ಮೊದಲೇ ಪ್ರಯಾಣ ದರ ಏರಿಕೆ.. ಇದೀಗ ಮತ್ತೆ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಕತ್ತರಿ.. ಇದು BMRCL ದುರಾಸೆಗೆ ಹಿಡಿದ ಕೈಗನ್ನಡಿ! ಹೌದು, ಮೆಟ್ರೋ ಟಿಕೆಟ್ ದರ ಏರಿಕೆಯ ಬಿಸಿಯಿಂದ ತತ್ತರಿಸಿದ್ದ ಪ್ರಯಾಣಿಕರಿಗೆ ಮತ್ತಷ್ಟು ಬೆಲೆ ಏರಿಕೆಯನ್ನು ಹೊರೆಸಲು ಬಿಎಂಆರ್‌ಸಿಎಲ್ ಮುಂದಾಗಿರುವಂತೆ ಕಾಣುತ್ತಿದೆ. ಇನ್ಮುಂದೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆ ಕೂಡ 'ಫ್ರೀ' ಇರಲ್ಲ. ಈಗಾಗಲೇ ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) 12 ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಪಾವತಿಸಿದ ಪ್ರವೇಶವನ್ನು ಪರಿಚಯಿಸಿದ್ದು, ಪ್ರಯಾಣಿಕರು ಮತ್ತು ಉದ್ಯೋಗಿ ಭಾರೀ ವಿರೋಧ ವ್ಯಕಪಡಿಸುತ್ತಿದ್ದಾರೆ.
ನಮ್ಮ ಮೆಟ್ರೋ ಜಾರಿ ಬಂದಗಿನಿಂದಲ್ಲೂ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಶೌಚಾಲಯ ವ್ಯವಸ್ಥೆ ಇತ್ತು. ಆದರೆ ಬಿಎಂಆರ್ ಸಿ ಎಲ್ ಈ ಮೂಲಕವು ಸಹ ಹಣ ವಸೂಲಿ ಮಾಡಲು ನಿಂತಿದೆ. ಈ ಬಗ್ಗೆ ಈಗಾಗಲೇ ಬಿಎಂಆರ್‌ಸಿಎಲ್ ಖಾಸಗಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದೆ ಇನ್ನು ಮುಂದೆ ಆ ಸಂಸ್ಥೆಯೇ ಮೆಟ್ರೋ ನಿಲ್ದಾಣಗಳ ಶೌಚಾಲಯಗಳನ್ನು ನಿರ್ವಹಣೆ ಮಾಡಲಿದೆ.

ಬಿಎಂಆರ್ ಸಿಎಲ್ ಸುಲಭ್ ಶೌಚಾಲಯ ಸಂಸಥೆಯ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ನಿಲ್ದಾಣಗಳ ಪಾವತಿಸದ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿರುವ ಶೌಚಾಲಯಗಳನ್ನು ಸುಲಭ್ ಇಂಟರ್ನ್ಯಾಷನಲ್‌ಗೆ ಹಸ್ತಾಂತರಿಸಲಾಗಿದೆ, ಅದು ಈಗ ಅವುಗಳನ್ನು ನಿರ್ವಹಿಸುತ್ತದೆ ಮತ್ತು ಬಳಕೆದಾರರ ಶುಲ್ಕವನ್ನು ಸಂಗ್ರಹಿಸುತ್ತದೆ.
ದರ ನಿಗದಿ ಯಾವ ಮೆಟ್ರೋ ನಿಲ್ದಾಣದಲ್ಲಿ..?
ಪ್ರಮುಖ ಮೆಟ್ರೋ ನಿಲ್ದಾಣಗಳಾದ ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ್ ನಗರ, ಯಲಚೇನಹಳ್ಳಿ, ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ - ಸೆಂಟ್ರಲ್ ಕಾಲೇಜು, ಡಾ ಬಿಆರ್ ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ರೈಲ್ವೆ ನಿಲ್ದಾಣಗಳ ಮೇಲೆ ಪರಿಣಾಮ ಬೀರುತ್ತದೆ.
ದರ ಎಷ್ಟು?
ಮೂತ್ರ ವಿಸರ್ಜನೆಗೆಳ: 2 ರೂ
ಮಲ ವಿಸರ್ಜನೆಗೆ: 5 ರೂ
ಮೆಟ್ರೋ ಪ್ರಯಾಣಿಕರು ಮಾತ್ರವಲ್ಲದೆ, ಸಾರ್ವಜನಿಕರು ಹೆಚ್ಚಾಗಿ ಬಳಸುವ ಸೌಲಭ್ಯಗಳ ಉತ್ತಮ ನಿರ್ವಹಣೆಯನ್ನು ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಸಾರ್ವಜನಿಕರ ವಿರೋಧ
ಹೊಸ ಶುಲ್ಕ ರಚನೆ ಬಗ್ಗೆ ಸಾರ್ವಜನಿಕರ ವಿರೋಧಕ್ಕೆ ಬಿಎಂಆರ್ ಸಿಎಲ್ ಕಾರಣವಾಗಿದೆ. ಪತ್ರಿನಿತ್ಯ ಓಡಾಟ ಮಾಡುವವರಿಗೆ ಹೆಚ್ಚಿನ ಹೊರೆಯಾಗುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇತ್ತೀಚೆಗೆ ಮೆಟ್ರೋ ಟಿಕೆಟ್ ದರಗಳನ್ನು ಹೆಚ್ಚಿಸಿದ್ದು, ಈಗ ಶೌಚಾಲಯ ಬಳಸುವುದಕ್ಕೂ ದರ ನಿಗದಿಪಡಿಸಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಅಗತ್ಯ ಮೂಲಭೂತ ಸೌಲಭ್ಯಗಳ ಒದಗಿಸುವುದು ಬಿಎಂಆರ್‌ಸಿಎಲ್‌ನ ಕರ್ತವ್ಯ ಆದರೆ ಶೌಚಾಲಯಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಖಂಡಿಸಿದ್ದಾರೆ. ಬೆಲೆ ಏರಿಕೆಯಿಂದಾಗಿ ಸುಡುತ್ತಿರುವ ಕಾವಲಿಯಂತೆ ಆಗಿದ್ದಾರೆ.
ಮೆಟ್ರೋ ಕಾರ್ಡ್ ಅಥವಾ ಟೋಕನ್ ಸ್ವೈಪ್ ಮಾಡಿದ ನಂತರ ಮಾತ್ರ ಪ್ರವೇಶಿಸಬಹುದಾದ ಪಾವತಿಸಿದ ವಲಯಗಳೊಳಗಿನ ಶೌಚಾಲಯಗಳು ಎಲ್ಲಾ ಪ್ರಯಾಣಿಕರಿಗೆ ಉಚಿತವಾಗಿ ಉಳಿಯುತ್ತವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಪ್ರಕಟಣೆಯ ಪ್ರಕಾರ, ಸಾರ್ವಜನಿಕ ಪ್ರವೇಶ ಶೌಚಾಲಯಗಳ ಶುಲ್ಕಗಳು ದರ ಹೆಚ್ಚಳಕ್ಕೆ ಸಂಬಂಧಿಸಿಲ್ಲ ಮತ್ತು ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಮಾತ್ರ ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ, ನಿಗಮದ ಆದ್ಯತೆಗಳನ್ನು ಟೀಕಿಸಿದರು.ಆಡಳಿತ ಮಂಡಳಿಯು ಅನ್ಯಾಯದ ವೆಚ್ಚಗಳಿಗೆ ಲಕ್ಷಗಟ್ಟಲೆ ವ್ಯರ್ಥ ಮಾಡುತ್ತದೆ. ಶೌಚಾಲಯ ಶುಲ್ಕ ವಿಧಿಸುವ ಮೊದಲು, ಅವರು ವ್ಯವಸ್ಥೆಯಲ್ಲಿ ಸೋರಿಕೆಯನ್ನು ನಿಲ್ಲಿಸುವತ್ತ ಗಮನಹರಿಸಬೇಕು. ಇದು ಪ್ರಯಾಣಿಕರ ಹಿತಾಸಕ್ತಿಯಿಂದಲ್ಲ ಎಂದು ಹೇಳಿದ್ದಾರೆ.


Click it and Unblock the Notifications