Bengaluru: ಶುಕ್ರವಾರ, ಶನಿವಾರ ಹೆಚ್ಚಲಿದೆ ವಿವಿಐಪಿ ಒಡಾಟ: ಪೊಲೀಸರ ಸಲಹೆ

ಬೆಂಗಳೂರಿನಲ್ಲಿ ಗಣ್ಯಾತಿ ಗಣ್ಯರ ಓಡಾಟ ಮುಂದಿನ ಎರಡು ದಿನಗಳಲ್ಲಿ ಹೆಚ್ಚಾಗಲಿದೆ. ಹೀಗಾಗಿ ನಗರದ ಹಲವೆಡೆ ಪ್ರಯಾಣಿಕರು ಟ್ರಾಫಿಕ್‌ ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಹಾಗೂ ಶನಿವಾರವೂ ವಾಹನ ಸವಾರರಿಗೆ ಕಿರಿಕಿರಿ ಇರಲಿದೆ. ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೆ ಶುಕ್ರವಾರ ಸಂಜೆ 4 ರಿಂದ ರಾತ್ರಿ 9 ರವರೆಗೆ ವಾಹನ ನಿಲುಗಡೆಗೆ ಸಂಪೂರ್ಣ ನಿಷೇಧ ಹೇರಿದ್ದಾರೆ.

ಹೀಗಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ವಾಹನ ಸವಾರರು ಶುಕ್ರವಾರ ಹಾಗೂ ಶನಿವಾರ ಎಚ್‌ಎಎಲ್‌ ಏರ್‌ಪ್ರೋರ್ಟ್‌ ರೋಡ್‌, ಕಬ್ಬನ್‌ ರೋಡ್‌, ಎಂಜಿ ರೋಡ್ (ಟ್ರಿನಿಟಿಯಿಂದ ಮಯೋಹಾಲ್‌) ರಾಜ್‌ ಭವನ್‌ ರೋಡ್, ಅಂಬೇಡ್ಕರ್ ವೀಧಿ ಸುತ್ತ ತಿರುಗಾಡುವ ಪ್ರಯಾಣಿಕರು ಬೇರೆ ಮಾರ್ಗಗಳನ್ನು ಬಳಿಸುವಂತೆ ಸೂಚಿಸಿದ್ದಾರೆ.

 Bengaluru: ಶುಕ್ರವಾರ, ಶನಿವಾರ ಹೆಚ್ಚಲಿದೆ ವಿವಿಐಪಿ ಒಡಾಟ

ಹೆಚ್ಚಲಿದೆ ವಿವಿಐಪಿ ಒಡಾಟ

ಗಣ್ಯಾತಿ ಗಣ್ಯರು ಶನಿವಾರವೂ ಬೆಂಗಳೂರಿನಲ್ಲಿ ಇರಲಿದ್ದು, ಪಾರ್ಕಿಂಗ್‌ ಸಮಸ್ಯೆ ಸಹ ಎದುರಾಗುತ್ತದೆ. ಶನಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ ವಾಹನಗಳಿಗೆ ಪಾರ್ಕಿಂಗ್‌ ನಿರ್ಬಂಧಿಸಲಾಗಿದೆ. ಬಳ್ಳಾರಿ ರೋಡ್‌ ಪ್ಯಾಲೇಸ್ ರೋಡ್, ಜಯಮಹಲ್‌ ರೋಡ್, ರಮನ್ ಶ್ರೀ ಮಹರ್ಷಿ ರೋಡ್, ಮೌಂಟ್‌ ಕಾರ್ಮೆಲ್ ಕಾಲೇಜ್ ರೋಡ್, ಸಿವಿ ರಾಮನ್ ರೋಡ್, ನಂದಿ ದುರ್ಗ ರೋಡ್, ತರಳಬಾಳು ರೋಡ್‌, ಇನ್‌ಫೆಂಟ್ರಿ ರೋಡ್‌, ಕಬ್ಬನ್ ರೋಡ್, ಎಂಜಿ ರೋಡ್, ರಾಜ ಭವನ ರೋಡ್‌ ಹಾಗೂ ಎಚ್‌ಎಎಲ್‌ ಏರ್‌ಪೋರ್ಟ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಅರಮನೆ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಣೆ ಆಗುವ ನಿರೀಕ್ಷೆ ಇದೆ. ಹೀಗಾಗಿ ತಮ್ಮ ವಾಹನಗಳನ್ನು ಗೇಟ್ ಸಂಖ್ಯೆ 2 ರ ಬಳಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲು ಮತ್ತು ತ್ರಿಪುರವಾಸಿನಿ ಗೇಟ್ ಮತ್ತು ಮೆಕ್ರಿ ಸರ್ಕಲ್ ಮೂಲಕ ನಿರ್ಗಮಿಸಲು ಪೊಲೀಸರು ಸೂಚಿಸಿದ್ದಾರೆ.

ಅರಮನೆ ಮೈದಾನಕ್ಕೆ ತೆರಳುವ ಪ್ರಯಾಣಿಕರು ಬಾಳೇಕುಂದ್ರಿ ವೃತ್ತದಿಂದ ಲೇ ಮೆರಿಡಿಯನ್, ತರಳಬಾಳು ರಸ್ತೆ, ಕ್ವೀನ್ಸ್ ರಸ್ತೆ, ಭಾಷ್ಯಂ ವೃತ್ತ, ಸ್ಯಾಂಕಿ ರಸ್ತೆ ಮತ್ತು ಹಳೆಯ ಉದಯ ಟಿವಿ ಜಂಕ್ಷನ್‌ನಂತಹ ಪರ್ಯಾಯ ರಸ್ತೆಗಳನ್ನು ವಾಹನ ಸವಾರರು ಬಳಸಬಹುದಾಗಿದೆ.

 Bengaluru: ಶುಕ್ರವಾರ, ಶನಿವಾರ ಹೆಚ್ಚಲಿದೆ ವಿವಿಐಪಿ ಒಡಾಟ

ಪ್ರತಿ ಬಾರಿಯೂ ವಿವಿಐಪಿ ಮೂಮೆಂಟ್‌ ಇದ್ದಾಗ ಪೊಲೀಸರು ಈ ರೀತಿಯ ಸೂಚನೆಗಳನ್ನು ನೀಡುತ್ತಾರೆ. ಪೊಲೀಸರು ನೀಡಿರುವ ಗೈಡ್‌ಲೈನ್‌ ಅನುಸರಿಸಿ ವಾಹನ ದಟ್ಟಣೆಯಿಂದ ದೂರವಾಗಬಹುದಾಗಿದೆ. ಪೊಲೀಸರು ಸೂಚಿಸಿರುವ ಮಾರ್ಗವನ್ನು ಹೊರತು ಪಡಿಸಿ ಪರ್ಯಾಯ ಮಾರ್ಗಗಳನ್ನು ಜನರು ಬಳಸುವುದರಿಂದ, ವಾಹನ ದಟ್ಟಣೆ ಕಡಿಮೆ ಆಗುತ್ತದೆ. ಅಲ್ಲದೆ ಪೊಲೀಸರು ಈ ರೀತಿ ಸಲಹೆ ನೀಡಿದುವರಿಂದ ಉದ್ಯೋಗಿಗಳು ವರ್ಕ್‌ ಫ್ರಾಮ್‌ ಹೋಮ್‌ ಆಯ್ಕೆಯನ್ನು ಮಾಡಿಕೊಳ್ಳಬಹುದು. ಇದರಿಂದ ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಿ ಪಡೆಯಬಹುದಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಜಮಾವಣೆ ಆಗುವುದರಿಂದ ಪೊಲೀಸರು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+