ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ (Middle East War) ಇದೀಗ, ಭಾರತದ ಮೇಲೂ ಭಾರೀ ಬೀರುತ್ತಿದೆ. ಅತ್ತ ಕಚ್ಚಾ ತೈಲ, ಇಂಧನ ಬೆಲೆ ಭಾರೀ ಏರಿಕೆ ಕಂಡಿದ್ದು, ಇದೀಗ ಬಂಗಾರದ ಬೆಲೆಯೂ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ (Bengaluru Gold Rate) ಹೆಚ್ಚಳವಾಗಿದ್ದು, ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ಇಂದು ₹16,238 ರೂ. ಆಗಿದ್ದು, ನಿನ್ನೆ 16,168 ರೂ. ಇತ್ತು. ನಿನ್ನೆಗಿಂತ ಇಂದು ₹70 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹1,29,904 ರೂ. ಆಗಿದ್ದು, ನಿನ್ನೆ ₹1,29,344 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹560 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,62,380 ರೂ. ಆಗಿದ್ದು, ನಿನ್ನೆ ₹1,61,680 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹700 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 16,23,800 ರೂ. ಆಗಿದ್ದು, ನಿನ್ನೆ 16,16,800 ರೂ. ಇತ್ತು. ಒಂದೇ ದಿನದಲ್ಲಿ 7,000 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,885 ರೂ. ಆಗಿದ್ದು, ನಿನ್ನೆ ₹14,820 ರೂ. ಇತ್ತು. ನಿನ್ನೆಗಿಂತ ಇಂದು ₹65 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,19,080 ರೂ. ಆಗಿದ್ದು, ನಿನ್ನೆ ₹1,18,560 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹520 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,850 ರೂ. ಆಗಿದ್ದು, ನಿನ್ನೆ ₹1,48,200 ರೂ. ಇತ್ತು. ಒಂದೇ ದಿನದಲ್ಲಿ ₹650 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,88,500 ರೂ. ಆಗಿದ್ದು, ನಿನ್ನೆ ₹14,82,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 6,500 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹12,179 ರೂ. ಆಗಿದ್ದು, ನಿನ್ನೆ ₹12,126 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹53 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು ₹97,432 ರೂ. ಆಗಿದ್ದು, ನಿನ್ನೆ ₹97,008 ಇತ್ತು. ನಿನ್ನೆಗಿಂತ ಇಂದು ₹424 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,21,790 ರೂ. ಆಗಿದ್ದು, ನಿನ್ನೆ 1,21,260 ರೂ. ಇತ್ತು. ಒಂದೇ ದಿನ ₹530 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ₹12,17,900 ರೂ. ಆಗಿದ್ದು, ನಿನ್ನೆ ₹12,12,600 ರೂ. ಇತ್ತು. ದಿಢೀರ್ 5,300 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ಭಾರೀ ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ₹290 ರೂ. ಆಗಿದ್ದು, ನಿನ್ನೆ ₹280 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹10 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಬೆಳ್ಳಿ ದರ ₹2,320 ರೂ. ಆಗಿದ್ದು, ನಿನ್ನೆ ₹2,240 ರೂ. ಇತ್ತು. ಒಟ್ಟು ₹80 ರೂ. ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ., 1000 ಗ್ರಾಂ ಬೆಳ್ಳಿ ದರ ₹2,90,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 10ರ ರಾಯಿಟರ್ಸ್ ವರದಿ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಯುದ್ಧ ಶೀಘ್ರದಲ್ಲೇ ಅಂತ್ಯದ ಸೂಚನೆ ನೀಡಿದ ಬೆನ್ನಲ್ಲೇ, ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ.
GMT 0429 ರ ವೇಳೆಗೆ ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ 0.5% ಏರಿಕೆಯಾಗಿ $5,161.54 ಕ್ಕೆ ತಲುಪಿದೆ.


Click it and Unblock the Notifications