ಮೆಟ್ರೋ ರೈಲು ಪ್ರಯಾಣಿಕರೇ ಇಲ್ಲಿ... ಇಲ್ಲಿದೆ ನಿಮ್ಮಗೊಂದು ಸಿಹಿ ಸುದ್ದಿ... ಹೌದು,ಇನ್ಮುಂದೆ ಟಿಕೆಟ್‌ಗಾಗಿ ಕಾಯುವಂತಹ ಅನಿವಾರ್ಯವಂತೂ ಇಲ್ಲವೇ ಇಲ್ಲ.. ಯಾಕೆಂದರೆ ಮೆಟ್ರೋ ರೈಲು ನಿಗಮವು ಹೊಸ ಕ್ಯೂ.ಆರ್ ಟಿಕೆಟ್ ಯಂತ್ರಗಳನ್ನು ಪರಿಚಯಿಸಿದೆ. ಇದರ ಮೂಲಕ ನೀವು ಸುಲಭವಾಗಿ ಟಿಕೆಟ್ ಪಡೆದುಕೊಳ್ಳಬಹುದು. ಇದರ ನಿಮ್ಮ ಸಮಯ ಕೂಡ ಉಳಿತಾಯವಾಗುತ್ತದೆ. ಹಾಗಿದ್ರೆ ಯಾವೆಲ್ಲಾ ನಿಲ್ದಾಣದಲ್ಲಿ ಹೊಸ ಕ್ಯೂ.ಆರ್ ಟಿಕೆಟ್ ಯಂತ್ರವಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಮೆಟ್ರೋ ರೈಲು ನಿಗಮ (BMRCL) ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 10 ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಅಳವಡಿಸಿದೆ. ಪ್ರತಿ ಯಂತ್ರವು 30 ಸೆಕೆಂಡುಗಳಲ್ಲಿ ಟಿಕೆಟ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಪ್ರಯಾಣಿಕರು ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲದೆ ವೇಗವಾಗಿ ಟಿಕೆಟ್‌ನ್ನು ಪಡೆದುಕೊಳ್ಳಬಹುದು.

ಈ ರೀತಿಯ ಹೊಸ ತಂತ್ರಜ್ಞಾನ ಅಳವಡಿಕೆ ಪ್ರಯಾಣಿಕ ಅನುಭವವನ್ನು ಹೆಚ್ಚು ಮಾಡುತ್ತದೆ. ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುತ್ತದೆ. ಒಂದು ತಾಸಿನಲ್ಲಿ ಪ್ರತಿ ಯಂತ್ರ ಸುಮಾರು 120 ಟಿಕೆಟ್‌ಗಳನ್ನು ನೀಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.
ಜನದಟ್ಟಣೆ ನಿಯಂತ್ರಣ
ಮೆಟ್ರೋ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಅವಧಿಯಲ್ಲಿ (ಉದಾ: ಬೆಳಿಗ್ಗೆ ಮತ್ತು ಸಂಜೆ) ಜನಸಂದಣಿ ಜಾಸ್ತಿ ಇರುತ್ತದೆ. ಈ ಸಂದರ್ಭಗಳಲ್ಲಿ ಟಿಕೆಟ್ ಕೌಂಟರ್‌ಗಳ ಮುಂದೆ ದೀರ್ಘ ಸರತಿ ಸಾಲುಗಳು ನಿರ್ಮಾಣವಾಗುವುದು ಸಾಮಾನ್ಯ. ಈ ಸಮಸ್ಯೆಯನ್ನು ತಪ್ಪಿಸಲು ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ವೇಗವಾಗಿ ಹಾಗೂ ಸುಲಭವಾಗಿ ಟಿಕೆಟ್ ನೀಡುವ ಉದ್ದೇಶದಿಂದ ಈ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಅಳವಡಿಕೆ ಮಾಡಲಿದೆ.
ಕೆಲವೇ ಕ್ಲಿಕ್ ಗಳಲ್ಲಿ ಟಿಕೆಟ್
ಸ್ವಯಂ ಸೇವಾ ಟಿಕೆಟ್ ಯಂತ್ರದ ಮೂಲಕ ನೀವು ಮೂರು ಅಥವಾ ನಾಲ್ಕು ಕ್ಲಿಕ್‌ನಲ್ಲಿ ಬಹುಬೇಗನೆ ಸುಲಭವಾಗಿ ಟಿಕೆಟ್ ಪಡೆಯಬಹುದು.ಇದರ ಮೂಲಕ ಮೆಟ್ರೋ ಪ್ರಯಾಣಿಕರು ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆದುಕೊಳ್ಳಬಹುದು ಎಂದು ಬಿಎಂಆರ್‌ಸಿಎಲ್ (BMRCL) ಮಾಹಿತಿಯನ್ನು ತಿಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ, ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಉತ್ತಮಪಡಿಸಲು ಮತ್ತು ಡಿಜಿಟಲ್ ಹೊಸ ತಂತ್ರಜ್ಞಾನ ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ಹೊಸ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದೆ.
ಸ್ವಯಂ ಸೇವಾ ಟಿಕೆಟ್ ಯಂತ್ರಗಳಿಂದ ನಮ್ಮ ಮೆಟ್ರೋ ಸೇವೆಗಳನ್ನು ಸುಗಮವಾಗಿ ಮತ್ತು ಆಧುನಿಕ ಪಾವತಿ ವಿಧಾನಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುವ ಮಹತ್ವದ ಹೆಜ್ಜೆಯನ್ನು ಬಿಎಂಆರ್ ಸಿಎಲ್ ಒಳಗೊಂಡಿದೆ.
ಈ ಯಂತ್ರಗಳ ವಿಶೇಷತೆ
QR-ಆಧಾರಿತ ಟಿಕೆಟ್ ವಿತರಣೆಯ ಸುಲಭ: ಯಂತ್ರಗಳು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ತ್ವರಿತವಾಗಿ ನೀಡುತ್ತವೆ, ಇದರಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅವಶ್ಯಕತೆ ಇಲ್ಲ.
ಸಂಪರ್ಕರಹಿತ ವ್ಯವಸ್ಥೆ: ಟಿಕೆಟ್ ಪಡೆಯುವ ಪ್ರಕ್ರಿಯೆ ಸಂಪೂರ್ಣವಾಗಿ ಸಂಪರ್ಕರಹಿತವಾಗಿದ್ದು, ಕೋವಿಡ್ ನಂತರದ ಯುಗದಲ್ಲಿ ಆರೋಗ್ಯದ ದೃಷ್ಟಿಯಿಂದ ಹಿತಕರವಾಗಿದೆ.
ಪರಿಸರ ಸ್ನೇಹಿ ಕ್ರಮ: ಪ್ಲಾಸ್ಟಿಕ್ ಅಥವಾ ಲೋಹದ ಟೋಕನ್‌ಗಳನ್ನು ಬದಲಾಯಿಸಿ, ಈ ಟಿಕೆಟ್‌ಗಳು ಪೇಪರ್ ಆಧಾರಿತವಾಗಿರುವುದರಿಂದ ಇದು ಪರಿಸರದ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ.
ಅಳವಡಿಕೆಯ ಸುಲಭತೆ: ಈ ಟಿಕೆಟ್‌ಗಳನ್ನು ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳಲ್ಲಿ ಸ್ಕಾನ್ ಮಾಡಿ ಬಳಸದ Ticket ಬಳಕೆಯು ಸುಲಭವಾಗಿದೆ.
ಸ್ವಚ್ಛತೆ ಕಾಪಾಡುವ ಕ್ರಮ: ಪ್ರಯಾಣ ನಂತರ ಟಿಕೆಟ್‌ಗಳನ್ನು ನಿಗದಿತ ಡಬ್ಬಿಗಳಲ್ಲಿ ಹಾಕುವಂತೆ ಮನವಿ ಮಾಡಿರುವುದು ನೈರ್ಮಲ್ಯ ಕಾಪಾಡಲು ಅನುಕೂಲವಾಗುತ್ತದೆ.
QR ಟಿಕೆಟ್ ಪಡೆಯುವ ಕ್ರಮ
ನಿಮ್ಮ ಗಮ್ಯಸ್ಥಾನ ಆಯ್ಕೆಮಾಡಿ:
ಟಿಕೆಟ್ ಯಂತ್ರದ ಸ್ಕ್ರೀನ್‌ನಲ್ಲಿ ಡ್ರಾಪ್-ಡೌನ್ ಮೆನು ಅಥವಾ ನಕ್ಷೆ (ಮ್ಯಾಪ್) ಮೂಲಕ ನೀವು ಹೋಗಬೇಕಾದ ನಿಲ್ದಾಣವನ್ನು ಆಯ್ಕೆಮಾಡಿ.
ನಂತರ, ಪ್ರಯಾಣಿಕರ ಸಂಖ್ಯೆ (ಎಷ್ಟು ಜನರು ಹೋಗುತ್ತಾರೆ) ನಮೂದಿಸಿ.
ಯಂತ್ರವು ಟಿಕೆಟ್ ಶುಲ್ಕ (Fare) ಅನ್ನು ತೋರಿಸುತ್ತದೆ.
ಟಿಕೆಟ್ ಪಾವತಿ ಪ್ರಕ್ರಿಯೆ
ಯಂತ್ರವು ಯುಪಿಐ ಆಧಾರಿತ ಪಾವತಿಗೆ ಅವಕಾಶ ನೀಡುತ್ತದೆ (PhonePe, Google Pay, Paytm ಇತ್ಯಾದಿ).
ಯಂತ್ರದಲ್ಲಿ ತೋರಿಸುವ ಯುಪಿಐ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಪಾವತಿ ಯಶಸ್ವಿಯಾದ ನಂತರ, ಯಂತ್ರವು ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಅನ್ನು ಮುದ್ರಿಸಿ ನಿಮ್ಮಗೆ ನೀಡುತ್ತದೆ.


Click it and Unblock the Notifications