Namma Metro Pink line: ಬೆಂಗಳೂರಿನ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮೆಟ್ರೋ (Namma Metro) ರೈಲುಗಳ ಜಾಲಗಳು ವಿಸ್ತರಣೆಯಾಗುತ್ತಲೇ ಇದೆ. ಪಿಂಕ್ ಲೈನ್ ಮೆಟ್ರೋ ಮೊದಲ ಹಂತದ ಚಾಲಕ ರಹಿತ ರೈಲು ಓಡಾಟ ಸೇವೆಯನ್ನು ಯಾವಾಗ ಆರಂಭವನ್ನು ಮಾಡಲಾಗುತ್ತದೆ ಎಂದು ಇದೀಗ ಬಿಎಂಆರ್ ಸಿಎಲ್(BMRCL) ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದೆ.
ಹೌದು,ಬಹುನಿರೀಕ್ಷಿತ ಚಾಲಕರಹಿತ ಹಳದಿ ಮಾರ್ಗದ ಸಂಚಾರ ವಿಳಂಬವಾಗುತ್ತಿದೆ. ಆದರೆ ಗುಲಾಬಿ ಬಣ್ಣದ (Pink line Metro) ಚಾಲಕರಹಿತ ರೈಲು ಸಂಚಾರ ಡಿಸೆಂಬರ್ 2025ರ ವೇಳೆಗೆ ರೈಲು ಸಂಚಾರ ಆರಂಭಿಸಲಿದೆ.ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಾಹಿತಿಯನ್ನು ತಿಳಿಸಿದೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಒಟ್ಟು 18 ನಿಲ್ದಾಣಗಳಲ್ಲಿ ಮೊದಲ ಹಂತಕ್ಕೆ 6 ನಿಲ್ದಾಣಗಳಲ್ಲಿ ಮಾತ್ರ ಚಾಲಕರಹಿತ ರೈಲುಗಳು ಸಂಚಾರವನ್ನು ಮಾಡುತ್ತಾದೆ ಎಂದು ಬಿಎಂಆರ್‌ಸಿಎಲ್ ಮಾಹಿತಿಯನ್ನು ಸ್ಪಷ್ಟಪಡಿಸಿದೆ.
ಗುಲಾಬಿ ಮಾರ್ಗದ ಮೆಟ್ರೋ
ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಚಾಲಕರಹಿತ ಸಂಚಾರ 21.25 ಕಿ.ಮೀ ಉದ್ದವಾದ ವಿಸ್ತರಣೆಯನ್ನು ಹೊಂದಿದೆ.ಒಟ್ಟು ಈ ಮಾರ್ಗದಲ್ಲಿ 18 ಮೆಟ್ರೋ ನಿಲ್ದಾಣಗಳಿವೆ. ಅವುಗಳಲ್ಲಿ 6 ಎಲಿವೇಟೆಡ್ ಮತ್ತು 12 ಅಂಡರ್‌ಗ್ರೌಂಡ್ ನಿಲ್ದಾಣಗಳನ್ನು ಮಾರ್ಗವು ಒಳಗೊಂಡಿದೆ. ಈ ಮಾರ್ಗದಿಂದ ಹಳದಿ ಮಾರ್ಗಕ್ಕೆ ಹೋಗುವ ರೈಲುಗಳ ಪ್ರಾಯೋಗಿಕ ಸಂಚಾರ ನಡಯುತ್ತಿದೆ. ಡಿಸೆಂಬರ್ ಹೊತ್ತಿ ಚಾಲಕ ರಹಿತ ಗುಲಾಬಿ ಬಣ್ಣದ ಮೆಟ್ರೋ ಸಾರ್ವಜನಿಕ ಸಂಚಾರಕ್ಕೆ ಸೇವೆಗಳು ಲಭ್ಯವಿರುತ್ತಾವೆ.
ಈಗಾಗಲೇ ಕಾಳೇನ ಅಗ್ರಹಾರದಿಂದ ಸ್ವಾಗತ್ ಕ್ರಾಸ್ ವರೆಗಿನ ಎಲಿವೇಟೆಡ್ ಮೆಟ್ರೋ ನಿಲ್ದಾಣಗಳ ಕಾಮಗಾರಿ ಮುಗಿದಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಮೊದಲ ಹಂತದಲ್ಲಿ ಈ ನಿಲ್ದಾಣಗಳ ನಡುವೆ ಚಾಲಕರಹಿತ ರೈಲುಗಳನ್ನು ಓಡಾಟ ಮಾಡಲಿದೆ. ಸ್ವಾಗತ್ ಕ್ರಾಸ್‌ನಿಂದ ನಾಗವಾರದವರೆಗಿನ 12 ಅಂಡರ್‌ಗ್ರೌಂಡ್ ನಿಲ್ದಾಣಗಳ ಕಾಮಗಾರಿ ಪ್ರಗತಿ ಇದೆ.
16 ಚಾಲಕರಹಿತ ಮೆಟ್ರೋ ರೈಲುಗಳು ಸಿದ್ಧ
ಈ ಮಾರ್ಗಕ್ಕಾಗಿ ಈಗಾಗಲೇ ಬೆಮೆಲ್ (ಸಂಸ್ಥೆಯಲ್ಲಿ 16 ಚಾಲಕರಹಿತ ರೈಲುಗಳು ಸಿದ್ಧವಾಗುತ್ತಿವೆ. ಮೊದಲ ರೈಲು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಂತರ, ಪ್ರತಿ ತಿಂಗಳು ಎರಡು ಚಾಲಕರಹಿತ ರೈಲುಗಳು ಬರುತ್ತೇವೆ.
ಈ ಮಾರ್ಗದಲ್ಲಿ ಮೆಟ್ರೋ ಬಂದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ ಈ ಮಾರ್ಗದಲ್ಲಿ ಬರುವ ಬನ್ನೇರುಘಟ್ಟ ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಗೆ ಕೂಡ ಮುಕ್ತಿ ಸಿಗಬಹುದು. ಮೆಟ್ರೋ ಮಾರ್ಗವು ನಾಗವಾರದವರೆಗೂ ವಿಸ್ತರಣೆಯಾಗುತ್ತಿರುವುದರಿಂದ, ನಗರದ ಹಲವು ಭಾಗಗಳಿಗೆ ಸಂಪರ್ಕಕಿಸುವುದರಿಂದ ಸಾರಿಗೆ ವ್ಯವಸ್ಥೆಯ ದಟ್ಟಣೆ ಕೂಡ ಕಡಿಮೆಯಾಗುತ್ತದೆ.
ಗುಲಾಬಿ ಮಾರ್ಗದ ಎರಡನೇ ಹಂತ
ಪಿಂಕ್ ಲೈನ್ ಎರಡನೇ ಹಂತದ ಮಾರ್ಗಗಳು ಡೈರಿ ಸರ್ಕಲ್‌ನಿಂದ ನಾಗವಾರವರೆಗೆ 13.76 ಕಿಮೀ ಉದ್ದ 12 ನಿಲ್ದಾಣಗಳು, ಬಹುತೇಕ ಭೂಗತವಾಗಿವೆ ಈ ಮಾರ್ಗದ ಸಿವಿಲ್ ಕಾಮಗಾರಿ ಮೊದಲ ಹಂತದಲ್ಲಿ ಸಂಪೂರ್ಣ ಮುಕ್ತಾಯವಾಗಿದ್ದು, ಭೂಗತ ಮಾರ್ಗದಲ್ಲಿ ಕೂಡ ಕಾಮಗಾರಿ ಪೂರ್ಣಗಳುವ ಸಾಧ್ಯತೆ ಇರುತ್ತದೆ.
ಗುಲಾಬಿ ಮಾರ್ಗದ ಮೊದಲ ಹಂತದ ಮೆಟ್ರೋ ಸೇವೆಯ ಆರಂಭ..?
ಬಿಎಂಆರ್‌ಸಿಎಲ್ ಹೇಳಿರುವ ಪ್ರಕಾರ ಬರುವ ಡಿಸೆಂಬರ್ ವೇಳೆಗೆ ಮೊದಲ ಹಂತದ ಪಿಂಕ್ ಲೈನ್ ಮೆಟ್ರೋ ಸಂಚಾರವನ್ನು ಸೇವೆಯನ್ನು ಆರಂಭ ಮಾಡುತ್ತದೆ.
ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೊಟ್ರೋ ಜಾಲ ವಿಸ್ತರಣೆ ನಡೆಯುತ್ತಲೇ ಇದೆ. ಆದರೆ, ಕೆಲವೊಂದು ಮಾರ್ಗಗಳು ಹಲವು ಸವಾಲುಗಳಿಂದಾಗಿ ವಿಳಂಬವನ್ನು ಎದುರಿಸುತ್ತಿವೆ. ಎಲ್ಲಾ ಮಾರ್ಗದಲ್ಲಿ ಮೊಟ್ರೋ ಆರಂಭವಾದ್ದರೆ ಸಂಚಾರ ದಟ್ಟಣೆ ಕಡಿಮೆಯಾಗಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.


Click it and Unblock the Notifications