ಬೆಂಗಳೂರು, ಆಗಸ್ಟ್ 20: ಬಾಡಿಗೆ ಮನೆಯಲ್ಲಿದ್ದೀರಾ.. ಅನಿವಾರ್ಯ ಕಾರಣದಿಂದ ಮನೆ ಬದಲಾಯಿಸಬೇಕು.. ಬೇರೆ ಏರಿಯಾಕ್ಕೆ ಶಿಫ್ಟ್ ಮಾಡಬೇಕು ಎಂದು ಅನಿಸಿದಾಗ ಇಂದು ನಾವೆಲ್ಲ "ಮೂವರ್ಸ್ ಮತ್ತು ಪ್ಯಾಕರ್ಸ್' ಕಂಪನಿಗಳ ಮೊರೆ ಹೋಗುತ್ತೇವೆ. ಹೀಗೆ ಮನೆ ಶಿಫ್ಟ್ ಮಾಡಲು ಮುಂದಾಗಿದ್ದ ಬೆಂಗಳೂರು ನಿವಾಸಿಯೊಬ್ಬರು ಆಘಾತಕ್ಕೆ ಒಳಗಾಗಿದ್ದಾರೆ. ಕಂಪನಿ ಮಾಡಿದ ಕೆಲಸ ಕಂಡು ಕಂಗಾಲಾಗಿದ್ದಾರೆ. ಕಂಪನಿಯ ಘೋರ ಕೆಲಸಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ನಿವಾಸಿಯೊಬ್ಬರು ಹಾಲೆಫ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಎಂಬ ಮೂವಿಂಗ್ ಕಂಪನಿಗೆ ಮನೆ ಶಿಫ್ಟಿಂಗ್ ಕೆಲಸ ಕೊಟ್ಟಿದ್ದರು. ಆದರೆ ಸಿಬ್ಬಂದಿ ಮಾಡಿದ ಕೆಲಸ ಕಂಡು ಮನೆ ಶಿಫ್ಟ್ ಮಾಡಲು ಮುಂದಾಗಿದ್ದ ಅಂಕಿತ್ ಮಯಾಂಕ್ ಕಂಗಾಲಾಗಿ ಹೋಗಿದ್ದಾರೆ. ತಮಗಾದ ಘೋರ ಅನ್ಯಾಯವನ್ನು ವಿಡಿಯೋ ಮುಖೇನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಸುಮಾರು 8 ಲಕ್ಷ ಮೊತ್ತದ ಕ್ಯಾಶ್, ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಿದ್ದಾರೆ.

ಸರಿಸುಮಾರು 8 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಶಿಫ್ಟಿಂಗ್ ಸಂದರ್ಭ ಕಳ್ಳತನವಾಗಿದೆ. ಕಳುವಾದ ಬ್ಯಾಗ್ ನಲ್ಲಿ 2 ಲಕ್ಷ ನಗದು, ಒಂದು ಜೊತೆ ಚಿನ್ನದ ಕಿವಿಯೋಲೆಗಳು, ಎರಡು ಚಿನ್ನದ ಬಳೆಗಳು ಮತ್ತು ಇತರೆ ವಸ್ತುಗಳಿದ್ದವು. ಮನೆ ಶಿಫ್ಟಿಂಗ್ ಗೆ ಬಂದಿದ್ದ ಏಳು ಜನರ ತಂಡ ಈ ಕಳ್ಳತನ ಮಾಡಿದೆ ಎಂದು ಅಂಕಿತ್ ಆರೋಪಿಸಿದ್ದಾರೆ. ಅಲ್ಲದೇ ಪೊಲೀಸ್ ದೂರು ಸಹ ದಾಖಲಾಗಿದೆ.
ಟ್ರಾಲಿಗಳು, ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳು ಅಸ್ತವ್ಯಸ್ತವಾಗಿ ಬಿದ್ದಿವೆ. ಹೊಸ ಮನೆಯನ್ನು ಸುಸ್ಥಿತಿಗೆ ತರಲು ಹರಸಾಹಸ ಮಾಬೇಕಾದ ಸ್ಥಿತಿ ಇದೆ. ಹಲವಾರು ವಸ್ತುಗಳು ಕಾಣೆಯಾಗಿವೆ ಅಥವಾ ಹಾನಿಗೊಳಗಾಗಿವೆ. ಸುಗಂಧ ದ್ರವ್ಯಗಳು, ಅಪರೂಪದ ಪೆನ್ನುಗಳು ಮತ್ತು ಬೆಲೆಬಾಳುವ ಆಸ್ತಿ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಕೆಲವು ಕಳೆದು ಹೋಗಿದ್ದು ಸದ್ಯಕ್ಕೆ ಪತ್ತೆ ಮಾಡು ಸ್ಥಿತಿಯಲ್ಲಿಮ ಇಲ್ಲ. ಪೀಠೋಪಕರಣಗಳು ಮತ್ತು ಮನೆಯ ಸಾಮಾನುಗಳಿಗೂ ಹಾನಿಯಾಗಿದ್ದು ಇದನ್ನು ಯಾರು ಸರಿ ಮಾಡುತ್ತಾರೆ ಎಂದು ಅಂಕಿತ್ ಪ್ರಶ್ನೆ ಮಾಡುತ್ತಾರೆ.
ಈ 48 ಗಂಟೆಗಳು ನನ್ನ ಜೀವನದ ಭಯಾನಕ ದಿನಗಳಾಗಿದೆ. ನಾನು ಆಗಸ್ಟ್ 14 ರಂದು ನನ್ನ ಮನೆಯನ್ನು ಬದಲಾಯಿಸಬೇಕಾಗಿತ್ತು, ಅದಕ್ಕಾಗಿ ನಾನು ಮೂವರ್ಸ್ ಮತ್ತು ಪ್ಯಾಕರ್ಸ್ ಕಂಪನಿ 'ಹಾಲೆಫ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್' ಬುಕ್ ಮಾಡಿದ್ದೆ. ಆದರೆ ಅದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರವಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅಂಕಿತ್ ಅಳಲು ತೋಡಿಕೊಂಡಿದ್ದಾರೆ. 'X' ಸೋಶಿಯಲ್ ಮೀಡುಯಾದಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.
ಇನ್ನೊಂದು ಕಡೆ ಸಂಬಂಧಿತ ಕಂಪನಿಯೂ ಪ್ರತಿಕ್ರಿಯೆ ನೀಡಿದ್ದು ಈ ಘಟನಾವಳಿಗಳಿಗೆ ತಮ್ಮ ಸಿಬ್ಬಂದಿ ಮಾತ್ರ ಕಾರಣ ಎಂದು ಹೇಳುತ್ತ ಕಂಪನಿ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ ಎನ್ನುವ ಆರೊಪ ಮಾಡಲಾಗಿದೆ. ವಿದ್ಯಾರಣ್ಯಪುರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಂದತೆ ಕಂಡಿಲ್ಲ ಎನ್ನುವುದು ಅಂಕಿತ್ ಆರೋಪ.
ಶಂಕಿತರು ಈ ರೀತಿ ಕಳ್ಳತನ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಪೊಲೀಸರು ಸಲ್ಲಿಸಿದ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿಳಾಸಗಳನ್ನು ಬಿಟ್ಟುಬಿಡಲಾಗಿದೆ. ಈ ಘಟನೆಗೆ ಸಂಬಂಧಿಸಿದ ಸೆಕ್ಷನ್ ಗಳ ಉಲ್ಲೇಖವಿಲ್ಲ ಎಂದು ಅಂಕಿತ್ ಅಳಲು ತೋಡಿಕೊಂಡಿದ್ದಾರೆ.
"ಈ ಪ್ರಕರಣದ ಕಾರಣಕ್ಕೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ 48 ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗಿಲ್ಲ. ಕಳೆದ 15 ತಿಂಗಳುಗಳಿಂದ ಕೋಮಾದಲ್ಲಿದ್ದ ಪತ್ನಿಗೆ ಈಗ ಕಳುವಾದ ವಸ್ತುಗಳ ಮೇಲೆ ಭಾವನಾತ್ಮಕ ಸಂಬಂಧ ಇತ್ತು. ನಾವು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೊಂದಿದ್ದೇವೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ರಾಜಕೀಯ ನಾಯಕರು ಮತ್ತು ಸಂಘಟನೆಗಳ ಬಳಿಯೂ ಸಹಾಯಕ್ಕಾಗಿ ಮನವಿ ಮಾಡಿದ್ದೇವೆ. ಈ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ದಂಡ ವಿಧಿಸಬೇಕು ಎಂದಮ ಕೇಳಿಕೊಂಡಿದ್ದೇವೆ. ಇದರ ಪರವಾನಗಿ ರದ್ದು ಮಾಡಲು ಕೋರಿದ್ದೇವೆ ಎಂದರು.
ಕಂಪನಿ ಸಹ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. "ಪ್ರತಿಯೊಂದು ಸನ್ನಿವೇಶವೂ ಬಹು ದೃಷ್ಟಿಕೋನಗಳನ್ನು ಹೊಂದಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪೊಲೀಸ್ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯು ನಿಜವಾದ ಸತ್ಯ ಹೊರಬರಲಿದೆ. ದಂಪತಿ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ" ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದೆ.


Click it and Unblock the Notifications