾಗೂ ಬ್ಲಿಂಕಿಟ್‌ನಲ್ಲಿ ತೆಂಗಿನಕಾಯಿಯ ಬೆಲೆ 80 ರೂಪಾಯಿ ಆಗಿರಲಿದೆ. ಆದರೆ ನಮ್ಮ ಅಂಗಡಿಯಲ್ಲಿ ಕೊಂಡರೆ ನೀವು 55 ರೂ.ಗೆ ತೆಂಗಿನ ಕಾಯಿ ಕೊಳ್ಳಬಹುದು ಎಂಬ ಬೋರ್ಡ್ ಹಾಕಿದ್ದಾನೆ. ಇದರಿಂದ ಅನೇಕ ಗ್ರಾಹಕರು ಪ್ರಭಾವಿತರಾಗಿರುವುದು ಕಂಡು ಬಂದಿದೆ. ಅಲ್ಲದೆ ಕಡಿಮೆ ಬೆಲೆಗೆ ತೆಂಗಿನಕಾಯಿ ಸಿಗುವುದನ್ನು ಕಂಡು ಗ್ರಾಹಕರು ಖರೀದಿ ಮಾಡಿದ್ದಾರೆ.
ಅಂಗಡಿಯ ಹೊರಗಡೆ ಹಚ್ಚಿರುವ ದರ ಪಟ್ಟಿ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ. ಪೀಕ್ ಬೆಂಗಳೂರು ಖಾತೆಯಲ್ಲಿ ಈ ಪೋಸ್ಟರೋ ಫೋಟೋ ಹಾಕಲಾಗಿದ್ದು, ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಈಗಾಗಲೇ ಈ ಪೋಸ್ಟ್‌ನ್ನು 11.8 ಸಾವಿರ ಜನ ವೀಕ್ಷಿಸಿದ್ದು, 24 ಜನ ರೀ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ತಾಣದಲ್ಲಿ ಅಂಗಡಿ ಮಾಲೀಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಈ ಪೋಸ್ಟ್‌ಗೆ ಬಳಕೆದಾರರು ಭಿನ್ನ ಕಮೆಂಟ್‌ಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ಬಿದಿ ಬದಿಯ ತೆಂಗಿನ ಕಾಯಿಗೆ 80 ರೂಪಾಯಿ ಆಗಿದ್ದರೆ, ಬ್ಲಿಂಕಿಟ್‌ನಲ್ಲಿ ಇದಕ್ಕೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆ ದಾರ ಈ ವ್ಯಾಪಾರಿಯನ್ನು ಪ್ರಶಂಸಿದ್ದು, ಕೊನೆಯಲ್ಲಿ ಸ್ಮೈಲ್ ಹಾಕಿದ್ದು ಇಷ್ಟವಾಗಿದೆ ಎಂದು ಬರೆದಿಕೊಂಡಿದ್ದಾರೆ.
ಕ್ವಿಕ್ ಕಾಮರ್ಸ್ ಆಪ್‌ಗಳು ಗ್ರಾಹಕರ ಬೇಡಿಕೆಯ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಮುಟ್ಟಿಸುತ್ತವೆ. ಆದರೆ ಈ ವಸ್ತುಗಳ ಬೆಲೆ ಹೆಚ್ಚಿರುತ್ತದೆ. ಈ ಬೆಲೆಯ ಅಂತರವು ಸಣ್ಣ ವ್ಯವಹಾರಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ತೋರಿಸುತ್ತದೆ.


Click it and Unblock the Notifications