ಬೆಂಗಳೂರು: "ಪ್ರತಿ ಸ್ಟಾರ್ಟ್‌ಅಪ್‌ನ ನೆಲೆಯ ಮೂಲ ಹುಡುಕಲು ಹೊರಟರೆ ಸಿಗುವುದು ಅದು ಬೆಂಗಳೂರಿನಲ್ಲಿ. ಭಾರತದ ಸಿಲಿಕಾನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರು ನಗರವು ಸ್ಟಾರ್ಟ್‌ಅಪ್ ಗಳ ಆಗರವಾಗಿದೆ, ಇಲ್ಲಿನ ಯುನಿಕಾರ್ನ್‌ಗಳ ಪಟ್ಟಿ ಬೆಳೆಯುತ್ತಿದೆ. ಸರ್ಕಾರದ ಬಲವಾದ ಬೆಂಬಲದೊಂದಿಗೆ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕುತ್ತಿದೆ. ಇಂತಹ ಸ್ಟಾರ್ಟ್ಅಪ್ ಹಬ್ ಆಗಿರುವ ಬೆಂಗಳೂರು ಮತ್ತೊಂದೆಡೆ ಭಾರತದ ವಾಣಿಜ್ಯೋದ್ಯಮ ರಾಜಧಾನಿ (entrepreneurial capital)ಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು 35 ವರ್ಷದೊಳಗಿನ ಭಾರತದ ಶ್ರೀಮಂತ ಯುವಕರ ತವರೂರು ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ.
ಹೌದು ಹುರುನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರು 35 ವರ್ಷದೊಳಗಿನ ಭಾರತದ 29 ಶ್ರೀಮಂತ ವ್ಯಕ್ತಿಗಳಿಗೆ ತವರೂರು ಎಂಬ ಬಿರುದನ್ನು ಪಡೆದುಕೊಂಡಿದ್ದು, ಈ ಮೂಲಕ ಭಾರತದ ವಾಣಿಜ್ಯ ನಗರಿ ಮುಂಬೈಯನ್ನು ಮೀರಿ ಉದ್ಯಾನನಗರಿ ಬೆಳೆದುನಿಂತಿದೆ.

'ಹುರುನ್ ಇಂಡಿಯಾ ಅಂಡರ್ 35' ಪಟ್ಟಿಯೂ ಗುರುವಾರ ರಿಲೀಸ್ ಆಗಿದ್ದು ಮುಂಬೈನಲ್ಲಿ 26 ಮಂದಿ ಯುವ ಸಿರಿವಂತ ಉದ್ಯಮಿಗಳಿದ್ದರೆ, ಇದನ್ನು ಮೀರಿಸಿದ ಬೆಂಗಳೂರಿನಲ್ಲಿ 29 ಯುವಕರು ಪ್ರತಿಷ್ಠಿತ ಹುರುನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಯುವ ವ್ಯಾಪಾರ ಪ್ರತಿಭೆಯನ್ನು ಪೋಷಿಸುವಲ್ಲಿ ಬೆಂಗಳೂರಿನ ಪ್ರಾಬಲ್ಯವನ್ನು ಪ್ರದರ್ಶಿಸುತ್ತಿದೆ.
ಅಮೇರಿಕಾ, ಬ್ರಿಟನ್, ಚೀನಾ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಹುರುನ್ ಅಂಡರ್ 35 ರ ಪಟ್ಟಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ ನಂತರ, ಹುರುನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಭಾರತಕ್ಕಾಗಿ ತನ್ನ ಬಹು ನಿರೀಕ್ಷಿತ ಅಂಡರ್ 35 ಲಿಸ್ಟ್ ನ್ನು ಅನಾವರಣಗೊಳಿಸಿತ್ತು. 2024 ಹುರುನ್ ಇಂಡಿಯಾ ಅಂಡರ್ 35 ಲಿಸ್ಟ್'ನಲ್ಲಿ 150 ಅತ್ಯುತ್ತಮ ಉದ್ಯಮಿಗಳನ್ನು ಒಳಗೊಂಡಿದೆ. ಇವರೆಲ್ಲರೂ $50 ಮಿಲಿಯನ್ (ಮೊದಲ ತಲೆಮಾರಿನ) ಮತ್ತು $100 ಮಿಲಿಯನ್ (ಮುಂದಿನ ತಲೆಮಾರಿನ) ಮೌಲ್ಯದ ಕಂಪನಿಗಳನ್ನು ನಿರ್ಮಿಸಿದ್ದಾರೆ.
ಬೆಂಗಳೂರಿನ ಗಮನಾರ್ಹ ಹೆಸರುಗಳಲ್ಲಿ ಥರ್ಡ್ ವೇವ್ ಕಾಫಿಯ ಸುಶಾಂತ್ ಗೋಯೆಲ್ ಮತ್ತು ಆಯುಷ್ ಬತ್ವಾಲ್, ರೇಜರ್‌ಪೇ(Razorpay)ಯ ಶಶಾಂಕ್ ಕುಮಾರ್, ಮತ್ತು ಮೀಶೋ(Meesho)ದ ವಿದಿತ್ ಆತ್ರೆ ಮತ್ತು ಸಂಜೀವ್ ಬರ್ನ್‌ವಾಲ್ ಸೇರಿದ್ದಾರೆ.
ಹುರುನ್ ಇಂಡಿಯಾದ ಎಂಡಿ ಮತ್ತು ಮುಖ್ಯ ರಿಸರ್ಚರ್ ಅನಸ್ ರಹಮಾನ್ ಜುನೈದ್, ಭಾರತದ ಯುವಜನರಲ್ಲಿ ಕ್ರಿಯಾತ್ಮಕ ಉದ್ಯಮಶೀಲತೆಯ ಮನೋಭಾವದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ದು, "ವಿಶೇಷವಾಗಿ ಭಾರತದ ಅರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಈ ಯುವ ನಾಯಕರು ಭೌಗೋಳಿಕ ರಾಜಕೀಯ ಒತ್ತಡಗಳು ಹಣದುಬ್ಬರ, ಆರ್ಥಿಕ ಏರಿಳಿತಗಳಂತಹ ಸವಾಲುಗಳನ್ನು ಎದುರಿಸಿ ತಮ್ಮ ಕಂಪನಿಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಸಂಪೂರ್ಣ ಪಟ್ಟಿ ಇಲ್ಲಿದೆ
* ರಿಷಿ ರಾಜ್ ರಾಥೋರ್ - ಅರ್ಜೂ
* ಅಜೀಶ್ ಅಚ್ಯುತನ್ - ಓಪನ್
* ಸುಶಾಂತ್ ಗೋಯೆಲ್ - ಥರ್ಡ್ ವೇವ್ ಕಾಫಿ
* ರೋಮನ್ ಸೈನಿ - ಅನಾಕಾಡೆಮಿ
* ಅಪೂರ್ವ್ ಕುಮಾರ್ - ರೆಫೈನ್
* ಅರುಣ್ ವಿನಾಯಕ್ - ಎಕ್ಸ್‌ಪೋನೆಂಟ್ ಎನರ್ಜಿ
* ಹರ್ಷಿಲ್ ಮಾಥುರ್ - ರೇಜರ್ಪೇ
* ಆಯುಷ್ ಬತ್ವಾಲ್ - ಥರ್ಡ್ ವೇವ್ ಕಾಫಿ
* ಅಭಿಷೇಕ್ ಬನ್ಸಾಲ್ - ಶಾಡೋಫ್ಯಾಕ್ಸ್
* ಶಶಾಂಕ್ ಕುಮಾರ್ - ರೇಜರ್ಪೇ
* ಯೋಗೇಶ್ ಅಗರ್ವಾಲ್ - ಒನ್ಸುರಿಟಿ
* ಜ್ಯೋತಿರಂಜನ್ ಹರಿಚಂದನ್ - ಬೋಲ್ಟ್ ಅರ್ಥ್
* ಗೋವಿಂದ್ ಸೋನಿ - ಕಾಯಿನ್ ಸ್ವಿಚ್
* ರವೀಶ್ ನರೇಶ್ - ಖತಾಬುಕ್
* ಪ್ರಣೀತ್ ಕುಮಾರ್ ಬೋಗನಾಧುಲ - ವೆಗ್ರೋ
* ವಿಮಲ್ ಸಾಗರ್ ತಿವಾರಿ - ಕಾಯಿನ್ ಸ್ವಿಚ್
* ಪ್ರಣವ್ ಗೋಯೆಲ್ - ಪೋರ್ಟರ್
* ತರುಣ್ ಮೆಹ್ತಾ - ಅಥೆರ್ ಎನರ್ಜಿ
* ಸಂಗೀತ್ ಅಗರ್ವಾಲ್ - ಮೊಕೋಬರಾ
* ಉತ್ತಮ್ ದಿಗ್ಗಾ - ಪೋರ್ಟರ್
* ಸಂಜೀವ್ ಬರ್ನ್ವಾಲ್ - ಮೀಶೋ
* ಮೋಹಿತ್ ಕುಮಾರ್ - ಅಲ್ಟ್ರಾಹ್ಯೂಮನ್
* ಸ್ವಪ್ನಿಲ್ ಜೈನ್ - ಅಥೆರ್ ಎನರ್ಜಿ
* ಎಂಬಸೇಕರ್ ದೀನದಯಾಳನೆ - ಮೆಡಿಬಡ್ಡಿ
* ರೋಹಿತ್ ಸಲೀಂ - ಸ್ಪಾಟ್ ಡ್ರಾಫ್ಟ್
* ಚಾಣಕ್ಯ ಹೃದಯ - ಬ್ಲ್ಯಾಕ್ ಬಕ್
* ಆಶಿಶ್ ಸಿಂಘಾಲ್ - ಕಾಯಿನ್ ಸ್ವಿಚ್
* ಸತೀಶ್ ಕಣ್ಣನ್ - ಮೆಡಿಬಡ್ಡಿ
* ಅಂಕಿತ್ ಗಾರ್ಗ್ - ವೇಕ್ ಫೀತ್
ಶೇರ್‌ಚಾಟ್‌ನ ಅಂಕುಶ್ ಸಚ್‌ದೇವ, 31 ನೇ ವಯಸ್ಸಿನಲ್ಲಿ, 2024 ರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅತ್ಯಂತ ಕಿರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಟಾಡಲ್‌ನ ಪರಿತಾ ಪರೇಖ್ ಮತ್ತು ರಿಲಯನ್ಸ್ ರಿಟೇಲ್‌ನ ಇಶಾ ಅಂಬಾನಿ, 32 ವರ್ಷದ ಕಿರಿಯ ಮಹಿಳಾ ಉದ್ಯಮಿಗಳಾಗಿದ್ದು, ಇವರು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಮಹಿಳಾ ನಾಯಕರನ್ನು ಪ್ರತಿನಿಧಿಸುತ್ತಿದ್ದಾರೆ.
ಇನ್ನು ವಲಯವಾರು ನೋಡುವುದಾದರೆ, 21 ಉದ್ಯಮಿಗಳೊಂದಿಗೆ ಹಣಕಾಸು ಸೇವೆಗಳು ಅಗ್ರ ವಲಯವಾಗಿ ಹೊರಹೊಮ್ಮಿವೆ. ನಂತರ 14 ಉದ್ಯಮಿಗಳೊಂದಿಗೆ ಸಾಫ್ಟ್‌ವೇರ್ ಮತ್ತು ಸೇವೆಗಳು ನಂತರದ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿರುವ ಉದ್ಯಮಿಗಳ ಸರಾಸರಿ ವಯಸ್ಸು 33 ಆಗಿದ್ದುಇದು ಭಾರತದ ಆರಂಭಿಕ ರಂಗದ ಯುವ ಸ್ವರೂಪವನ್ನು ಮತ್ತಷ್ಟು ಒತ್ತಿಹೇಳುತ್ತದೆ.
ಭಾರತದಲ್ಲಿ ಐಐಟಿ ಮದ್ರಾಸ್ ಮತ್ತು ಐಐಟಿ ಬಾಂಬೆ ಉದ್ಯಮಶೀಲ ಪ್ರತಿಭೆಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಸಂಸ್ಥೆಗಳಾಗಿ ಮುಂದುವರೆದಿವೆ, ಕ್ರಮವಾಗಿ 13 ಮತ್ತು 11 ಪದವೀಧರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹುರುನ್ ಇಂಡಿಯಾ ಅಂಡರ್ 35 ರ ಪಟ್ಟಿಯಲ್ಲಿ ಬೆಂಗಳೂರಿನ ಪ್ರಾಬಲ್ಯವು ಅದರ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜನಕಾರಿಯಾಗಿದ್ದು, ಇದು ಯುವ ಉದ್ಯಮಿಗಳಿಗೆ ಹೊಸತನ ಮತ್ತು ಯಶಸ್ವಿಯಾಗಲು ಪೂರಕ ಪ್ರದೇಶವನ್ನು ಒದಗಿಸುತ್ತದೆ. ಭಾರತದ ಆರ್ಥಿಕತೆಯು ವಿಸ್ತರಣೆಯಾಗುತ್ತಿರುವಂತೆ, ಜಾಗತಿಕ ಸ್ಟಾರ್ಟ್ಅಪ್ ಕೇಂದ್ರವಾಗಿ ಬೆಂಗಳೂರಿನ ಖ್ಯಾತಿಯು ಮತ್ತಷ್ಟು ಬಲವಾಗಿ ಬೆಳೆಯಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications