ಬೆಂಗಳೂರನ್ನು ಟ್ರಾಫಿಕ್ ಮುಕ್ತಗೊಳಿಸಲು ಹಲವಾರು ಯೋಜನೆಗಳು ತಲೆ ಎತ್ತುತ್ತಿವೆ. ಅದರಂತೆ ಹಬ್ಬಾಳದಲ್ಲಿ 6 ಪಥಗಳ ಕಿರು ರಸ್ತೆ ನಿರ್ಮಾಣಕ್ಕಾಗಿ, ಕೆಲಸ ನಡೆಯುತ್ತಿದ್ದು ಮತ್ತಷ್ಟು ಚುರುಕಾಗಿದೆ. ಅಲ್ಲದೇ ಟೆಂಡರ್ ಪ್ರಕ್ರಿಯೆ ಕೂಡ ಜೋರಾಗಿದೆ. ಈ ಯೋಜನೆಯನ್ನ ಬೆಂಗಳೂರು ಅಭಿವೃದ್ಧಿ (ಬಿಡಿಎ) ಮುಂದಾಳತ್ವದಲ್ಲಿ ನಡೀತಿದೆ. ಇನ್ನು ಈ ಯೋಜನೆಗಾಗಿ ಸುಮಾರು 1,086 ಕೋಟಿ ರೂ. ವೆಚ್ಚ ಬೇಕು ಎಂದು ಅಂದಾಜಿಸಲಾಗಿದೆ.

ಅಂದಹಾಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಸದ್ಯ ನಾಲ್ಕು ಪ್ರಮುಖ ಕಂಪನಿಗಳು ಬಿಡ್ಡಿಂಗ್ ಸಲ್ಲಿಸಿವೆ. ಅವುಗಳಲ್ಲಿ ಅವುಗಳಲ್ಲಿ ದಿಲೀಪ್ ಬಿಲ್ಡ್ಕಾನ್ ಲಿಮಿಟೆಡ್, ಮಾಕ್ಸ್ ಇನ್ನಾ (ಇಂಡಿಯಾ) ಲಿಮಿಟೆಡ್, ಸಿಮಿಂಡಿಯಾ ಪ್ರಾಜೆಕ್ಟ್ ಮತ್ತು ರಿಥಿಕ್ ಪ್ರಾಜೆಕ್ಟ್ಸ್ ಸೇರಿವೆ ಎಂದು ಮೂಲಗಳಿಂದ ತಿಳಿದುಬಂದ ಮಾಹಿತಿಯಾಗಿದೆ. ಮೊದಲು ತಾಂತ್ರಿಕ ಅರ್ಹತೆಯನ್ನು ಪರಿಶೀಲಿಸಿದ ನಂತರ, ಹಣಕಾಸು ಬಿಡ್ ತೆರೆಯಲಾಗುತ್ತೆ. ಎಲ್ಲವೂ ಸರಿಯಾಗಿದ್ರೆ ನಂತರ ಒಪ್ಪಂದ ನೀಡಲಾಗುತ್ತೆ.
ಸುರಂಗ ಮಾರ್ಗದ ವಿಶೇಷತೆ:
ಇನ್ನು ಈ ಸುರಂಗ ರಸ್ತೆಯು ಸುಮಾರು 2.18 ಕಿಲೋಮೀಟರ್ ಉದ್ದವಿರುತ್ತದೆ. ಇದು ಎಸ್ಟೀಮ್ ಮಾಲ್ ಭಾಗದಿಂದ ಆರಂಭವಾಗಿ, ಬ್ಯಾಪಿ ಆಸ್ಪತ್ರೆಯ ಭಾಗದವರೆಗೂ ಸಂಪರ್ಕ ಕಲ್ಪಿಸಲಿದ್ದು ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯಕರವಾಗಲಿದೆ. ಈ ಕೆಲಸವನ್ನ 'ಕಟ್ ಅಂಡ್ ಕವರ್' ವಿಧಾನದಲ್ಲಿ ಮಾಡಲಾಗುತ್ತದೆ. ಅಂದರೆ, ದೊಡ್ಡ ಸುರಂಗ ತೋಡುವ ಯಂತ್ರಗಳನ್ನು ಬಳಸುವುದಿಲ್ಲ.
ಹೆಬ್ಬಾಳ ಮೇಲ್ಸೇತುವೆಯ ಕೆಳಭಾಗ ಮತ್ತು ಸರೋವರದ ಅಂಚಿನ ಬಳಿ ಈ ಸುರಂಗ ಹಾದುಹೋಗುತ್ತದೆ. ಇದೇ ಪ್ರದೇಶದಲ್ಲಿ ಭೂಗತ ಮೆಟ್ರೋ ಮಾರ್ಗ, ಉಪನಗರ ರೈಲು ಯೋಜನೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಪ್ರಸ್ತಾಪಿತ 17 ಕಿಮೀ ಸುರಂಗ ರಸ್ತೆ ಸೇರಿದಂತೆ ಹಲವು ಯೋಜನೆಗಳು ಈಗಾಗಲೇ ಚರ್ಚೆಯಲ್ಲಿವೆ. ಹೀಗಾಗಿ ಈ ಭಾಗದಲ್ಲಿ ಹಲವು ಸಂಸ್ಥೆಗಳು ಒಂದೇ ಸಮಯದಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ.
ಬಿಡಿಎ ಈ ಕಿರು ಸುರಂಗವನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಆದರೆ ಕೆಲವು ತಜ್ಞರು ಇದರ ಅಗತ್ಯತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸ್ವತಂತ್ರ ಚಲನಶೀಲ ತಜ್ಞ ಸತ್ಯ ಅರಿಕುತರಂ ಅವರ ಮಾತಿನಲ್ಲಿ, ಈ ಯೋಜನೆ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ದೊಡ್ಡ ಮಟ್ಟದ ಪ್ರಯೋಜನ ನೀಡುವುದಿಲ್ಲ. ದೀರ್ಘಕಾಲೀನ ಪರಿಹಾರ ಬೇಕಾದರೆ ಸಮಗ್ರ ಸಾರಿಗೆ ಯೋಜನೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ದೊಡ್ಡ ಸುರಂಗ ರಸ್ತೆ ಪೂರ್ಣಗೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಹೇಳಿ ಈ ಸಣ್ಣ ಯೋಜನೆಯನ್ನು ತ್ವರಿತ ಪರಿಹಾರವಾಗಿ ಮುಂದಿಟ್ಟಿದೆ. ಆದರೆ ಅದರ ವೆಚ್ಚ ಮತ್ತು ಅವಧಿ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿದೆ. ಹಣಕಾಸು ಇಲಾಖೆಯೂ ಈ ಯೋಜನೆಯ ಅಗತ್ಯತೆ ಕುರಿತು ಪ್ರಶ್ನೆ ಕೇಳಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಗಂಭೀರವಾಗಿದೆ ಎಂಬುದು ಸತ್ಯ. ಆದರೆ ಈ ಕಿರು ಸುರಂಗ ರಸ್ತೆ ನಿಜವಾಗಿಯೂ ಸಮಸ್ಯೆಗೆ ಪರಿಹಾರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಕಾಲವೇ ನೀಡಬೇಕು. ನಗರಾಭಿವೃದ್ಧಿ ಯೋಜನೆಗಳು ಜನರಿಗೆ ಸುಲಭ ಸಂಚಾರ ಒದಗಿಸಬೇಕಾದರೆ ಸ್ಪಷ್ಟ ಯೋಜನೆ ಮತ್ತು ದೀರ್ಘಕಾಲದ ದೃಷ್ಟಿಕೋನ ಅಗತ್ಯವಾಗಿದೆ.


Click it and Unblock the Notifications