ಬೆಂಗಳೂರು ನಗರವು ಸಾಂಕ್ರಾಮಿಕದ ನೆರಳಿನಿಂದ ನಿಧಾನವಾಗಿ ಹೊರಬರುತ್ತಿದ್ದು, ಇದರ ಬೆನ್ನಲ್ಲೇ, ಕಾರ್ಪೊರೇಟ್ ವಲಯದಲ್ಲೂ ಮಹತ್ವದ ಬದಲಾವಣೆಯು ನಡೆಯುತ್ತಿದೆ. ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್ ನಿಂದ ಕಚೇರಿಗೆ ಮರಳಿ ಕರೆಸಿಕೊಳ್ಳುತ್ತಿದೆ. ಈ ಕಾರಣದಿಂದ ಇದೀಗ ಬೆಂಗಳೂರಿನಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯೂ ಏರಿಕೆ ಕಂಡಿದೆ.
ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ ವಂದ್ಯಾ ಶೆಟ್ಟಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "COVID 19 ಸಾಂಕ್ರಾಮಿಕ ರೋಗದಿಂದ ನಾವು ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಆರಂಭದಿಂದ, ವಾರಕ್ಕೆ ಎರಡು ಬಾರಿ ಕಚೇರಿಗೆ ಹೋಗುವಂತೆ ನಮ್ಮನ್ನು ಕೇಳಲಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಟ್ರೆಂಡ್ ವಂದ್ಯಾ ಅವರ ಕಂಪನಿಗೆ ಮಾತ್ರ ಅಲ್ಲ. ಬೆಂಗಳೂರಿನಾದ್ಯಂತ ಹಲವಾರು ಸಂಸ್ಥೆಗಳು ಹೈಬ್ರಿಡ್ ಕೆಲಸದ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ, ಉದ್ಯೋಗಿಗಳು ತಮ್ಮ ಕೆಲಸದ ವಾರದ ಒಂದು ಭಾಗವನ್ನು ಕಚೇರಿಯಲ್ಲಿ ಕಳೆಯಬೇಕು ಎಂಬುವುದನ್ನು ಕಡ್ಡಾಯ ಮಾಡುತ್ತಿವೆ. ಹೀಗಾಗಿ ವಾಣಿಜ್ಯ ಸಂಸ್ಥೆಗಳಿಗಾಗಿ ನಿರ್ಮಿಸಿದ ಕಚೇರಿ ಕಟ್ಟಡಗಳ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೇತರಿಕೆ ಕಂಡುಬಂದಿದ್ದು, ಆಫೀಸ್ ಸ್ಪೇಸ್ ಗಾಗಿ ಬೇಡಿಕೆ ಹೆಚ್ಚಿದೆ.
ಕೋವಿಡ್ ಅಲೆ ಜಗತ್ತಿನಾದ್ಯಂತ ಕಂಪನಿಗಳ ಕೆಲಸದ ಪಥವನ್ನೇ ಬದಲಾಯಿಸಿ ಬಿಟ್ಟಿತ್ತು. ಆದರೆ ಇದೀಗ ಮನೆಯಲ್ಲಿ ಕುಳಿತು ಕಚೇರಿ ಕೆಲಸ ಮಾಡುವ ಸಂಸ್ಕೃತಿಯೂ ಬದಲಾಗಿ ಉದ್ಯೋಗಿಗಳು ಕಚೇರಿಗಳತ್ತ ಹೆಜ್ಜೆ ಹಾಕತೊಡಗಿದ್ದಾರೆ. ಈ ಬದಲಾವಣೆಯು ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ, ವಿಶೇಷವಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನೇರ ಪರಿಣಾಮ ಬೀರಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಈ ಎರಡು ನಗರಗಳು 2024 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅರ್ಧದಷ್ಟು ಗುತ್ತಿಗೆ ಚಟುವಟಿಕೆಯನ್ನು ಹೊಂದಿವೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಗ್ರೇಡ್ A ಕಚೇರಿ ಸ್ಥಳಾವಕಾಶದ ಬೇಡಿಕೆಯು 46.7 ಮಿಲಿಯನ್ ಚದರ ಅಡಿಗಳನ್ನು ತಲುಪಿದೆ. ಈ ಅಂಕಿ-ಅಂಶವು ಪೂರ್ವ-ಸಾಂಕ್ರಾಮಿಕ ಮಟ್ಟಗಳಿಗೆ ಹೋಲಿಸಿದರೆ ಗಣನೀಯ ಹೆಚ್ಚಳವನ್ನು ತೋರಿಸುತ್ತದೆ ಇದು ಕಂಪನಿಗಳಲ್ಲಿ ಕಚೇರಿ ಸ್ಥಳಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಸೂಚಿಸುತ್ತದೆ.
ಮೊದಲನೆಯದಾಗಿ, ಸಹದ್ಯೋಗ, ಹೊಸತನ ಮತ್ತು ಬಲವಾದ ಕಚೇರಿ ಸಂಸ್ಕೃತಿಯನ್ನು ಬೆಳೆಸಲು ಮುಖಾಮುಖಿ ಸಂವಹನಗಳು ಅತ್ಯಗತ್ಯ ಎಂದು ಅನೇಕ ಕಂಪನಿಗಳು ಭಾವನೆಯಾಗಿದೆ. ಹೆಚ್ಚುವರಿಯಾಗಿ, ದೂರದಲ್ಲಿ ಕೆಲಸ್ ಮಾಡುವಾಗ ಅನೇಕ ಸಂಬಂಧಿಸಿದ ಸವಾಲುಗಳು, ಗೊಂದಲಗಳು ಮತ್ತು ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಹೆಚ್ಚಿನ ಸಂಸ್ಥೆಗಳು, ವರ್ಕ್ ಫ್ರಮ್ ಹೋಮ್ ನೀತಿಗಳನ್ನು ಮತ್ತೊಮ್ಮೆ ಒರೆಗೆ ಹಚ್ಚುವಂತೆ ಮಾಡಿದೆ.
ಇನ್ನೊಂದೆಡೆ ಕಚೇರಿ ಸ್ಥಳಾವಕಾಶದ ಹೆಚ್ಚುತ್ತಿರುವ ಬೇಡಿಕೆಯು ಸ್ಥಳೀಯ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ ಬೀರಿದೆ. ಇದು ನಿರ್ಮಾಣ, ಆಸ್ತಿ ನಿರ್ವಹಣೆ ಮತ್ತು ಸಂಬಂಧಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದೆ. ಇದಲ್ಲದೆ, ಬೆಂಗಳೂರಿಗೆ ಕಛೇರಿ ನೌಕರರ ಒಳಹರಿವು ನಗರದ ಚಿಲ್ಲರೆ ವ್ಯಾಪಾರ ಮತ್ತು ಆತಿಥ್ಯ ಉದ್ಯಮಗಳನ್ನು ಉತ್ತೇಜಿಸಿದೆ.
ಬೆಂಗಳೂರು ಸಾಂಕ್ರಾಮಿಕದ ನಂತರದ ಜಗತ್ತಿಗೆ ಹೊಂದಿಕೊಳ್ಳುವುದನ್ನು ಮುಂದುವರೆಸುತ್ತಿರುವುದರಿಂದ, ಕಚೇರಿ ಸ್ಥಳಾವಕಾಶದ ಬೇಡಿಕೆಯು ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ.
ಉನ್ನತ ಪ್ರತಿಭೆಗಳನ್ನು ಕಂಪನಿಗಳು ತಮ್ಮತ್ತ ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಕಂಪನಿಗಳು ಆಧುನಿಕ, ಸುಸಜ್ಜಿತ ಕಚೇರಿ ಸ್ಥಳಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆಯಿದೆ. ಈ ಪ್ರವೃತ್ತಿಯು ನಗರದ ಸ್ಕೈಲೈನ್ ಅನ್ನು ರೂಪಿಸುವುದಲ್ಲದೆ ಅದರ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications