ಬೆಂಗಳೂರು: ವೇಗ ಮತ್ತು ದಕ್ಷ ಸೇವೆಯಿಂದಾಗಿ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಭಾರೀ ಜನಪ್ರಿಯತೆಯನ್ನು ಹೊಂದಿದೆ. ಸರಿಯಾದ ಸಮಯದ ಪ್ರಯಾಣದ ಮೂಲಕ ಲಕ್ಷಾಂತರ ಜನರನ್ನು ತನ್ನತ್ತ ಆಕರ್ಷಿಸಿರುವ ಮೆಟ್ರೋ ರೈಲು ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಅತ್ತ ಬೆಲೆ ಏರಿಕೆಯಾದರೂ, ಪ್ರಯಾಣಿಕರ ಸಂಖ್ಯೆ ಮಾತ್ರ ಇನ್ನೂ ಇಳಿಕೆಯಾಗಿಲ್ಲ. ದಿನ ಹೋದಂತೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ನಲ್ಲಿ ಮೆಟ್ರೋ ರೈಲುಗಳು (Metro Trains) ಕಾರ್ಯಚರಿಸುತ್ತಿದೆ. ಇದೀಗ ಮತ್ತೊಂದು ಸಿಹಿ ಸುದ್ದಿ ಪ್ರಯಾಣಿಕರಿಗೆ ನೀಡಿದೆ.

ಹೌದು, ಇದೀಗ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಇದೀಗ ಬೆಂಗಳೂರಿನ ಗ್ರೀನ್ ಲೈನ್‌ಗೆ ಮತ್ತೊಂದು ರೈಲಿನ ಆಗಮನವಾಗಿದೆ. ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ನಿಂದ ತಯಾರಿಸಲಾದ 6 ಕೋಚ್‌ಗಳ DTG ರೈಲಯ ಗ್ರೀನ್ ಲೈನ್‌ಗೆ ಆಗಮಿಸಿದೆ. ಈ ಮೂಲಕ ಕೊನೆಗೂ ಭಾರತ ಅಭಿವೃದ್ಧಿಪಡಿಸಿದ ತನ್ನ ಮೊದಲ ರೈಲನ್ನು ತಲುಪಿಸಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಕಳೆದ ತಿಂಗಳು ಫೆಬ್ರವರಿ 18 ರಂದು ರವಾನಿಸಲಾಗಿದ್ದ, ಈ ಆರು ಕೋಚ್‌ಗಳನ್ನು ಹೊಂದಿದ್ದ ಮೆಟ್ರೋ ರೈಲು ಇದೀಗ ಪೀಣ್ಯ ಡಿಪೋಗೆ ಬಂದು ತಲುಪಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (BMRCL) ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಈ ರೈಲು ಡ್ರೈವರ್‌ಲೆಸ್ ಟ್ರೈನ್ ಗಾರ್ಡ್ ಸಾಮರ್ಥ್ಯ ಹೊಂದಿದ್ದು, ಒಟ್ಟು 6 ಕೋಚ್‌ಗಳನ್ನು ಹೊಂದಿದೆ.
ಇದೀಗ ಆ ಎಲ್ಲಾ ಕೋಚ್‌ಗಳನ್ನು ಅನ್‌ಲೋಡ್ ಮಾಡಲಾಗಿದ್ದು, ಇದೀಗ ವಿದ್ಯುತ್ ಸರ್ಕ್ಯೂಟ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ರಾತ್ರಿ ವೇಳೆ ಈ ರೈಲು ಮೈನ್ ಲೈನ್‌ನಲ್ಲಿ 750 ಕಿ.ಮೀ ಪ್ರಾಯೋಗಿಕ ಓಡಾಟ ನಡೆಸಲಿದೆ ಎಂದು ಹೇಳಲಾಗಿದೆ. ಇನ್ನು ಟಿಆರ್‌ಎಸ್‌ಎಲ್ ಈ ತಿಂಗಳ ಕೊನೆಯಲ್ಲಿ ಮತ್ತೊಂದು ರೈಲನ್ನು ಕಳುಹಿಸುವ ನಿರೀಕ್ಷೆಯಿದೆ.
ಆದ್ದರಿಂದ ಈ ಎರಡು ರೈಲುಗಳ ಒಂದು ಕಾರ್ಯಾರಂಭ ಮಾಡಿದರೆ, 2025ರ ಜನವರಿಯಲ್ಲಿ ಬಂದಿದ್ದ ಚೀನಾ ನಿರ್ಮಿತ ಮಾದರಿಗಳೊಂದಿಗೆ ಕಾರ್ಯನಿರ್ವಹಿಸಲಿದೆ. ಆದ್ದರಿಂದ ಪೀಕ್ ಅವರ್‌ನಲ್ಲಿ ಜನದಟ್ಟಣೆ ಕಡಿಮೆ ಮಾಡಲಿದೆ. ಅಲ್ಲದೇ ಮೇ-ಜೂನ್ ಸಂದರ್ಭದಲ್ಲಿ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಈ ರೈಲುಗಳು ಸೇರ್ಪಡೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರೀನ್‌ನಲ್ಲಿ ವೇಗದಲ್ಲಿ ತಾತ್ಕಾಲಿಕ ನಿರ್ಬಂಧ:
ಆರ್‌ವಿ ರೋಡ್ ಮತ್ತು ಜಯನಗರ ನಿಲ್ದಾಣಗಳ ನಡುವೆ ತಾತ್ಕಾಲಿಕವಾಗಿ ವೇಗದಲ್ಲಿ ನಿರ್ಬಂಧ ಹೇರಲಾಗಿದೆ. ಈ ಪ್ರದೇಶದಲ್ಲಿ ಸಪೋರ್ಟ್ ಬೇರಿಂಗ್‌ಗಳನ್ನು ಬದಲಾಯಿಸಲಾಗುತ್ತಿದ್ದು, ಮೆಟ್ರೋ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗಾಗಿ ಇದನ್ನು ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ.
ಅಂತೂ ಮೆಟ್ರೋ ಲೈನ್‌ಗೆ ಮತ್ತೊಂದು ರೈಲಿನ ಆಗಮನವಾಗಿದ್ದು, ಇದರಿಂದ ಪ್ರಯಾಣಿಕರ ದಟ್ಟಣೆಯೂ ಕಮ್ಮಿಯಾಗಲಿದೆ. ಅಲ್ಲದೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಸಮಯ ಎಷ್ಟು ಇಳಿಕೆಯಾಗಲಿದೆ ಎಂದು ಕಾರ್ಯಾಚರಣೆ ಆರಂಭವಾದ ನಂತರ ಕಾದು ನೋಡಬೇಕಿದೆ.


Click it and Unblock the Notifications