ಬೆಂಗಳೂರಿಗರೇ ಇಲ್ಲಿ ಕೇಳಿ... ವೀಕೆಂಡ್ ಬಂದರೆ ಸಾಕು ಬೆಂಗಳೂರಿನಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ.ಶಾಪಿಂಗ್ ಮಾಡಲು ಅಥವಾ ಯಾವುದೇ ಬೆಂಗಳೂರಿನ ಪ್ರಮಾಸಿ ತಾಣಕ್ಕೆ ಹೋಗಲು ಬಸ್ ಹಾಗೂ ಮೆಟ್ರೋವನ್ನೇ ಹೆಚ್ಚು ಜನರು ಅವಲಂಬಿಸಿಕೊಂಡಿರುತ್ತಾರೆ.ಆದರೆ ನೀವು ನಾಳೆ ಎಲ್ಲಿಗಾದರೂ ಹೊರಹೋಗುವ ಪ್ಲಾನ್ ಇದೀಯಾ..? ಹಾಗಿದ್ರೆ ಇದೇ ಚೇಂಚ್ ಮಾಡಿಕೊಳ್ಳಿ ಯಾಕೆಂದರೆ ನಾಳೆ 3 ಗಂಟೆಗಳ ಕಾಲ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಯಾವ ಮಾರ್ಗದಲ್ಲಿ ಮೆಟ್ರೋ ಬಂದ್ ಆಗಲಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ.
ಹೌದು,ನಾಳೆ( ಮಾರ್ಚ್ 9) ರಂದು ಕೆಲವು ಮಾರ್ಗಗಳಲ್ಲಿ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ಸೇವೆ ಸ್ಥಗಿತಕ್ಕೆ ಕಾರಣವೇನು..?
ನಮ್ಮ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRL) ಶುಕ್ರವಾರ ಮೆಟ್ರೋ ಸೇವೆಗಳನ್ನು ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ನಿಲ್ದಾಣಗಳ ನಡುವೆ ನಡೆಯಲಿದ್ದು, ಮಾರ್ಚ್ 9 ರಂದು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10ರ ವರೆಗೆ ಮೂರು ನೇರಳೆ ಮಾರ್ಗ ಹಳಿ ನಿರ್ವಹಣೆಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ನಮ್ಮ ಮೆಟ್ರೋ 9 ಮಾರ್ಚ್ 2025 ರಂದು, ಮೆಟ್ರೋ ಸೇವೆಯಾದ "BMRL" ಹಳಿ ನಿರ್ವಹಣಾ ಕಾಮಗಾರಿ ಮಾಡುವುದರಿಂದ, ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು 7 ರಿಂದ 10 ಗಂಟೆಯ ಬಳಗೆ ಮೂರು ಗಂಟೆಗಳ ಸ್ಥಗಿತಗೊಳಿಸಲಾಗುತ್ತದೆ.
ಈ ಅವಧಿಯಲ್ಲಿ, ಮೆಟ್ರೋ ಸೇವೆಗಳಲ್ಲಿ ವ್ಯತ್ಯಯ ಬರುವುದರಿಂದ, ಕ್ಯೂಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. 10 ಗಂಟೆಗೆ ನಂತರ, ಸೇವೆಗಳು ಪುನಃ ಆರಂಭವಾಗಲಿದೆ.ಪ್ರಯಾಣಿಕರು ಈ ಸಮಯದಲ್ಲಿ ಮೆಟ್ರೋ ಸೇವೆಗಳ ಸ್ಥಗಿತವನ್ನು ಗಮನದಲ್ಲಿ ಇಟ್ಟು, ತಮ್ಮ ಪ್ರಯಾಣ ಪ್ಲಾನಿಂಗ್‌ನ್ನು ಮಾಡಿಕೊಳ್ಳಬೇಕು ಎಂದು ಬಿಎಂಆರ್ ಸಿಎಲ್ ವಿನಂತಿ ಮಾಡಕೊಂಡಿದೆ.
ಎಲ್ಲಿಲ್ಲಿ ಸೇವೆಗಳು ಲಭ್ಯ..?
ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಚಲ್ಲಘಟ್ಟ ಮತ್ತು ಮಾಗಡಿ ರಸ್ತೆ ನಡುವೆ ಹಾಗೂ ಎಂಜಿ ರಸ್ತೆ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ ರೈಲು ಸೇವೆಗಳು ಎಂದಿನಂತೆ ಬೆಳಿಗೆ 7 ಗಂಟೆಗೆ ಪ್ರಾರಂಭವಾಗುತ್ತವೆ .
ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ರೈಲುಗಳ ಸೇವೆಗಳು ನಿಗದಿತ ಸಮಯ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ. ಪ್ರಯಣಿಕರು ಮತ್ತೋಂದು ಬದಲಾವಣೆಯನ್ನು ಕಾಣಬಹುದು. ನಮ್ಮ ಮೆಟ್ರೋ ಪಯಾಣಿಕರು ಸದರಿ ಬದಲಾವಣೆಯನ್ನು ಗಮನಿಸ ಬೇಕೆಂದು ಕೋರಿದೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ಕ್ಷೇಮೆ ಇರಲೇ ಎಂದು ಎಕ್ಸ್ ಖಾತೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮಾಹಿತಿಯನ್ನು ತಿಳಿಸಿದೆ.
ಎಲ್ಲಿಲ್ಲೆ ಮೆಟ್ರೋ ಬಂದ್ ಆಗಲಿದೆ..?
ನಮ್ಮ ಮೆಟ್ರೋ ಕಬ್ಬನ್ ಪಾರ್ಕ್, ಡಾ. ಬಿಆರ್ ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ಪರ್ಪಲ್ ಲೈನ್), ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಮೂರು ಗಂಟೆಗಳ ಕಾಲ ಮುಚ್ಚಲ್ಪಡುತ್ತವೆ ಎಂದು ಬಿಎಂಆರ್‌ಸಿಎಲ್ ಅಧಿಕೃತವಾಗಿ ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://twitter.com/OfficialBMRCL/status/1898004773019799825
ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಪ್ರಯಾಣಿಸಲು ಬೆಳಿಗ್ಗೆ 7 ರಿಂದ 10 ರವರೆಗೆ ಕ್ಯೂಆರ್ ಟಿಕೆಟ್‌ಗಳು ಮತ್ತು ಟೋಕನ್‌ಗಳನ್ನು ಖರೀದಿಸದಂತೆ ಪ್ರಯಾಣಿಕರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.


Click it and Unblock the Notifications