ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬೆಸ್ಕಾಂ ಇಲಾಖೆಗಳಿಂದ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಬಿಬಿಎಂಪಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಅದರಂತೆ, ಇನ್ಮುಂದೆ ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕ ಸಿಗಲಿದೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಇಲಾಖೆಗಳೊಂದಿಗೆ ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರ (Completion Certificate - CC) ಪಡೆಯಲು ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ವೊಂದನ್ನು ನೀಡಿದ್ದಾರೆ.

ಇವರು ಹೇಳಿರುವ ಮಾಹಿತಿಯ ಪ್ರಕಾರ ಇನ್ಮುಂದೆ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು & ಒಳಚರಂಡಿ ಸಂಪರ್ಕ ಸಿಗಲಿದೆ.
ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ BESCOM ಗೆ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು 66,400 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಸಂಬಂಧ, 2024 ಡಿಸೆಂಬರ್ 17 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ, ಯಾವುದೇ ಕಟ್ಟಡಕ್ಕೆ ವಿದ್ಯುತ್, ನೀರು ಅಥವಾ ಒಳಚರಂಡಿ ಸಂಪರ್ಕಗಳನ್ನು ನೀಡಲು ಪೂರ್ಣತಾ ಪ್ರಮಾಣ ಪತ್ರ (OC) ಅಥವಾ ಸ್ವಾಧೀನಾನುಭವ ಪ್ರಮಾಣ ಪತ್ರ (Completion Certificate - CC) ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ 2025 ಜನವರಿಯಲ್ಲಿ BESCOM ಮತ್ತು BWSSB ಗೆ ನೀಡಲಾದ ಪತ್ರದಲ್ಲಿ ಈ ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮುಖ್ಯ ಅಂಶಗಳು
OC/CC ಅಗತ್ಯತೆ: ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ನೀಡಲು ಕಟ್ಟಡವು ಬಿಬಿಎಂಪಿಯಿಂದ OC ಅಥವಾ CC ಪಡೆದಿರಬೇಕು.
ಅನಧಿಕೃತ ಕಟ್ಟಡಗಳಿಗೆ ಸೇವೆ ನಿರಾಕರಣೆ: ಅನಧಿಕೃತ ಕಟ್ಟಡಗಳಿಗೆ ಯಾವುದೇ utility connections ನೀಡಬಾರದು.
ಅಧಿಕಾರಿಗಳ ಜವಾಬ್ದಾರಿ: ಅನಧಿಕೃತ ಕಟ್ಟಡಗಳಿಗೆ ಸೇವೆ ನೀಡಿದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.
ನಿಯಮ ಪಾಲನೆ: ಸ್ಥಳೀಯ ಸಂಸ್ಥೆಗಳು ಮತ್ತು utility ಸೇವಾ ಸಂಸ್ಥೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
BBMP ನಿಂದ BESCOM ಗೆ ನೀಡಲಾದ ಸೂಚನೆ:
BBMP ಮುಖ್ಯ ಆಯುಕ್ತ ಅವರು 2025 ಜನವರಿಯಲ್ಲಿ BESCOM ಮತ್ತು BWSSB ಗೆ ಪತ್ರ ಬರೆದಿದ್ದು, ಯಾವುದೇ ಕಟ್ಟಡಕ್ಕೆ OC ಅಥವಾ CC ಇಲ್ಲದೆ ವಿದ್ಯುತ್, ನೀರು ಅಥವಾ ಒಳಚರಂಡಿ ಸಂಪರ್ಕಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ. ಈ ಕ್ರಮವು ನಗರದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ತಡೆಹಿಡಿಯಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕೈಗೊಳ್ಳಲಾಗಿದೆ .
CC ಪಡೆಯಲು ಕ್ರಮಗಳು
ಆನ್‌ಲೈನ್ ಅರ್ಜಿ ಸಲ್ಲಿಸಿ: BBMP BPAS ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಸ್ಥಳ ಪರಿಶೀಲನೆ: BBMP ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಎಲ್ಲಾ ನಿಯಮಗಳು ಪಾಲನೆಯಾಗಿದೆಯೇ ಎಂದು ಪರಿಶೀಲಿಸುತ್ತಾರೆ.
CC ಬಿಡುಗಡೆ: ಪರಿಶೀಲನೆ ಯಶಸ್ವಿಯಾಗಿ ಮುಗಿದ ನಂತರ, 7 ಕಾರ್ಯದಿನಗಳಲ್ಲಿ CC ನೀಡಲಾಗುತ್ತದೆ.
ಸಂಪರ್ಕ: CC ಪಡೆದ ನಂತರ, BESCOM ಮತ್ತು BWSSB ಇಲಾಖೆಗಳ ಮೂಲಕ ವಿದ್ಯುತ್ ಮತ್ತು ನೀರಿನ ಸಂಪರ್ಕಗಳನ್ನು ಪಡೆಯಬಹುದು.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಮುಂದಿನ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಇದರ ಉದ್ದೇಶ, ಅನಧಿಕೃತ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ನೀರು ಅಥವಾ ಒಳಚರಂಡಿ ಸಂಪರ್ಕಗಳನ್ನು ನೀಡದಿರುವುದು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳ ಅನುಸರಣೆಯನ್ನು ಖಚಿತಪಡಿಸುವುದಾಗಿದೆ.
ಬಿಎಂಪಿಯ ಇತ್ತೀಚಿನ ಕ್ರಮಗಳು
ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ
1. SMS ಮತ್ತು ದೂರವಾಣಿ ಕರೆ ಮೂಲಕ ಸಂಪರ್ಕ: BESCOM ಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ BBMP ನಿಂದ SMS ಹಾಗೂ ಫೋನ್‌ಕಾಲ್ ಮೂಲಕ ಸಂಪರ್ಕ ಮಾಡಲಾಗುವುದು.
ಸಂಪರ್ಕದ ಉದ್ದೇಶ: ಕಟ್ಟಡಕ್ಕೆ 'A ಖಾತಾ' ಅಥವಾ 'B ಖಾತಾ' ಹೊಂದಿದೆಯೇ ಎಂಬ ಮಾಹಿತಿ ಪಡೆಯುವುದು. ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ನಕ್ಷೆ ಹೊಂದಿದೆಯೇ ಎಂಬುದರ ದೃಢೀಕರಣ.
Completion Certificate (CC) ಅಥವಾ Occupancy Certificate (OC) ಪಡೆಯಲು ಅರ್ಜಿ ಸಲ್ಲಿಸಿರುವ ವಿವರಗಳ ಪರಿಶೀಲನೆ.
2. ಮಾಹಿತಿ ಸಂಗ್ರಹ ಮತ್ತು ದೃಢೀಕರಣ
BBMP ಯೋಜನೆ ಮತ್ತು ಕಟ್ಟಡ ಅನುಮತಿ ವಿಭಾಗ ಈ ಮಾಹಿತಿಯನ್ನು BESCOM ಗೆ ನೀಡುವ ಮೊದಲು ಪರಿಶೀಲಿಸುತ್ತಿದೆ.
ಯಾವುದೇ ಅನಧಿಕೃತ ಅಥವಾ ಅನುಮತಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ನಿಷೇಧಿಸಲಾಗಿದೆ.
3. BESCOM-BBMP ಸಂಯುಕ್ತ ತಾಳ್ಮೆ
BESCOM ಕಡೆಯಿಂದ ವಿದ್ಯುತ್ ಸಂಪರ್ಕ ನೀಡುವ ಮೊದಲು BBMP ನಿಂದ OC/CC ಸಂಬಂಧಿತ ಮಾಹಿತಿ ಕಡ್ಡಾಯವಾಗಿ ಪಡೆಯಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರು ನಗರ ನಿವಾಸಿಗಳಿಗೆ ಈ ಕೆಳಗಿನ ಮಾಹಿತಿಯನ್ನು ಒದಗಿಸಲು ಹಾಗೂ ಕಾಯ್ದೆಬದ್ಧ ಅನುಮೋದನೆಯ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ:
ನೀವು ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಲು ಹಾಗೂ ಈ ಕೆಳಕಂಡ ಆನ್ಲೈನ್ ಲಿಂಕ್ ಮೂಲಕ ನೊಂದಾಯಿತ Architect/ Engineer ಗಳ ಮುಖಾಂತರ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಬೆಂಗಳೂರು ಸಾರ್ವಜನಿಕರನ್ನು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಕಟ್ಟಡ ಮಾಲೀಕರು https://bpas.bbmpgov.in/BPAMSClient4/Default.aspx ಗೆ ಭೇಟಿ ನೀಡಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಯಾಕೆ ಇದು ಅಗತ್ಯ?
ಸುಪ್ರೀಂ ಕೋರ್ಟ್ ಆದೇಶ (Civil Appeal No. 14605/2024, 17-12-2024): BBMP ನಿಂದ ನಕಲಿ ಅಥವಾ ಅನುಮತಿ ಇಲ್ಲದ ಕಟ್ಟಡಗಳಿಗೆ utility connections ನಿಷೇಧಿಸಲಾಗಿದೆ.
BBMP-BESCOM-BWSSB ಸಂಯುಕ್ತ ಕಾರ್ಯಾಚರಣೆ: BBMP ನ ಅನುಮತಿ ಇಲ್ಲದ ಕಟ್ಟಡಗಳಿಗೆ ಯಾವುದೇ ವಿದ್ಯುತ್ ಅಥವಾ ನೀರು ಸಂಪರ್ಕವನ್ನು ಅನುಮತಿಸಲಾಗುವುದಿಲ್ಲ.
ಆದರಿಂದ ಬೆಂಗಳೂರಿಗರು ಬಿಬಿಎಂಪಿಯ ಆದೇಶವನ್ನು ಪಾಲನೆ ಮಾಡಬೇಕು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications