ರೈಲು ಪ್ರಯಾಣಿಕರಿಗೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರು ಈ ಬಗ್ಗೆ ಗಮನ ಹರಿಸಲೇಬೇಕು. ಏಕೆಂದರೆ ಒಂದೆರಡು ದಿನಗಳಲ್ಲಿ..ಬರೋಬ್ಬರಿ 5 ತಿಂಗಳುಗಳ ಕಾಲ ಬೆಂಗಳೂರು-ಮಂಗಳೂರು ರೈಲು ಮಾರ್ಗ ಬಂದ್ ಆಗಲಿದೆ. ಯಾಕೆ ಎಂದು ಈ ಲೇಖನದಲ್ಲಿ ಪೂರ್ತಿ ಓದಿ.

ಹೌದು, ಜೂನ್ 1ರಿಂದ ಐದು ತಿಂಗಳುಗಳ ಬೆಂಗಳೂರು-ಮಂಗಳೂರು ನಡುವಿನ ರೈಲು ಸ್ಥಗಿತಗೊಳ್ಳಲಿದೆ. ಅಂದರೆ ರೈಲ್ವೆ ಮಾರ್ಗದ ಪ್ರಮುಖ ವಿಭಾಗವಾದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವೆ ರೈಲು ಸಂಚಾರವನ್ನು ನಿಲುಗೊಳಿಸಲಾಗುತ್ತಿದೆ. ಏಕೆಂದರೆ ನೈಋತ್ಯ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಮಾಸ್ಟರ್ ಲೆವೆಲ್ ವಿದ್ಯುದ್ದೀಕರಣ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ. ಈ ಸಂಬಂಧವಾಗಿ ಪ್ರಮುಖ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಪ್ರಮುಖ ರೈಲು ಸೇವೆಗಳ ಸ್ಥಗಿತ:
ರೈಲ್ವೆ ಇಲಾಖೆಯ ಈ ನಿರ್ಧಾರದಿಂದ ಹಲವು ಪ್ರಮುಖ ರೈಲು ಸೇವೆಗಳು ಸ್ಥಗಿತಗೊಳ್ಳಲಿವೆ. ಅಂದರೆ ಶನಿವಾರದಂದು ಸಂಚರಿಸುವ ಯಶವಂತಪುರ-ಮಂಗಳೂರು ಗೋಮಟೇಶ್ವರ ಎಕ್ಸ್‌ಪ್ರೆಸ್, ಭಾನುವಾರದಂದು ಮಂಗಳೂರು-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್, ಯಶವಂತಪುರ-ಮಂಗಳೂರು ತ್ರಿವಾರ ಎಕ್ಸ್‌ಪ್ರೆಸ್ ಹಾಗೂ ಕಾರವಾರ-ಯಶವಂತಪುರ ರೈಲುಗಳ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಸ್ಥಗಿತ ಅವಧಿ ಅಕ್ಟೋಬರ್ ಅಥವಾ ನವೆಂಬರ್ 2025ರವರೆಗೆ ಮುಂದುವರೆಯಬಹುದೆಂಬ ಸಾಧ್ಯತೆಯಿದೆ. ವಾರದ ಸೇವೆಗಳು ಮತ್ತು ವಾರಾಂತ್ಯದ ರೈಲುಗಳೊಂದಿಗೆ ಈ ತಾತ್ಕಾಲಿಕ ವ್ಯತ್ಯಯವು ಬೃಹತ್ ಸಂಖ್ಯೆಯ ದಿನನಿತ್ಯ ಪ್ರಯಾಣಿಕರ ಜೀವನ ಕ್ರಮವನ್ನು ಬದಲಾಯಿಸಲಿದೆ.
ದೀರ್ಘಕಾಲಿಕ ಲಾಭದ ಮೇಲೆ ಕಣ್ಣಿಟ್ಟಿರುವ ಯೋಜನೆ:
ಈ ನಿರ್ಧಾರದ ಹಿಂದೆ ಒಂದು ಉದ್ದೇಶವೂ ಇದೆ. ಅದೇನೆಂದರೆ ಡೀಸೆಲ್ ರೈಲುಗಳ ಬದಲು ವಿದ್ಯುದ್ದೀಕೃತ ರೈಲು ಸೇವೆಗಳನ್ನು ರೂಪಿಸುವ ಈ ಯೋಜನೆಯನ್ನು ತರಲು ಚಿಂತನೆ ನಡೆಯುತ್ತಿದೆ. ಅಂದರೆ ಇಂಧನ ದಕ್ಷತೆಯೊಂದಿಗೆ ಪ್ರಯಾಣ ಸಮಯವನ್ನು ಕಡಿಮೆ ಮಾಡುವುದು ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ, ಶಬ್ದ ಮಾಲಿನ್ಯ ಮತ್ತು ಕಾರ್ಬನ್ ಎಮಿಷನ್ ಕಡಿತಗೊಳಿಸುವ ಹಾದಿಯತ್ತ ಇದು ಮಹತ್ವದ ಹೆಜ್ಜೆ ಎನ್ನಬಹುದು.
ಇದರಿಂದ ಯಾರಿಗೆಲ್ಲಾ ಪರಿಣಾಮ:
ಇನ್ನು ಈ ಬೆಂಗಳೂರು-ಮಂಗಳೂರು ರೈಲು ಮಾರ್ಗ ಕೇವಲ ಪ್ರಯಾಣಿಕರ ಸಂಪರ್ಕವೊಂದೇ ತಿನ್ನುವುದಿಲ್ಲ. ಇದು ಕರಾವಳಿ ಭಾಗದ ಆರ್ಥಿಕ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ, ಉದ್ಯೋಗದ ನಿಮಿತ್ತ ಸಾಗಣೆ, ಹಾಗೂ ಪ್ರವಾಸೋದ್ಯಮ ಎಲ್ಲವೂ ರೈಲು ಸೇವೆಗಳ ಮೇಲೆ ಅವಲಂಬಿತವಾಗಿರುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತದೆ. ಈ ಮಾರ್ಗದ ಸ್ಥಗಿತದಿಂದ ವ್ಯಾಪಾರ ಲಾಜಿಸ್ಟಿಕ್ಸ್, ಪ್ರವಾಸಿಗರ ಚಲನೆ ಮತ್ತು ಕಾರ್ಮಿಕ ವರ್ಗದ ಜನರ ಜೀವನದ ಮೇಲೆ ನೇರವಾದ ಪರಿಣಾಮ ಬೀರುತ್ತದೆ.
ತಂತ್ರಜ್ಞಾನಾಭಿವೃದ್ಧಿಯ ದಿಟ್ಟ ಹೆಜ್ಜೆ:
ಆದರೆ ಇಂದು ಎಷ್ಟೇ ತೊಂದರೆಗಳೆದುರಾದರೂ ಅದರ ವಿರುದ್ಧವಾಗಿ, ಈ ಯೋಜನೆಯು ಭವಿಷ್ಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶುದ್ಧ ಮತ್ತು ವೇಗದ ರೈಲು ಸಂಚಾರಕ್ಕೆ ದಾರಿ ಬಿಡಲಿದೆ. ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳುವಂತೆ, ವಿದ್ಯುದ್ದೀಕರಣ ನಮ್ಮ ದೀರ್ಘಕಾಲೀನ ಗುರಿಗಳೊಂದಿಗೆ ಅನುಗುಣವಾಗಿದೆ. ಇದು ಸ್ವಚ್ಛ ತಂತ್ರಜ್ಞಾನಕ್ಕೆ ಒಂದು ದಿಟ್ಟ ಹೆಜ್ಜೆ.
ಸಮರ್ಪಕ ಪರ್ಯಾಯ ವ್ಯವಸ್ಥೆಗಳ ಕೊರತೆ:
ಇದರಿಂದ ಎದುರಿಸಬಹುದಾದ ಇನ್ನೂ ಒಂದು ಸಮಸ್ಯೆ ಇದೆ. ಅದೇನೆಂದರೆ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯ ಕೊರತೆ ಇದೆ. ಅಂದರೆ ಹೆಚ್ಚುವರಿ ಬಸ್‌ಗಳು, ಶಟಲ್ ಸೇವೆಗಳು ಮತ್ತು ಇತರ ಲಘು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಅಧಿಕಾರಿಗಳು ಈ ಕುರಿತಾಗಿ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದರೂ, ಇನ್ನೂ ಯಾವುದೇ ಸ್ಪಷ್ಟ ಯೋಜನೆ ಪ್ರಕಟವಾಗಿಲ್ಲ.
ಈ ಕಾರ್ಯಾಚರಣೆಯ ಪೂರ್ಣತೆಗೆಳಿಕೆಯ ನಂತರ, ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಶಾಂತ, ವೇಗವಾದ ಮತ್ತು ಪರಿಸರ ಸ್ನೇಹಿ ರೈಲು ಸೇವೆಗಳು ಲಭ್ಯವಾಗಲಿವೆ. ಇದು ಕರ್ನಾಟಕದ ರೈಲು ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೆ ನಾಂದಿಯಾಗುವ ನಿರೀಕ್ಷೆಯಿದೆ. ಆದರೆ ಅಷ್ಟರವರೆಗೆ, ಸಾವಿರಾರು ಪ್ರಯಾಣಿಕರು ತಮ್ಮ ದಿನಚರಿಯನ್ನು ತಾತ್ಕಾಲಿಕವಾಗಿ ಬದಲಾಯಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಭದ್ರತೆ, ಸುಸ್ಥಿರತೆ ಮತ್ತು ಸೌಕರ್ಯಗಳ ನಡುವೆ ಸಮತೋಲನ ಸಾಧಿಸುವುದು ಈ ಯೋಜನೆಯ ಯಶಸ್ಸಿಗೆ ಕೀಲಿ. ಯೋಜನೆಯ ಉದ್ದೇಶ ಶ್ಲಾಘನೀಯವಾಗಿದ್ದರೂ, ಪರಿಣಾಮಿತ ಜನರಿಗೆ ಸ್ಪಷ್ಟ ಪರಿಹಾರಗಳು ನೀಡದೆ ಮುಂದುವರೆಯುವುದು ಸರಿಯಲ್ಲ. ಸರ್ಕಾರ ಮತ್ತು ರೈಲ್ವೆ ಇಲಾಖೆ ಜವಾಬ್ದಾರಿಯುತ ಕ್ರಮಗಳೊಂದಿಗೆ ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆಗಳನ್ನು ಘೋಷಿಸುವ ನಿರೀಕ್ಷೆ ವ್ಯಕ್ತವಾಗಿದೆ.


Click it and Unblock the Notifications