ಮೆಟ್ರೋ ಟಿಕೆಟ್‌ಗೆ ಇನ್ಮುಂದೆ 'ಕ್ಯೂ' ನಲ್ಲಿ ನಿಲ್ಲುವಂತಹ ಅವಶ್ಯಕತೆ ಇಲ್ಲ..ಯಾಕೆಂದರೆ ಓಲಾ,ಉಬರ್, ರಾಪಿಡೋ ಅಪ್ಲಿಕೇಶನಲ್ಲಿ ಬುಕ್ ಮಾಡುವಂತೆ ಮೆಟ್ರೋ ಟಿಕೆಟ್‌ಗಳನ್ನು ಆ್ಯಪ್‌ಗಳ ಮೂಲಕ ಮಾಡಬಹುದು. ಇದರಿಂದ ಸಮಯದ ಉಳಿತಾಯದ ಜೊತೆಗೆ ಸರತಿ ಸಾಲಿನಲ್ಲಿ ನಿಲ್ಲುವದು ತಪ್ಪುತ್ತದೆ.
ಹೌದು,ನೀವು ಈಗಗಲೇ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡುವಂತೆ ಶೀಘ್ರದಲ್ಲೇ ರಾಪಿಡೊ ಮತ್ತು ಇತರ ಮೊಬಿಲಿಟಿ ಅಪ್ಲಿಕೇಶನ್‌ಗಳ ಮೂಲಕವು ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಬೆಂಗಳೂರು ಮೆಟ್ರೋ ಬಳಕೆದಾರರಿಗೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲು ಬಿಎಂಆರ್ ಸಿಎಲ್ ಮುಂದಾಗಿದೆ.

ಈಗಾಗಲೇ ರಾಪಿಡೋ ತನ್ನ ಅಪ್ಲಿಕೇಶನ್‌ನಲ್ಲಿ ಮೆಟ್ರೋ ಟಿಕೆಟ್ ಬುಕಿಂಗ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಸಂಗ್ರಾಹಕರು ಸೇರುವ ನಿರೀಕ್ಷೆಯಿದೆ. ಈ ಏಕೀಕರಣವು ಬಳಕೆದಾರರಿಗೆ ಒಂದೇ ಅಪ್ಲಿಕೇಶನ್ ಮೂಲಕ ಆಟೋ-ರಿಕ್ಷಾಗಳು, ಕ್ಯಾಬ್‌ಗಳು ಮತ್ತು ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಂತಹ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡಲಿದೆ.
ರಾಪಿಡೋದ ಆಪ್ ಮೂಲಕ ಮೊದಲ ಮೆಟ್ರೋ ಟಿಕೆಟ್ ಬುಕ್ ಮಾಡುವವರಿಗೆ ಶೇಕಡಾ 20 ರಷ್ಟು ರಿಯಾಯಿತಿ ನೀಡಲು ಪ್ಲಾನ್ ಮಾಡಿಕೊಂಡಿದೆ. ಇದರ ಜೊತೆಗೆ ಮತ್ತೊಂದು ಮೊಬಿಲಿಟಿ ಸಂಸ್ಥೆಯಾದ ಟಮ್ಮೊಕ್ ಈಗಾಗಲೇ
ಬಿಎಂಟಿಸಿ ಬಸ್ ಪಾಸ್‌ಗಳನ್ನು ಸಹ ಒದಗಿಸುತ್ತದೆ. ಇದು ತನ್ನ ಆಪ್ ಮೂಲಕ ಮೆಟ್ರೋ ಟಿಕೆಟ್ ಬುಕಿಂಗ್ ಸೇವೆಯನ್ನು ಆರಂಭಿಸಲು ತಯಾರಿಯನ್ನು ನಡೆಸುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಪ್ಲಾಟ್‌ಫಾರ್ಮ್ ಮೂಲಕ ಎಂಡ್-ಟು-ಎಂಡ್ ಪ್ರಯಾಣ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ದತೆಗಳನ್ನು ನಡೆಸುತ್ತಿದ್ಧೇವೆ. ಬಳೆಕೆದಾದರು ಅವರಿಗೆ ಇಷ್ಟವಾದ ಆಪ್ಲಿಕೇಶನ್ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು 10ಕ್ಕೂ ಹೆಚ್ಚು ಮೊಬಿಲಿಟಿ (ಸಂಚಾರ) ಅಪ್ಲಿಕೇಶನ್‌ಗಳನ್ನು ಬಳಸಬಹುದು. ಯಾವುದೇ ಆಪ್ಲಿಕೇಶನ್ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು ONDC ಅನುವು ಮಾಡಿಕೊಡುತ್ತದೆ.
ನಮ್ಮ ಮೆಟ್ರೋ ಟಿಕೆಟ್‌ಗಳನ್ನು ಮುಂಬರುವ ದಿನಗಲ್ಲಿ ಗೂಗಲ್ ನಕ್ಷೆಗಳು (Google Maps), ನಮ್ಮ ಯಾತ್ರಿ (Namma Yatri) ಮತ್ತು ರೆಡ್‌ಬಸ್ (RedBus)ನಂತಹ ವೆಬ್ ತಾಣಗಳ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಖರೀದಿ ಮಾಡುವ ಸೌಲಭ್ಯ ದೊರೆಯುತ್ತದೆ ಎಂದು ವರದಿ ಆಗಿದೆ.
ನಾವು ಮುಂದಿನ ತಿಂಗಳು ಒಎನ್‌ಡಿಸಿ (ONDC - Open Network for Digital Commerce) ಪಾಲುದಾರಿಕೆಯನ್ನು ಅಧಿಕೃತವಾಗಿ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಯೋಜಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ಸರಳವಾಗುತ್ತದೆ.
ಪ್ರಸ್ತುತ ಮೆಟ್ರೋ ಟಿಕೆಟ್ ಬುಕಿಂಗ್ ಮಾಡುವ ವಿಧಾನಗಳು
ಮೆಟ್ರೋ ನಿಲ್ದಾಣ
ನೀವು ಟೋಕನ್‌ಗಳನ್ನು ಖರೀದಿ ಮಾಡಬೇಕು: ನೀವು ಮೆಟ್ರೋದಲ್ಲಿ ಪ್ರಯಾಣ ಮಾಡಲು ಮೊದಲು ಟಿಕೆಟ್ ಕೌಂಟರ್ ಬಳಿ ಹೋಗಿ ಮೆಟ್ರೋ ಟೋಕನ್ ಖರೀದಿ ಮಾಡಿ ಸಂಚಾರ ಮಾಡಬಹುದು. ಅಥವಾ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಲ್ಲಿ ಸಹ ಟಿಕೆಟ್ ಪಡೆದುಕೊಳ್ಳಬಹುದು.
ಸ್ಮಾರ್ಟ್ ಕಾರ್ಡ್‌ಗಳ ಬಳಕೆ: ನೀವು ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದು ಅವುಗಳನ್ನು ರೀಚಾರ್ಜ್ ಮಾಡಿಕೊಂಡು ಮೆಟ್ರೋ ಸಂಚಾರ ಮಾಡಬಹುದು. ಬೆಂಗಳೂರಿನ ಬಹುತೇಕ ಮಂದಿ ಇದನ್ನೇ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ ಈ ಸ್ಮಾರ್ಟ್ ಕಾರ್ಡ್ ಒಮದು ಬಾರಿ ಖರೀದಿ ಮಾಡಿದ್ದರೆ ಸಾಕು. ನೀವು ಎಲ್ಲಿ ಪ್ರಯಾಣ ಮಾಡಿದ್ದರೂ ಈ ಕಾರ್ಡ್‌ಗೆ ರೀಚಾರ್ಜ್ ಮಾಡಿಕೊಂಡು ವ್ಯಾಲಿಡಿಟಿ ಇರುವವರಿಗೆ ಉಪಯೋಗ ಮಾಡಿಕೊಳ್ಳಬಹುದು. ಸ್ಮಾರ್ಟ್ ಕಾರ್ಡ್‌ಗಳಿಗೆ ಆಗ್ಗಾಗೆ ಆಫರ್‍ಗಲು ಸಹ ಇರುತ್ತದೆ.
ನಮ್ಮ ಮೆಟ್ರೋ ಅಪ್ಲಿಕೇಶನ್: BMRCL ನ ಅಧಿಕೃತ "ನಮ್ಮ ಮೆಟ್ರೋ" ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು QR ಕೋಡ್ ಆಧಾರಿತ ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ನಿಮ್ಮ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು
ವಾಟ್ಸಾಪ್ ಮೂಲಕವು ಟಿಕೆಟ್ ಬುಕ್ ಮಾಡಬಹುದು: ಎಂಆರ್ ಸಿಎಲ್ ಅಧಿಕೃತ ವಾಟ್ಸಾಪ್ ಚಾಟ್‌ಬಾಟ್ ಸಂಖ್ಯೆ (+91 8105556677)ಅನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಂಡು ಸಂಭಾಷಣೆಯನ್ನು ಮಾಡುವ ಮೂಲಕ ಮೆಟ್ರೋ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications