ಇಂದು ಕೂಡ ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಕೆಲವು ದಿನಗಳಿಂದ ಭಾರಿ ದುಭಾರಿ ಆಗಿದ್ದ ಚಿನ್ನದ ಬೆಲೆ ನಿನ್ನೆ ಇಳಿಕೆಯಾಗಿತ್ತು. ಆದ್ರೆ ಇಂದು ಕೂಡ ದರದಲ್ಲಿ ಯಾವುದೇ ವ್ಯತ್ಯಾಸವಾಗದೆ ಮತ್ತೆ ಇಳಿಕೆಯಾಗಿದೆ. ಇದರಿಂದಾಗಿ ಬಹುದಿನಗಳಿಂದ ಬಂಗಾರ ಖರೀದಿಗಾಗಿ ಕಾಯುತ್ತಿದ್ದ ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಮುಖ್ಯವಾಗಿ ಈ ವಾರ ಹೂಡಿಕೆದಾರರು ಸಾಕಷ್ಟು ಲಾಭವನ್ನ ಕೂಡ ಗಳಿಸಿದ್ದರು. ಆದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಇಳಿಕೆಯಾದ್ದರಿಂದ ಹೂಡಿಕಕೆದಾರರಿಗೆ ಮತ್ತೆ ನಿರಾಸೆಯಾಗಿದೆ.
ನವೆಂಬರ್ 26 ಬೆಂಗಳೂರಿನಲ್ಲಿ 24-ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,310 ರೂಪಾಯಿಗಳಷ್ಟು ಇಳಿಕೆಯಾಗಿ 77,240 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ 22ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1200 ರೂ ಇಳಿಕೆಯಾಗಿ, ಈಗ 70,800 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 980 ರೂ. ಇಳಿಕೆಯಾಗಿ 57,930 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ದೊಡ್ಡಮಟ್ಟದಲ್ಲಿ ಕುಸಿತವನ್ನ ಕಂಡಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,100 ರೂಪಾಯಿಗಳಷ್ಟು ಇಳಿಕೆಯಾಗಿ ರೂ. 7,72,400 ರೂ. ಆಗಿದೆ. 22-ಕ್ಯಾರೆಟ್ ಚಿನ್ನ 12,000 ರೂ ಇಳಿಕೆಯಾಗಿ 7,08,000 ರೂಪಾಯಿ ಆಗಿದೆ.
ಸ್ಥಳೀಯ ಚಿನ್ನದ ದರಗಳು ಹೆಚ್ಚುತ್ತಿರುವ ಹಿನ್ನೆಲೆ ಖರೀದಿದಾರರಿಂದ ಬೇಡಿಕೆಯು ಕೂಡ ಕಡಿಮೆಯಾಯಿತು. ಇದರಿಂದಾಗಿ ಕಳೆದ ವಾರ, ಭಾರತದಲ್ಲಿ ಚಿನ್ನದ ಪ್ರೀಮಿಯಂಗಳು ಕುಸಿದಿವೆ. ಚಿನ್ನದ ಬೆಲೆ ಹೆಚ್ಚಾಗುತ್ತಿದ್ದಂತೆ,ಖರೀದಿಸುವ ಜನರು ಕೂಡ ಕಡಿಮೆಯಾದರು, ಇದರಿಂದಾಗಿ ಸ್ಥಳೀಯವಾಗಿ ಮತ್ತು ಏಷ್ಯಾದ ಮಾರುಕಟ್ಟೆಗಳಾದ್ಯಂತ ಚಿನ್ನದ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಭಾರತದಲ್ಲೂ ಕೂಡ ಚಿನ್ನದ ಬೆಲೆ ಇಳಿಕೆಯಾಗಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24ಕ್ಯಾರೆಟ್ | 22ಕ್ಯಾರೆಟ್ |
| ದೆಹಲಿ | 77,390 | 70,950 |
| ಮುಂಬೈ | 77,240 | 70,800 |
| ಬೆಂಗಳೂರು | 77,240 | 70,800 |
| ಕೋಲ್ಕತ್ತಾ | 77,240 | 70,800 |
ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ನಿವಾರಿಸಲು ಬೆಂಗಳೂರು ಟೆಕ್ಕಿಗಳಿಂದ ನೂತನ ಆ್ಯಪ್
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗಿದೆ. ಅಲ್ಲದೆ ಸತತ ಮೂರು ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆ ರೂ.2,000 ಇಳಿಕೆಯಾಗಿ 89,500 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 200 ಇಳಿಕೆಯಾಗಿ 8,950. ರೂಪಾಯಿ ಆಗಿದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಚಿನ್ನದ ಭವಿಷ್ಯವು ಶೇಕಡಾ 0.17ರಷ್ಟು . ಪ್ರಸ್ತುತ 10 ಗ್ರಾಂ MCX ಚಿನ್ನಕ್ಕೆ 75,182 ರೂಪಾಯಿ ಆಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ಹಸಿರು ಬಣ್ಣದಲ್ಲಿದ್ದು, 0.30% ರಷ್ಟು ಹೆಚ್ಚಾಗಿದ್ದು, ಸದ್ಯಕ್ಕೆ 87,961 ರೂಪಾಯಿ ಆಗಿದೆ.
ಭಾರತೀಯ ಬುಲಿಯನ್ ಮಾರುಕಟ್ಟೆ ಭಾರೀ ಕುಸಿತವನ್ನು ಎದುರಿಸುತ್ತಿದೆ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಕೋವಿಡ್ ನಂತರ ಕಳೆದ ವಾರ ಚಿನ್ನ ಮತ್ತೆ ಗಣನೀಯವಾಗಿ ಏರಿಕೆಯಾಗಿತ್ತು. ಇನ್ನು ಇಂದು, ರಾಯಿಟರ್ಸ್ ವರದಿಯ ಪ್ರಕಾರ, ದೇಶೀಯವಾಗಿ ಮತ್ತು ಇತರ ಏಷ್ಯಾದ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾದ್ದರಿಂದ ಬೆಲೆಗಳುಗಳು ಕೂಡ ಗಮನಾರ್ಹವಾಗಿ ಕುಸಿತಕಂಡಿದೆ ಎನ್ನಲಾಗ್ತಿದೆ.
ಈ ಹಿಂದೆ ಚಿನ್ನದ ಬೆಲೆಗಳಲ್ಲಿ ಏರಿಳಿತವನ್ನ ನಾವು ಗಮನಿಸಿದರೆ ಅವೆಲ್ಲವೂ ಹೆಚ್ಚಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಆಗಿವೆ. ಅಲ್ಲದೆ ಇದು ಹೂಡಿಕೆದಾರರ ಗಮನವನ್ನು ಚಿನ್ನದ ಮಾರುಕಟ್ಟೆಯ ಮೆಲೆ ಸೆಳೆಯುವಂತೆ ಮಾಡಿದೆ. ಯುಎಸ್‌ನ ಬಲವರ್ಧನೆಯಿಂದಾಗಿ ಚಿನ್ನದ ಬೆಲೆಗಳು ಕೂಡ ಇಳಿಮುಖವಾಗುವಂತಾಗಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ರಾಯಿಟರ್ಸ್, ತನ್ನ ಇತ್ತೀಚಿನ ವರದಿಲ್ಲಿ ತಿಳಿಸಿರುವ ಪ್ರಕಾರ ಸ್ಪಾಟ್ ಚಿನ್ನವು 02:59 GMT ಯ ಹೊತ್ತಿಗೆ ಪ್ರತಿ ಔನ್ಸ್‌ಗೆ 2,625.48 ಡಾಲರ್ ಇದ್ದು ದರ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. US ಚಿನ್ನದ ಭವಿಷ್ಯವು 0.3% ಗಳಿಸಿ ಪ್ರತಿ ಔನ್ಸ್‌ಗೆ 2,625.80 ಡಾಲರ್ ತಲುಪಿದೆ. ಸ್ಪಾಟ್ ಬೆಳ್ಳಿ ಕೂಡ 1.1% ಏರಿಕಯಾಗಿ ಪ್ರತಿ ಔನ್ಸ್‌ಗೆ $ 30.53 ಆಗಿದೆ. ಕಳೆದ ವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಮತ್ತೆ ಕುಸಿತ ಕಂಡಿದೆ . ಮಂಗಳವಾರ ಚಿನ್ನದ ಬೆಲೆಯಲ್ಲಿ ಸ್ಥಿರವಾಗಿದ್ದು, ಹಿಂದಿನ ವಹಿವಾಟಿಗೆ ಹೋಲಿಕೆ ಮಾಡಿದ್ರೆ 3% ನಷ್ಟು ಕುಸಿತವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


Click it and Unblock the Notifications