ಬೆಂಗಳೂರು, ಆಗಸ್ಟ್ 24: ಯೋಗಾ ಬಾರ್ ಕಂಪನಿಯ ಸಹ ಸಂಸ್ಥಾಪಕಿ, ಬೆಂಗಳೂರು ಮೂಲದ ಉದ್ಯಮಿ ಸುಹಾಸಿನಿ ಸಂಪತ್ ತಮ್ಮ ಹಣಕಾಸಿನ ಸ್ಥಿತಿ, ಹುಟ್ಟುಹಾಕಿದ ಕಂಪನಿಯ ಮಾರಾಟದ ಬಗ್ಗೆ ಇತ್ತೀಚೆಗೆ ಪಾಡ್ ಕಾಸ್ಟ್ ವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ಅನೇಕ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಇನ್ಫ್ಲ್ಯೂ ಯೆನ್ಸ ರ್, ಕಂಟೆಂಟ್ ಕ್ರಿಯೇಟರ್ ಶರಣ್ ಹೆಗ್ಡೆ ಅವರ The 1% Club Show ಮಾತನಾಡಿದ ಅವರು, ಬಹುಕೋಟಿ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ್ರೂ ತಾವಿನ್ನು ಬಾಡಿಗೆ ಮನೆಯಲ್ಲೇ ಇರುವುದ್ಯಾಕೆ ಎನ್ನುವ ಕುತೂಹಕಾರಿ ವಿಚಾರವನ್ನು ತಿಳಿಸಿದ್ದಾರೆ.

ಸುಹಾಸಿನಿ ಸಂಪತ್ ಅವರು ಯೋಗ ಬಾರ್‌ನ ಸಂಸ್ಥಾಪಕರಾಗಿದ್ದಾರೆ. ಯೋಗ ಬಾರ್ ಎನರ್ಜಿ ಬಾರ್‌ಗಳ ಬ್ರ್ಯಾಂಡ್ ಆಗಿದ್ದು, ಸಂಪತ್ ಮತ್ತು ಅವರ ಸಹೋದರಿ ಅನಿಂದಿತಾ ಸಂಪತ್ ಅವರು 2014 ರಲ್ಲಿ ಇದನ್ನು ಸ್ಥಾಪಿಸಿದರು. ಅವರು ಕಳೆದ ವರ್ಷ ತಮ್ಮ ಕಂಪನಿಯ ಶೇಕಡ 39 ರಷ್ಟು ಷೇರುಗಳನ್ನು ITC (ಇಂಪೀರಿಯಲ್ ಟೊಬ್ಯಾ ಕೊ ಕಂಪನಿ ಆಫ್ ಇಂಡಿಯಾ)ಗೆ ಮಾರಾಟ ಮಾಡಿದರು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ, ಎಫ್‌ಎಂಸಿಜಿ ಸಂಘಟಿತ ಸಂಸ್ಥೆಯು ಸ್ಟಾರ್ಟ್‌ಅಪ್‌ನ ಎಲ್ಲಾ ಷೇರುಗಳನ್ನು ಪಡೆದು 500 ಕೋಟಿ ಪಾವತಿಸಿ ಇದನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಲಿದೆ.
ಯೋಗಾ ಬಾರ್ ಎಂಬ ನ್ಯೂಟ್ರೀಷಿಯನ್ ಫುಡ್ ಕಂಪನಿಯಾಗಿದ್ದು, ಪ್ರೊಟೀನ್ ಬಾರ್ ಗಳು, ಮ್ಯೂಸ್ಲಿ ಬಾರ್ ಗಳು, ಪೀನಟ್ ಬಟರ್ ಮತ್ತು ಗ್ಲುಟನ್ ಮುಕ್ತ ಓಟ್ಸ್ ಬಾರ್ ಇತ್ಯಾದಿಗಳು ಬ್ರ್ಯಾಂಡ್ ನಡಿ ಮಾರುಕಟ್ಟೆಗೆ ಬಂದಿವೆ. ಇಂದಿಗೂ ಕೂಡ ಇದು ಮಾರುಕಟ್ತೆಯಲ್ಲಿ ಅತ್ಯಧಿಕ ಬೇಡಿಕೆ ಹೊಂದಿದೆ. ಆದರೆ ಸಂಪತ್ ಸಹೋದರಿಯರು ಯೋಗಾ ಬಾರ್ ಕಂಪನಿಯನ್ನ ಪೂರ್ತಿಯಾಗಿ ಇಂಪೀರಿಯಲ್ ಟೊಬ್ಯಾ ಕೊ ಕಂಪನಿ ಆಫ್ ಇಂಡಿಯಾಗೆ ಬಿಟ್ಟು ಕೊಡುತ್ತಿದ್ದಾರೆ.
ಸುಹಾಸಿನಿ ಸಂಪತ್ ಅವರು ಸ್ವಂತವಾಗಿ ಎರಡು ಮನೆಗಳನ್ನು ಹೊಂದಿದ್ದರೂ ತನ್ನ ಎರಡೂ ಮನೆಯಲ್ಲೂ ವಾಸವಾಗಿರದೇ ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಆಶ್ವರ್ಯ ವ್ಯಕ್ತಪಡಿಸಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆ ನಿರ್ವಹಣೆಯ ಬಗ್ಗೆ ಸಂಪತ್ ಅವರನ್ನು ಪ್ರಶ್ನಿಸಿದಾಗ, "ನಾನು ಚಾರ್ಟರ್ಡ್ ಅಕೌಂಟೆಂಟ್ ಓದಿರುವವಳು. ಹೀಗಾಗಿ ನೀವು ಎರಡು ಮನೆಗಳನ್ನು ಹೊಂದಿದ್ದರೆ, ಎರಡು ಮನೆಗಳವರೆಗೆ ಖರೀದಿಸುವ ಮೂಲಕ ನೀವು ಒಂದು ಸೆಟ್ ಬಂಡವಾಳ ಲಾಭವನ್ನು ಆನಂದಿಸಬಹುದು. ತೆರಿಗೆ ಉಳಿಸಲು ಎರಡು ಮನೆಗಳನ್ನು ಖರೀದಿಸಿದ್ದಾರೆಯೇ ಎಂಬ ಪ್ರಶ್ನೆಗೆ ತನಗೆ ಎರಡು ಕಡೆ ಆಸ್ತಿ ಇದೆ ಆದರೆ ಎರಡರಲ್ಲೂ ವಾಸಿಸುತ್ತಿಲ್ಲ. ನಾನು ಬಾಡಿಗೆ ಮನೆಯಲ್ಲಿ ಇರುತ್ತೇನೆ. ಎರಡೂ ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ.
ಬೆಂಗಳೂರು ಹೊರವಲಯ ಪ್ರದೇಶದಲ್ಲಿ ನಾನು ಆಸ್ತಿ ಖರೀದಿಸಿದ್ದು ಇಂದು ಇದರ ಮೌಲ್ಯ ನಾಲ್ಕು ಪಟ್ಟಿಗೂ ಹೆಚ್ಚಾಗಿದೆ. ಬಾಡಿಗೆಗೆ ವಾಸಿಸಲು ಆಯ್ಕೆ ಮಾಡುವಲ್ಲಿ ನಾನೊಬ್ಬಳೇ ಅಲ್ಲ. ಝೆರೋಧಾದ ಕೋಟ್ಯಾಧಿಪತಿ ನಿಖಿಲ್ ಕಾಮತ್ ಕೂಡ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ನಾನು ವ್ಯಯಿಸುವುದಕ್ಕಿಂತ ಹೆಚ್ಚಾಗಿ ಹೂಡಿಕೆಯ ಬಗ್ಗೆ ಆಸಕ್ತಿ ಉಳ್ಳವಳು ಎಂದಿರುವ ಅವರು ತೆರಿಗೆ ಉಳಿಸುವ ಉಪಾಯದ ಬಗ್ಗೆಯೂ ಮಾಡಿದ್ದಾರೆ. ಪ್ಲ್ಯಾಟ್ ಖರೀಸಬಹುದು ಆದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ನಾನು ನೋಡುವ ರೀತಿಯಂಥಿಲ್ಲ ಅಂದರೆ ಯುಡಿಎಸ್(ಭೂಮಿಯ ಅವಿಭಜಿತ ಪಾಲು) ಮೌಲ್ಯ ಕಡಿಮೆಯಾಗಿರುತ್ತದೆ ಎಂದಿದ್ದಾರೆ.
ಪಾಡ್ ಕಾಸ್ಟ್ ಯೂಟ್ಯೂಬ್ ಕಾಮೆಂಟ್‌ಗಳ ವಿಭಾಗದಲ್ಲಿ " ಅಗಾಧ ಸಂಪತ್ತು ಹೊಂದಿದ್ದರೂ ನೀವು ಇಷ್ಟು ಮೊತ್ತವನ್ನು ಇರುವಾಗ ಅದನ್ನು ಖರ್ಚು ಮಾಡದೇ ಹೂಡಿಕೆಯ ಬಗ್ಗೆ ಚಿಂತಿಸುತ್ತಿದ್ದರೆ, ಏನು ಪ್ರಯೋಜನ?" ಎಂದು ಟೀಕಿದ್ದಾನೆ. ಮತ್ತೋರ್ವ ವೀಕ್ಷಕ " ಸರಿ, ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಅವರು ಎರಡು ಮನೆಗಳ ಒಡತಿಯಾಗಿದ್ದಾರೆ. ಅವರ ಬಳಿ ಹಣವಿರುವುದರಿಂದ ಭವಿಷ್ಯದಲ್ಲಿ ಯಾವಾಗ ಬೇಕಾದರೂ ಮನೆ ಖರೀದಿಸಬಹುದು. ಆದರೆ ಭವಿಷ್ಯದಲ್ಲಿ ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ ಯಾವುದೇ ಮಧ್ಯಮ ವರ್ಗದ ವ್ಯಕ್ತಿ ಮನೆ ಖರೀದಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಬಾಂಬೆ ಶೇವಿಂಗ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ಶಾಂತನು ದೇಶಪಾಂಡೆ ಕೂಡ ಗುರ್ಗಾಂವ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ₹ 1.5 ಲಕ್ಷ ಬಾಡಿಗೆ ಪಾವತಿಸುತ್ತೇನೆ. ನಾನು ಆ ಅಪಾರ್ಟ್‌ಮೆಂಟ್ ಅನ್ನು ಖರೀದಿಸಬೇಕಾದರೆ ಮತ್ತು ನಾನು ಅದರ ಲಾಭವನ್ನು ಪಡೆಯಬೇಕಾದರೆ, ಅದರ ಶೇಕಡಾ 70 ರಷ್ಟು, ₹ 6 ಕೋಟಿ ಸಾಲ ಮಾಡಿ ತಿಂಗಳಿಗೆ ₹ 6-7 ಲಕ್ಷ ಇಎಂಐ ಪಾವತಿ ಮಾಡಬೇಕಾಗುತ್ತದೆ. ಇದು ನನ್ನ ಬಾಡಿಗೆ ವೆಚ್ಚದ ನಾಲ್ಕು ಪಟ್ಟು ಹೆಚ್ಚು. ಹಾಗಾಗಿ, EMI ವೆಚ್ಚದ ನಾಲ್ಕನೇ ಒಂದು ಭಾಗದಷ್ಟು ಇರುವ ಮನೆಯಲ್ಲಿ ನಾನು ವಾಸಿಸುತ್ತಿದ್ದೇನೆ. ಹಾಗಾಗಿ ಖರೀದಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದರು.


Click it and Unblock the Notifications