ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(kempegowda international airport)ವು 2024-25ನೇ ಆರ್ಥಿಕ ವರ್ಷದಲ್ಲಿ ಎರಡು ಮಹತ್ವದ ಮೈಲಿಗಲ್ಲುನ್ನು ಸೃಷ್ಟಿಸಿ ದಾಖಲೆಯನ್ನು ಸೃಷ್ಟಿ ಮಾಡಿದೆ.
ಹೌದು,ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು 41 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರೆ ಮತ್ತು 5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ನಡೆದಿದೆ. ಇದರ ಮೂಲಕ ಬೆಂಗಳೂರು ಏರ್ಪೋರ್ಟ್ ದಾಖಲೆಯ ಮೆಟ್ಟಿಲ್ಲನ್ನು ಹೇರಿದೆ.ಎಂದು ಎಂದು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದೆ.

ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದ ಬೆಂಗಳೂರು ಏರ್ಪೋರ್ಟ್
ಕಳೆದ ಹಣಕಾಸು ವರ್ಷದಲ್ಲಿ ವಿಮಾನ ನಿಲ್ದಾಣವು 37.53 ಮಿಲಿಯನ್ ಪ್ರಯಾಣಿಕರನ್ನು ಸ್ವಾಗತಿಸಿದ್ದರೂ, ಇತ್ತೀಚಿನ ದತ್ತಾಂಶವು ಪ್ರಯಾಣಿಕರ ದಟ್ಟಣೆಯಲ್ಲಿ ಶೇ11.6 ಬೆಳವಣಿಗೆಯನ್ನು ಕಂಡಿದೆ. ದೇಶೀಯ ಪ್ರಯಾಣಿಕರ ದಟ್ಟಣೆಯು ಶೇ. 10 ರಷ್ಟು ಬೆಳವಣಿಗೆ ಕಂಡು 36.05 ಮಿಲಿಯನ್‌ಗೆ ತಲುಪಿದ್ದರೆ, ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 5.83 ಮಿಲಿಯನ್‌ಗೆ ಏರಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 25 ರಷ್ಟು ಹೆಚ್ಚಳವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂಡಿಗೋ ವಿಸ್ತರಣೆ
ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಈ ಗಣನೀಯ ಹೆಚ್ಚಳವನ್ನು ಮಾಡಲು ಇಂಡಿಗೊ ತನ್ನ ಜಾಗತಿಕ ಜಾಲದ ವಿಸ್ತರಣೆ ಮಾಡಲಿದೆ ಲಂಡನ್ ಹೀಥಗೆ ಹೆಚ್ಚುವರಿ ದೈನಂದಿನ ಆವರ್ತನಗಳು, ಜೊತೆಗೆ ಕ್ಯಾಥೆ ಪೆಸಿಫಿಕ್, ಕೆಎಲ್‌ಎಂ, ಜಪಾನ್ ಏರ್ಲೈನ್ಸ್ ಮತ್ತು ಕ್ಯಾಂಟಾಸ್ ಸೇರಿದಂತೆ ಹಲವಾರು ವಿದೇಶಿ ವಾಹಕಗಳಿಂದ ಹೆಚ್ಚಿದ ಸೇವೆಗಳಿಂದಾಗಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿನ ಈ ಹೆಚ್ಚಳವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಏರ್ಪೋರ್ಟ ನಿಂದ ಹೆಚ್ಚು ಜನರು ಪ್ರಯಾಣವನ್ನು ಮಾಡುತ್ತಲೇ ಇರುತ್ತಾರೆ.ಕಳೆದ ನಾಲ್ಕು ತಿಂಗಳುಗಳಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ನಿರಂತರವಾಗಿ ಸ್ಥಾನ ಪಡೆದಿದೆ. ಇದು 76 ದೇಶೀಯ ಮತ್ತು 33 ಅಂತರರಾಷ್ಟ್ರೀಯ ತಾಣಗಳಿಗೆ ಸಂಪರ್ಕವನ್ನು ಸಹ ನೀಡುತ್ತದೆ, ಮೇ ತಿಂಗಳ ಆರಂಭದಿಂದ ವಿಯೆಟ್ನಾಂನ ಹನೋಯ್ 34 ನೇ ಅಂತರರಾಷ್ಟ್ರೀಯ ತಾಣವಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಸರಕು ಸಾಗಣೆ ಹೊಸ ದಾಖಲೆ
ಬೆಂಗಳೂರಿನ ಏರ್ಪೋರ್ಟ ಅಂತರರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ. 21 ರಷ್ಟು ಏರಿಕೆಯನ್ನು ಕಂಡು ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 3,21,418 ಮೆಟ್ರಿಕ್ ಟನ್‌ಗಳು ಸಾಗಣೆಯಾಗಿವೆ. ಆದರೆ ದೇಶೀಯ ಸರಕು ಸಾಗಣೆಯಲ್ಲಿ ಶೇ. 4 ರಷ್ಟು ಏರಿಕೆಯಾಗಿ, 1,81,062 ಮೆಟ್ರಿಕ್ ಟನ್‌ಗಳು ಸಾಗಣೆಗಳು ನಡೆಸಿದೆ 500,000 ಮೆಟ್ರಿಕ್ ಟನ್ ದಾಟಿ ದಾಖಲೆಯನ್ನು ಮಾಡಿದೆ.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಸತತವಾಗಿ ನಾಲ್ಕನೇ ವರ್ಷ ಪೆರಿಷೆಬಲ್ ಎಕ್ಸ್‌ಪೋರ್ಟ್ ಮಾಡುವಲ್ಲಿ
ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡಿದು, ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಕೃಷಿ ಉತ್ಪನ್ನಗಳ ಪೂರೈಕೆ ಸರಪಳಿಯ ಕೊಂಡಿಯಾಗಿ ಕೆಲಸವನ್ನು ಮಾಡುತ್ತದೆ.
ಬೆಂಗಳೂರು ವಿಮಾನ ನಿಲ್ದಾಣವು ಮಾವು ಮತ್ತು ಕೊತ್ತಂಬರಿ ರಫ್ತುಗಳಲ್ಲಿ ಖ್ಯಾತಿಯನ್ನು ಪಡೆಯಲಿದೆ. ಇದರ ಜೊತೆಗೆ
ನಿರ್ಮಿತ ಉಡುಪುಗಳು, ಔಷಧಗಳು ಮತ್ತು ಯಂತ್ರೋಪಕರಣಗಳ ಭಾಗಗಳನ್ನು ಕೂಡ ರಫ್ತು ಮಾಡಲಾಗುತ್ತದೆ.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ 12 ನಿಶ್ಚಿತ ಸರಕು ಸಾಗಣೆ ವಿಮಾನಗಳು ಸಿಂಗಾಪುರ, ಲಂಡನ್, ಫ್ರಾಂಕ್ ಫುಟ್, ಷಿಕಾಗೋ, ಮಸ್ಕತ್‌ಗೆ ರಫ್ತು, ಹಾಗೂ ಶೆನ್‌ಝನ್, ಸಿಂಗಾಪುರ್, ಶಾಂಫ್ಟ್, ಹಾಂಕಾಂಗ್, ಫ್ರಾಂಕ್ ಫುಟ್‌ನಿಂದ ಆಮದು ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಹೆಚ್ಚಿನ ಬೆಳವಣಿಗೆ ಸಾಧಿಸುತ್ತಿದೆ.ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ವಿದೇಶದಿಂದ ಹೆಚ್ಚು ಪ್ರಯಾಣಿಗರು ಆಗಮಿಸುತ್ತಾರೆ. ಇದರಿಂದ ಸಹ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಮೂಲಕ ಬೆಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣ ಜಾಗತಿಕವಾಗಿ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿ ಇನ್ನೂ ಹೆಚ್ಚಿನ ದಾಖಲೆಯನ್ನು ಮಾಡುತ್ತದೆ.


Click it and Unblock the Notifications