ಹಳದಿ ಮಾರ್ಗ ಇನ್ನಷ್ಟು ವಿಳಂಬ.. ಬಹುನಿರೀಕ್ಷಿತ ಚಾಲಕ ರಹಿತ ಮೆಟ್ರೋ ಯಾವಾಗ ಶುರುವಾಗುತ್ತದೆ ಎಂದು ಕಾದು ಕೂತವರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ದೊಡ್ಡ ಅಪ್ಡೇಟ್‌ವೊಂದನ್ನು ಕೊಟ್ಟಿದೆ.
ಹೌದು,ಈ ಹಿಂದೆ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಜೂನ್ ತಿಂಗಳ ಮೊದಲ ವಾರದಲ್ಲಿ ಶುರುವಾಗುತ್ತದೆ ಎಂದು ಬಿಎಂಆರ್ ಸಿಎಲ್ ಹೇಳಿತ್ತು ಆದರೆ ಇನ್ನೂ ಎರಡು ತಿಂಗಳ ಕಾಲ ಸಂಚಾರವನ್ನು ಆರಂಭಿಸಲು ವಿಳಂಬ ವಾಗುತ್ತದೆ ಎಂದು ಹೇಳಿದೆ. ಹಾಗಿದ್ದರೆ ಯಾವಾಗ ಹಳದಿ ಮಾರ್ಗ ಸಂಚಾರವನ್ನು ಆರಂಭ ಮಾಡುತ್ತದೆ..? ವಿಳಂಬಕ್ಕೆ ಕಾರಣವೇನು ಎಂಬುವಿದನ್ನು ತಿಳಿಯಲು ಮುಂದೆ ಓದಿ..

ಬೆಂಗಳೂರಿನ ಜನರಿಗೆ ದೊಡ್ಡ ಸಮಸ್ಸೆಯೆಂದರೆ ಟ್ರಾಫಿಕ್ ಕಿರಿಕಿರಿ... ಇದನ್ನು ಕೊಂಚ ಕಡಿಮೆ ಮಾಡಿದ್ದು ನಮ್ಮ ಸಂಚಾರ ಜೀವನಾಡಿ ನಮ್ಮ ನಮ್ಮ ಮೆಟ್ರೋ.. ನಮ್ಮ ಮೆಟ್ರೋ ಮಾತ್ರ ಉತ್ತಮ ಸೇವೆ ಜನನರಿಗೆ ಅಚ್ಚುಮೆಚ್ಚು. ಬೆಂಗಳೂರಿನ ಅರ್ಧಕ್ಕೂ ಹೆಚ್ಚಿನ ಹೆಚ್ಚಿನ ಜನರು ಮೆಟ್ರೋವನ್ನು ಅವಲಂಭಿಸಿಕೊಂಡಿದ್ದಾರೆ. ನಮ್ಮ ಮೆಟ್ರೋ ತನ್ನ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲು ಹಳದಿ ಮಾರ್ಗ, ಗುಲಾಬಿ ಮಾರ್ಗ, ನೀಲಿ ಮಾರ್ಗದಲ್ಲಿ ಕಾರ್ಯ ನಿವಘಹಿಸುತ್ತಿದೆ. ಬೇಸರದ ಸಂಗತಿ ಎಂದರೆ ಕಳೆದ ವರ್ಷದಿಂದ ಚಾಲಕ ರಹಿತ ಮೆಟ್ರೋ ಓಡಾಟವನ್ನು ನೋಡಲು ಜನರು ಕಾತುರದಿಂದ ಕಾಯುತ್ತಲೇ ಇದ್ದ ಪ್ರತಿ ಸಲನ್ನೂ ಕೂಡ ಬೇಸರವನ್ನು ಹಳದಿ ಮೆಟ್ರೋ ತಂದಿದೆ. ಸದ್ಯ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಮೆಟ್ರೋ ಮಾರ್ಗ ಯಾವಾಗ ಆರಂಭವಾಗುತ್ತದೆಯೆಂದು ಎಂಬುವುದೇ ಕುತೂಹಲ.
ಹಳದಿ ಮಾರ್ಗದ ಮೆಟ್ರೋ ವಿಳಂಬವಾಗುತ್ತಿರೋವುದು ಏತಕ್ಕೆ..?
ಸಾರ್ವಜನಿಕರ ಟೀಕೆ ಹಾಗೂ ಆಕ್ರೋಶದ ನಡುವೆಯೂ ಆದಷ್ಟು ಬೇಗ ಮಾರ್ಗವನ್ನು ತೆರೆಯಬೇಕೆಂಬ ಒತ್ತಡ ಬಿಎಂಆರ್‌ಸಿಎಲ್ ಮೇಲಿದೆ. ಆದರೆ ಇನ್ನೂ ಕೆಲವು ಪರಿಶೀಲನಾ ಕಾರ್ಯಗಳು ನಡೆಯಬೇಕಿದೆ. ಈ ಕುರಿತು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದ್ದು, ಹಳದಿ ಮಾರ್ಗದ ಮೆಟ್ರೋ ಇನ್ನೂ ಎರಡು ತಿಂಗಳು ವಿಳಂಬವಾಗಲಿದೆ ಎಂದು ಮಾಹಿತಿಯನ್ನು ತಿಳಿಸಿದೆ. ಹೀಗಾಗಿ, ಕಾಯುವಿಕೆ ಅನಿವಾರ್ಯವಾಗಿದೆ.
ಆಗಸ್ಟ್ ಮೊದಲ ವಾರ ಸಂಚಾರ ಆರಂಭವಾಗುತ್ತಾ..?
ಚಾಲಕ ರಹಿತ ಮೆಟ್ರೋ ಸಂಚಾರಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಹಳದಿ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡರೂ ರೈಲುಗಳ ಆಗಮನ ವಿಳಂಬವಾಗಿತ್ತು.ಈಗ ಸದ್ಯ ಮೂರು ರೈಲುಗಳು ಬಂದಿದ್ದು, ಅವುಗಳ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತಿದೆ.
ರೈಲು ಮಾರ್ಗದ ಪರಿಶೀಲನೆ
ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳು ಶೀಘ್ರದಲ್ಲೇ ಈ ಮಾರ್ಗದ ಪರಿಶೀಲನೆಯನ್ನು ಕೈಗೊಳ್ಳಲಿದ್ದಾರೆ. ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಂಡ ನಂತರ, ಈ ರೈಲುಗಳು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಿದೆ.ಈ ಹೊಸ ತಂತ್ರಜ್ಞಾನವು ರೈಲ್ವೆ ಸಾರಿಗೆಯಲ್ಲಿ ಕ್ರಾಂತಿಯನ್ನುಂಟುಮಾಡುವ ನಿರೀಕ್ಷೆಯಿದೆ.
ಮಾರ್ಗ ಪರಿಶೀಲನೆಗೆ ಯೋಚನೆ
ಹಳದಿ ಮಾರ್ಗದ ರೈಲಿಗಳಿಗೆ ಸಿಗ್ನಲಿಂಗ್ ಪರೀಕ್ಷೆ ನಡೆಸಿ ಗ್ರೀನ್ ಸಿಗ್ನಲ್ ನೀಡಲಿದೆ. ಅದಾದ ಬಳಿಕ ಸರ್ಕಾರಗಳಿಗೆ ಪತ್ರ ಬರೆದು ಅನುಮತಿ ಪಡೆದು ಜುಲೈ ಅಂತ್ಯ ಅಐವಾ ಆಗಸ್ಟ್ ಮೊದಲ ವಾರದಲ್ಲಿ ಮೆಟ್ರೋ ಕಾರ್ಯಾಚರಣೆ ಮಾಡಲಿದೆ.
ಹಳದಿ ಮಾರ್ಗವನ್ನು ಬೇಗ ಶುರು ಮಾಡಿದರೆ ಆರ್‌ವಿ ರೋಡ್ ಹಾಗೂ ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗುತ್ತದೆ.
ನಿಲ್ದಾಣಗಳು ಯಾವುವು..?
ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್.ವಿ. ರಸ್ತೆ ಎಂಬ 16 ನಿಲ್ದಾಣಗಳಿವೆ.
ಬೊಮ್ಮಸಂದ್ರ-ಆರ್.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಸಂಚಾರ ಆರಂಭದಲ್ಲಿ ಮೂರು ರೈಲುಗಳು 30 ನಿಮಿಷಗಳಿಗೊಮ್ಮೆ ಕಾರ್ಯನಿರ್ವಹಿಸುತ್ತವೆ. ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರದ ಟರ್ಮಿನಲ್ ನಿಲ್ದಾಣಗಳ ಜೊತೆಗೆ ಐದು ಮುಖ್ಯ ನಿಲ್ದಾಣಗಳಲ್ಲಿ ಸೇವೆಗಳು ಲಭ್ಯವಿದೆ.


Click it and Unblock the Notifications