ಈಗಿನ ಹುಡುಗರು ಮದುವೆಗೆ ಹುಡುಗಿಯರನ್ನು ಹುಡುಕಿ ಹುಡುಕಿ ಸುಸ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹುಡುಗರಿಗೆ ತಮ್ಮ ಇಶ್ಚೆಯ ಮನದರಸಿಯನ್ನು ಹುಡಕಿ ಕೊಡಲು ಹಲವು ವೆಬ್ ಪ್ರೋಟಾಲ್‌ಗಳು ಆರಂಭವಾಗಿವೆ. ದಿನ ಬೆಳಗ್ಗಾದರೆ ಹುಡುಗರು, ಮೊಬೈಲ್ ಹಿಡಿದು ತಮಗೆ ಯಾವುದಾದರೂ ಹುಡುಗಿ ಸೆಲೆಕ್ಟ್ ಆಗ್ತಾಳಾ ಎಂದು ನೋಡುವುದೇ ದೊಡ್ಡ ಚಿಂತೆಯಾಗಿದೆ.
ವಧು, ವರರನ್ನು ಹುಡುಕುವದು ಎಷ್ಟ ಕಷ್ಟ ಎಂದು ಈಗಿನ ಸ್ಥಿತಿಯಲ್ಲಿ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ತಮ್ಮದೇ ಆದ ರೀತಿಯಲ್ಲಿ ಇದರ ಅರಿವು ಆಗಿರುತ್ತದೆ. ಮದುವೆ ಆಗುತ್ತಿಲ್ಲ ಎಂದು ಯುವಕರು ಮ್ಯಾರೇಜ್ ಬ್ಯೂರೋಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಆದರೆ ಈ ಪೋರ್ಟಲ್‌ಗಳಲ್ಲೂ ಮಧುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ ಎಂಬುದೇ ಅಚ್ಚರಿ. ಈ ಪೋರ್ಟಲ್‌ಗಳು ವರನಿಗೆ ಮಧುವೆ ಮಾಡಿಸುವುದಾಗಿ ಟೋಫಿ ಹಾಕಿ ಹಣ ದೂಚಿದ್ದರು. ವರನ ಕುಟುಂಬಸ್ಥರು ನ್ಯಾಯ ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದರು ಆ ಬಗ್ಗೆ ಒಂದು ವರದಿ ಇಲ್ಲಿದೆ.

ಆಗಿದ್ದೇನು?
ಬೆಂಗಳೂರಿನ ಎಂ.ಎಸ್ ನಗರದ ನಿವಾಸಿ ವಿಜಯ್ ಕುಮಾರ್ ಕೆಎಸ್ ತಮ್ಮ ಮಗ ಬಾಲಾಜಿಗೆ ವಧುವನ್ನು ಹುಡುಕುತ್ತಿದ್ದರು. ಇದೇ ವೇಳೆ ಕಲ್ಯಾಣ್ ನಗರದಲ್ಲಿರುವ ದಿಲ್ಮಿಲ್ ಕಚೇರಿ ವಿಜಯ್ ಕುಮಾರ್ ಅವರಿಗೆ ಕಂಡಿತು. ಮ್ಯಾಟ್ರಿಮೋನಿ ಪೋರ್ಟಲ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿದರು.
ಇದೇ ವರ್ಷ ಮಾರ್ಚ್ 17 ರಂದು ವಿಜಯ್ ಕುಮಾರ್ ತಮ್ಮ ಮಗನ ದಾಖಲೆಗಳನ್ನು ಹಾಗೂ ಭಾವಚಿತ್ರವನ್ನು ಪೋರ್ಟಲ್‌ಗೆ ನೀಡಿದರು. ವಧುವನ್ನು ಹುಡುಕಲು 30 ಸಾವಿರ ರೂಪಾಯಿ ಶುಲ್ಕ ಕಟ್ಟುವಂತೆ ಸೂಚಿಸಿದರು. ಹಣ ಕಟ್ಟಿದ ಬಳಿಕ ದಿಲ್ಮಿಲ್ ಕಂಪನಿ 45 ದಿನಗಳಲ್ಲಿ ಸಂಭಾವ್ಯ ವಧುವನ್ನು ವಧುವನ್ನು ಹುಡುಕುವುದಾಗಿ ದಿಲ್ಮಿಲ್ ಮ್ಯಾಟ್ರಿಮೋನಿ ಮೌಖಿಕವಾಗಿ ವಿಶ್ವಾಸ ನೀಡಿತ್ತು.
ಮ್ಯಾಟ್ರಿಮೋನಿ ಪೋರ್ಟಲ್ ಬಾಲಾಜಿಗೆ ವಧುವನ್ನು ಶೋಧಿಸಲು ಆಗಲಿಲ್ಲ. ಇದರಿಂದ ಹತಾಶರಾದ ವಿಜಯ್ ಕುಮಾರ್ ಅನೇಕ ಬಾರಿ ದಿಲ್ಮಿಲ್ ಕಚೇರಿಗೆ ಭೇಟಿ ನೀಡಿದ್ದರು. ಆದರೆ ಎಷ್ಟು ಅಲೆದಾಡಿದರೂ, ಸಂಭಾವ್ಯ ವಧು ಶೋಧ ಕಾರ್ಯ ನಡೆಯಲಿಲ್ಲ. ಅಲ್ಲದೆ ವಿಜಯ್ ಕುಮಾರ್ ಅವರು 30 ಸಾವಿರ ಹಣ ಕಳೆದುಕೊಂಡರು. ಇದೇ ವೇಳೆ ಏಪ್ರಿಲ್ 30ರಂದು ವಿಜಯ ಕುಮಾರ್ ದಿಲ್ಮಿಲ್ ಕಚೇರಿಗೆ ತೆರಳಿ ಹಣ ಮರಳಿ ನೀಡುವಂತೆ ಕೇಳಿಕೊಂಡರು. ಆದರೆ ಇವರ ಮನವಿಗೆ ಸಿಬ್ಬಂದಿ ಸೊಪ್ಪು ಹಾಕಲಿಲ್ಲ.

ದಿಲ್ಲಿಲ್ ವಿರುದ್ಧ ಕಾನೂನು ಸಮರ
ತಮ್ಮ ಮಗನಿಗೆ ವಧು ಹುಡುಕಲು ವಿಫಲವಾದ ದಿಲ್ಮಿಲ್ ಮ್ಯಾಟ್ರಿಮೋನಿ ವಿರುದ್ಧ ವಿಜಯ್ ಕುಮಾರ್ ಮೇ 9 ರಂದು ಲೀಗಲ್ ನೋಟಿಸ್ ಕಳುಹಿಸಿದರು. ಆದರೆ ನೋಟಿಸ್‌ಗೂ ಕ್ಯಾರೆ ಅನ್ನದ ಮ್ಯಾಟ್ರಿಮೋನಿ ಸಂಸ್ಥೆಯ ವಿರುದ್ಧದ ಪ್ರಕರಣದ ವಿಚಾರಣೆ ಗ್ರಾಹಕ ನ್ಯಾಯಾಲಯದಲ್ಲಿ ನಡೆಯಿತು. ಈ ಪ್ರಕರಣದ ತೀರ್ಪನ್ನು ಅಕ್ಟೋಬರ್ 28 ರಂದು ನ್ಯಾಯಾಲಯ ನೀಡಿದೆ. ಶುಲ್ಕ ಸಂಗ್ರಹಿಸಿದ್ದಕ್ಕೆ 30 ಸಾವಿರ ರೂ. ಸೇವಾ ಕೊರತೆಗೆ 20 ಸಾವಿರ, ಮಾನಸಿಕ ಕಿರಿಕಿರಿಗೆ 5000 ರೂ. ದಾವೆಗಾಗಿ 5000 ರೂ.ಗಳನ್ನು ಮರುಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
ದೂರಿನಲ್ಲಿ ಏನಿತ್ತು?
ವಿಜಯ್ ಕುಮಾರ್ ಅವರು ನೀಡಿದ ದೂರಿನಲ್ಲಿ ತಮ್ಮ ಮಗನಿಗೆ ಮ್ಯಾಟ್ರಿಮೋನಿ ಸಂಸ್ಥೆ ಒಂದೇ ಒಂದು ಪ್ರೊಫೈಲ್ ಪಡೆಯಲಿಲ್ಲ. ಕಚೇರಿಗೆ ಭೇಟಿ ನೀಡಿದಾಗ ನಿಂದಿಸಿದ್ದು, ಹಣವನ್ನು ವಾಪಸ್ ನೀಡಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications