ಬೆಂಗಳೂರಿನಲ್ಲಿ ಮತ್ತೆ ಚಳಿ ಮುಂದುವರೆಯಲಿದೆ. ಹಾಗೆ ಕರ್ನಾಟಕದ ಹಲವು ಭಾಗಗಳಲ್ಲೂ ತಾಪಮಾನ ಕುಸಿದಿದ್ದು, ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ತಾಪಮಾನ 10 ಡಿಗ್ರಿ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 °C ಇಳಿಯಲಿದೆ. ಹೀಗಾಗಿ ಮುಂಜಾನೆ ಮಂಜು ಕವಿದ ವಾತವಾರಣ ಇರಲಿದೆ ಹಾಗೆ ಸಂಜೆ ಕೂಡ ಚಳಿ ಪ್ರಮಾಣ ಹೆಚ್ಚಾಗಲಿದೆ. ಹಾಗೆ ಗತಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಜನವರಿ ಅಂತ್ಯದ ವೇಳೆಗೆ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.

ತಿಂಗಳ ಕೊನೆಯಲ್ಲಿ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಮದು ಊಹಿಸಲಾಗಿದೆ. ಅಲ್ಲದೆ ಕರ್ನಾಟಕದ ಇತರೆ ಭಾಗಗಳಲ್ಲೂ ಕೂಡ ತಾಪಮಾನ ಕುಸಿಯುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ ಸೇರಿದಂತೆ ದಕ್ಷಿಣ ವಲಯದಲ್ಲಿ ಚಳಿ ಹೆಚ್ಚಿರಲಿದೆ. ಹಾಗೆ ತಾಪಮಾನ 2 ರಿಂದ 4ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನ ನೀಡಿದೆ.
ಬೆಂಗಳೂರು ಗಾಳಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಇಂದು AQI ಮಟ್ಟವು 152.0 ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆ ನಾಳೆ ಕೂಡ ಅತೀ ಹೆಚ್ಚು ಚಳಿ ದಾಖಲಾಗುವ ನಿರೀಕ್ಷೆ ಇದೆ. ಬೆಂಗಳೂರು ಕನಿಷ್ಠ ತಾಪಮಾನ 15.84 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 27.72 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಊಹಿಸಿದೆ. ತೇವದ ಮಟ್ಟವು ಸುಮಾರು 41% ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಅದರ ಆಧಾರದ ಮೇಲೆ ನಿಮ್ಮ ದಿನವನ್ನು ಯೋಜಿಸುವುದು ಉತ್ತಮ. ಹವಾಮಾನ ವರದಿ ಪ್ರಕಾರ ಮುಂಬರುವ ದಿನಗಳಲ್ಲಿ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು, ತೇವದ ಗುಣಮಟ್ಟ, ತಿಳಿ ಆಕಾಶ ಬಿಸಿಲನ್ನು ನಾವು ಕಾಣಬಹುದು.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇಂದು ತಿಳಿ ಆಕಾಶ ಇರಲಿದೆ. ಬೇರೆ ದಿನಗಳಿಗೆ ಹೋಲಿಸಿದರೆ ಇಂದು ಸ್ವಲ್ಪ ಬೆಚ್ಚಗಿನ ವಾತವರಣ ಇರಲಿದೆ. ಇಂದು ಬೆಂಗಳೂರು AQI ಗುಣಮಟ್ಟ 152.0 ಇದೆ. ಇದು ಗಾಳಿಯ ಗುಣಮಟ್ಟವನ್ನ ಸೂಚಿಸುತ್ತದೆ. ಸಿಲಿಕಾನ್ ಸಿಟಿಯಲ್ಲಿ ಗಾಳಿ ಗುಣಮಟ್ಟಮಧ್ಯಮ ಗುಣಮಟ್ಟದಲ್ಲಿರಲಿದೆ. ಇನ್ನು ಉರಿರಾಟ ತೊಂದರೆಗಳನ್ನ ಹೊಂದಿರುವವರು ಆರೋಗ್ಯ ಸಮಸ್ಯೆ ಇರುವವರು ಹೊರಾಂಗಣ ಚಟುವಟಿಕೆಗಳನ್ನ ಕಡಿಮೆ ಮಾಡಬೇಕು. AQI ಕುರಿತು ಮಾಹಿತಿಯನ್ನ ಅರಿತವರು ತಮ್ಮ ದಿನವನ್ನ ಸರಿಯಾಗಿ ಯೋಜಿಸಲು ಸಹಾಯವಾಗುತ್ತದೆ.
ದೇಶದಲ್ಲಿ ವಾತವರಣ ಹೇಗಿರಲಿದೆ ತಿಳಿಯಿರಿ
ದೇಶದ ಹಲವು ಭಾಗಗಳಲ್ಲಿ ಚಳಿ ಜನರನ್ನ ಕಾಡಲಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಇನ್ನು ಎರಡು ವಾರಗಳ ಕಾಲ 16 ರಾಜ್ಯಗಳಲ್ಲಿ ತಾಪಮಾನ ಇಳಿಕೆಯಾಗಲಿದೆ. ದಟ್ಟವಾದ ಮಂಜು ಆವರಿಸಲಿದೆ ಎಮದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಕೆಲವೆಡೆ ಲಘು ಮಳೆಯಾಗುವ ನಿರೀಕ್ಷೆ ಇದೆ.
ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಚಳಿ ಪ್ರಮಾಣ ಏರಿಕೆಯಾಗಿದೆ. ಜನರು ಬಿಸಿಲಿಹಾಗಿ ಎದುರು ನೋಡುತ್ತಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೂರು ದಿನ ಮಂಜು ಕವಿದ ವಾತವಾರನ ಇರಲಿದೆ. ಹಾಗೆ ನೋಯ್ಡಾ, ಗಾಜಿಯಾಬಾದ್ ಜೊತೆಗೆ ಪಶ್ಚಿಮ ಉತ್ತರಪ್ರದೇಶದಲ್ಲಿ ಮಳೆಯಾಗಿವ ಮುನ್ಸೂಚನೆ ಇದೆ.
ದೇಶದಲ್ಲಿ ಮತ್ತೆ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಬಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಹಿಮಾಚಲ ಹಾಗು ಕಾಶ್ಮೀರದಲ್ಲಿ ಹಿಮಪಾತ ಹಾಗು ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿನ ವಾತವರಣವನ್ನ ನೋಡುತ್ತಿದದ್ರೆ ಚಳಿ ಪ್ರಮಾಣ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಈಗಾಗಲೇ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ನಡುಕ ಹೆಚ್ಚಾಗಿದೆ. ಇನ್ನು ಹಲವು ದಿನಗಳ ವರೆಗೆ ದೇಶದಲ್ಲಿ ಚಳಿ ಆವರಿಸಲಿದೆ.


Click it and Unblock the Notifications